ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಮೊಮಿನಲ್‌–ನಜ್ಮುಲ್‌ ಶತಕದ ಸೊಬಗು

ಭಾನುವಾರ, ಜೂಲೈ 21, 2019
27 °C
ರನ್‌ ಹೊಳೆ ಹರಿಸಿದ ಬಾಂಗ್ಲಾ ಮಂಡಳಿ ಇಲೆವನ್‌

ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಮೊಮಿನಲ್‌–ನಜ್ಮುಲ್‌ ಶತಕದ ಸೊಬಗು

Published:
Updated:
Prajavani

ಬೆಂಗಳೂರು: ಮೊಮಿನಲ್‌ ಹಕ್‌ (169; 243 ಎಸೆತ, 22 ಬೌಂಡರಿ, 1 ಸಿಕ್ಸರ್‌) ಮತ್ತು ನಜ್ಮುಲ್‌ ಹೊಸೇನ್‌ (118; 219ಎ, 13ಬೌಂ, 2ಸಿ) ನಗರದ ಹೊರವಲಯದಲ್ಲಿರುವ ಆಲೂರಿನ ಎರಡನೇ ಮೈದಾನದಲ್ಲಿ ಗುರುವಾರ ರನ್‌ ಮಳೆ ಸುರಿಸಿದರು.

ಇವರ ಶತಕಗಳ ಬಲದಿಂದ ಬಾಂಗ್ಲಾದೇಶ ಕ್ರಿಕೆಟ್ ಮಂಡಳಿ ಇಲೆವನ್‌ ತಂಡವು ಕೆಎಸ್‌ಸಿಎ ಆಶ್ರಯದ ಕೆ.ತಿಮ್ಮಪ್ಪಯ್ಯ ಸ್ಮಾರಕ ಟೂರ್ನಿಯ ವಿದರ್ಭ ಕ್ರಿಕೆಟ್‌ ಸಂಸ್ಥೆ ಎದುರಿನ ಪಂದ್ಯದಲ್ಲಿ ಬೃಹತ್‌ ಮೊತ್ತ ಕಲೆಹಾಕಿದೆ.

ಬಾಂಗ್ಲಾ ಮಂಡಳಿ ಇಲೆವನ್‌ 148 ಓವರ್‌ಗಳಲ್ಲಿ 7 ವಿಕೆಟ್‌ಗೆ 500 ರನ್‌ ಗಳಿಸಿ ಡಿಕ್ಲೇರ್‌ ಮಾಡಿಕೊಂಡಿದೆ.

ಪ್ರಥಮ ಇನಿಂಗ್ಸ್‌ ಶುರು ಮಾಡಿರುವ ವಿದರ್ಭ ಸಂಸ್ಥೆ ದಿನದಾಟದ ಅಂತ್ಯಕ್ಕೆ ಮೊದಲ ಇನಿಂಗ್ಸ್‌ನಲ್ಲಿ 30 ಓವರ್‌ಗಳಲ್ಲಿ 1 ವಿಕೆಟ್‌ಗೆ 114ರನ್‌ ಕಲೆಹಾಕಿದೆ.

ಸಂಕ್ಷಿಪ್ತ ಸ್ಕೋರ್‌: ಬಾಂಗ್ಲಾದೇಶ ಕ್ರಿಕೆಟ್‌ ಮಂಡಳಿ: ಮೊದಲ ಇನಿಂಗ್ಸ್‌; 148 ಓವರ್‌ಗಳಲ್ಲಿ 7 ವಿಕೆಟ್‌ಗೆ 500 ಡಿಕ್ಲೇರ್ಡ್‌ (ಮೊಮಿನಲ್‌ ಹಕ್‌ 169, ನಜ್ಮುಲ್‌ ಹೊಸೇನ್‌ 118; ಆರಿಫುಲ್‌ ಹಕ್‌ 77; ದರ್ಶನ್‌ ನಲಕಂಡೆ 79ಕ್ಕೆ4).

ವಿದರ್ಭ ಸಂಸ್ಥೆ: ಪ್ರಥಮ ಇನಿಂಗ್ಸ್‌: 30 ಓವರ್‌ಗಳಲ್ಲಿ 1 ವಿಕೆಟ್‌ಗೆ 114 (ಆರ್‌.ಸಂಜಯ್‌ 49, ಅಕ್ಷಯ್‌ ಕೊಲ್ಹಾರ್‌ ಬ್ಯಾಟಿಂಗ್‌ 62).

ಆಲೂರಿನ ಮೂರನೇ ಮೈದಾನ: ಬಂಗಾಳ ಕ್ರಿಕೆಟ್‌ ಸಂಸ್ಥೆ; 72.2 ಓವರ್‌ಗಳಲ್ಲಿ 213 ಮತ್ತು 27 ಓವರ್‌ಗಳಲ್ಲಿ 1 ವಿಕೆಟ್‌ಗೆ 73.

ಕೇರಳ ಕ್ರಿಕೆಟ್‌ ಸಂಸ್ಥೆ: 72.3 ಓವರ್‌ಗಳಲ್ಲಿ 209 (ಮೊಹಮ್ಮದ್‌ ಅಜರುದ್ದೀನ್‌ 69, ಸಿಜೋಮನ್‌ ಜೋಸೆಫ್‌ 36; ಮೊಹಮ್ಮದ್‌ ಕೈಫ್‌ 48ಕ್ಕೆ3, ದುರ್ಗೇಶ್‌ ದುಬೆ 41ಕ್ಕೆ2, ಮಿತಿಲೇಶ್‌ ದಾಸ್‌ 71ಕ್ಕೆ3, ಅಂಕಿತ್‌ ಮಿಶ್ರಾ 48ಕ್ಕೆ2).

 ಬಿ.ಜಿ.ಎಸ್‌.ಮೈದಾನ: ಛತ್ತೀಸಗಡ ರಾಜ್ಯ ಕ್ರಿಕೆಟ್‌ ಸಂಘ: 114 ಓವರ್‌ಗಳಲ್ಲಿ 327 (ಸಂತೋಕ್‌ ಸಿಂಗ್‌ 64ಕ್ಕೆ2, ಎಂ.ವೆಂಕಟೇಶ್‌ 51ಕ್ಕೆ3).

ಕೆಎಸ್‌ಸಿಎ ಕೋಲ್ಟ್ಸ್‌ ಇಲೆವನ್‌: 25 ಓವರ್‌ಗಳಲ್ಲಿ 3 ವಿಕೆಟ್‌ಗೆ 92 (ದೇವದತ್ತ ಪಡಿಕ್ಕಲ್‌ 62; ಸೌರಭ್‌ ಖೈರಾವರ್‌ 20ಕ್ಕೆ2).

ಜಸ್ಟ್‌ ಕ್ರಿಕೆಟ್‌ ಮೈದಾನ: ಮುಂಬೈ ಕ್ರಿಕೆಟ್‌ ಸಂಸ್ಥೆ: 114 ಓವರ್‌ಗಳಲ್ಲಿ 386 (ವಿಜಯ್‌ ಗೋಹಿಲ್‌ ಔಟಾಗದೆ 55; ವಿಕಾಸ್‌ ಜೊಹ್ರಾರ್‌ 81ಕ್ಕೆ3, ಮಹಿಪಾಲ್‌ ಲೊಮರೊರ್‌ 48ಕ್ಕೆ3).

ಟೀಮ್ ರಾಜಸ್ಥಾನ: 64 ಓವರ್‌ಗಳಲ್ಲಿ 2 ವಿಕೆಟ್‌ಗೆ 204 (ಅಮಿತ್‌ ಗೌತಮ್‌ 62, ಚೇತನ್‌ ಬಿಷ್ಠ್‌ 85).

ಐಎಎಫ್‌ ಮೈದಾನ: ಡಾ.ಡಿ.ವೈ.ಪಾಟೀಲ ಕ್ರಿಕೆಟ್‌ ಅಕಾಡೆಮಿ; 69.5 ಓವರ್‌ಗಳಲ್ಲಿ 266 ಮತ್ತು 19 ಓವರ್‌ಗಳಲ್ಲಿ 7 ವಿಕೆಟ್‌ಗೆ 58 (ಕೆ.ಎಸ್‌.ದೇವಯ್ಯ 15ಕ್ಕೆ5, ಸಿ.ಎ.ಕಾರ್ತಿಕ್‌ 18ಕ್ಕೆ2).

ಕೆಎಸ್‌ಸಿಎ ಕಾರ್ಯದರ್ಶಿ ಇಲೆವನ್‌: 65.5 ಓವರ್‌ಗಳಲ್ಲಿ 227 (ರೋಹನ್‌ ಕದಂ 65, ಪ್ರವೀಣ್‌ ದುಬೆ 32, ಎಚ್‌.ಎಸ್‌.ಶರತ್‌ 36; ಅಕೀಬ್‌ ಖುರೇಷಿ 75ಕ್ಕೆ3, ಕೃತಿಕ್‌ 37ಕ್ಕೆ2, ಶುಭಂ ರಂಜಾನೆ 27ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !