ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಜನಾಂಗೀಯ ನಿಂದನೆ: ಪ್ರತಿಭಟನೆಗೆ ಇಂಗ್ಲೆಂಡ್‌ ಚಿಂತನೆ

Last Updated 13 ಅಕ್ಟೋಬರ್ 2021, 15:28 IST
ಅಕ್ಷರ ಗಾತ್ರ

ಲಂಡನ್‌: ಟಿ20 ವಿಶ್ವಕಪ್‌ ಟೂರ್ನಿಯ ತನ್ನ ಮೊದಲ ಪಂದ್ಯದ ಆರಂಭಕ್ಕೂ ಮುನ್ನ ಜನಾಂಗೀಯ ನಿಂದನೆ ವಿರುದ್ಧದ ಹೋರಾಟಕ್ಕೆ ಬೆಂಬಲ ಸೂಚಿಸುವ ಸಲುವಾಗಿ ಮೊಣಕಾಲೂರುವ ಚಿಂತನೆ ಇದೆ ಎಂದು ಇಂಗ್ಲೆಂಡ್ ತಂಡದ ಮಧ್ಯಮ ವೇಗಿ ಕ್ರಿಸ್‌ ಜೋರ್ಡಾನ್ ತಿಳಿಸಿದ್ದಾರೆ.

ಇಂಗ್ಲೆಂಡ್ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ಎದುರು ಸೆಣಸಲಿದೆ. ಕೊನೆಯದಾಗಿಇಂಗ್ಲೆಂಡ್ 2020ರ ಆಗಸ್ಟ್‌ನಲ್ಲಿ ಐರ್ಲೆಂಡ್ ಎದುರಿನ ಏಕದಿನ ಪಂದ್ಯದ ಸಂದರ್ಭದಲ್ಲಿ ಮೊಣಕಾಲೂರಿ ಜನಾಂಗೀಯ ನಿಂದನೆ ವಿರುದ್ಧದ ಆಂದೋಲನಕ್ಕೆ ಬೆಂಬಲ ಸೂಚಿಸಿತ್ತು.

ಇದನ್ನು ಮುಂದುವರಿಸದೇ ಇದ್ದುದಕ್ಕೆ ವೆಸ್ಟ್ ಇಂಡೀಸ್‌ನ ಖ್ಯಾತ ಆಟಗಾರ ಮತ್ತು ಜನಾಂಗೀಯ ನಿಂದನೆ ವಿರುದ್ಧದ ಆಂದೋಲನದಲ್ಲಿ ಭಾಗಿಯಾಗಿರುವ ಮೈಕೆಲ್ ಹೋಲ್ಡಿಂಗ್ ಭೇಸರ ವ್ಯಕ್ತಪಡಿಸಿದ್ದರು. ಇದರ ನಂತರ ನ್ಯೂಜಿಲೆಂಡ್ ಎದುರಿನ ಟೆಸ್ಟ್ ಸರಣಿಯಲ್ಲಿ ಜನಾಂಗೀಯ ನಿಂದನೆ, ಧಾರ್ಮಿಕ ಅಸಹಿಷ್ಣುತೆ, ಲಿಂಗತಾರತಮ್ಯ ಇತ್ಯಾದಿಗಳನ್ನು ವಿರೋಧಿಸುವ ಘೋಷಣೆಗಳುಳ್ಳ ಟಿ–ಶರ್ಟ್ ತೊಟ್ಟು ಇಂಗ್ಲೆಂಡ್ ಆಟಗಾರರು ಕಣಕ್ಕೆ ಇಳಿದಿದ್ದರು.

ವೆಸ್ಟ್ ಇಂಡೀಸ್ ಪ್ರತಿಭಟನೆ

ವಿಶ್ವಕಪ್ ಟೂರ್ನಿಯ ಪ್ರತಿ ಪಂದ್ಯದ ಸಂದರ್ಭದಲ್ಲೂ ಜನಾಂಗೀಯ ನಿಂದನೆ ವಿರುದ್ಧದ ಪ್ರತಿಭಟನೆ ದಾಖಲಿಸುವ ಸಲುವಾಗಿ ಮೊಣಕಾಲೂರಲಾಗುವುದು ಎಂದು ವೆಸ್ಟ್ ಇಂಡೀಸ್ ತಂಡದ ನಾಯಕ ಕೀರನ್ ಪೊಲಾರ್ಡ್ ತಿಳಿಸಿದ್ದಾರೆ.

2020ರಲ್ಲಿ ಮಿನೆಸೊಟಾದಲ್ಲಿ ಪೊಲೀಸ್ ದೌರ್ಜನ್ಯದಿಂದ ಆಫ್ರಿಕಾ ಮೂಲದ ಜಾರ್ಜ್ ಫ್ಲಾಯ್ಡ್‌ ಎಂಬ ವ್ಯಕ್ತಿ ಸಾವಿಗೀಡಾದ ನಂತರ ಮೊಣಕಾಲೂರಿ ಪ್ರತಿಭಟನೆ ದಾಖಲಿಸಲಾಗುತ್ತಿತ್ತು. ಇದು ನಂತರ ‘ಬ್ಲ್ಯಾಕ್‌ ಲಿವ್ಸ್‌ ಮ್ಯಾಟರ್‌’ ಎಂಬ ಅಭಿಯಾನದ ಸ್ವರೂಪ ಪಡೆದುಕೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT