ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ರಾಜಸ್ಥಾನ ರಾಯಲ್ಸ್ ತಂಡವನ್ನು ಕಾಲ್ ಸೊಮಾನಿ ಸಮೂಹದ ಒಕ್ಕೂಟವು ₹ 15,290 ಕೋಟಿಗೆ ಖರೀದಿಸಿತು.

2008ರಲ್ಲಿ ಐಪಿಎಲ್ ಆರಂಭವಾದಾಗ ಇದ್ದ ಎಂಟು ತಂಡಗಳಲ್ಲಿ ರಾಜಸ್ಥಾನ ಕೂಡ ಒಂದಾಗಿದೆ. ಅಲ್ಲಿಂದ ಇಲ್ಲಿಯವರೆಗೆ ಬೃಹತ್ ಪ್ರಮಾಣದಲ್ಲಿ ಮೌಲ್ಯ ವೃದ್ಧಿಸಿಕೊಂಡಿದೆ.

ಸೊಮಾನಿ ಸಮೂಹದ ಒಕ್ಕೂಟದಲ್ಲಿ ವಾಲ್ಮಾರ್ಟ್ ಬಳಗದ ರಾಬ್ ವಾಲ್ಟನ್ ಮತ್ತು ಫೋರ್ಡ್ ಮೋಟಾರ್ ಕಂಪೆನಿಯ ಹ್ಯಾಂಪ್ ಕುಟುಂಬ ಸಹಭಾಗಿತ್ವ ಹೊಂದಿವೆ.

ಸೊಮಾನಿ ಅವರು ತಂತ್ರಜ್ಞಾನ ಕ್ಷೇತ್ರದ ನವೋದ್ಯಮಿಯಾಗಿದ್ದಾರೆ. ಇಂಟ್ರಾಎಡ್ಜ್ (ಟೆಕ್ನಾಲಜಿ ಸರ್ವಿಸಸ್ ಮತ್ತು ಸಲ್ಯೂಷನ್ಸ್), ಟ್ರುಯೊ ಡಾಟ್ ಎಐ (ಡಾಟಾ ಪ್ರೈವೆಸಿ ರೈಟ್ಸ್ ಮತ್ತು ಎಐ ಗವರ್ನೆನ್ಸ್) ಹಾಗೂ ಅಕಾಡೆಮಿಯನ್ (ಎಡ್ಟೆಕ್ ಸರ್ವಿಸಸ್) ಸಂಸ್ಥಾಪಕರಾಗಿದ್ದಾರೆ.

ರಾಜಸ್ಥಾನ ರಾಯಲ್ಸ್ ತಂಡವನ್ನು ಖರೀದಿಸಲು ಇನ್ನೂ ಕೆಲವು ದೊಡ್ಡ ಉದ್ಯಮ ಸಂಸ್ಥೆಗಳು ಪೈಪೋಟಿ ನಡೆಸಿದ್ದವು. ಟೈಮ್ಸ್ ಇಂಟರ್ನೆಟ್ ನೇತೃತ್ವದ ಒಕ್ಕೂಟ, ಆದಿತ್ಯ ಬಿರ್ಲಾ ಸಮೂಹ, ಮಿತ್ತಲ್ ಕುಟುಂಬದ ನೇತೃತ್ವದ ಅರ್ಸೆಲರ್ ಮಿತ್ತಲ್ ಸಿ.ಇ.ಒ ಆದಿತ್ಯ ಮಿತ್ತಲ್ ಸ್ಪರ್ಧೆಯಲ್ಲಿದ್ದರು.

ಸೊಮಾನಿ ರಾಜಸ್ಥಾನ ರಾಯಲ್ಸ್ ಖರೀದಿಯನ್ನು ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯು ಇನ್ನಷ್ಟೇ ಅನುಮೋದನೆ ನೀಡಬೇಕಿದೆ. ಪ್ರಸ್ತುತ ಐಪಿಎಲ್ ಟೂರ್ನಿ ನಂತರ ಬಿಸಿಸಿಐ ಅನುಮೋದನೆ ನೀಡುವ ಸಾಧ್ಯತೆ ಇದೆ.

‘ಕೆಲವು ವರ್ಷಗಳ ಹಿಂದೆ ಹೊಸದಾಗಿ ಸೇರ್ಪಡೆಯಾದ ಲಖನೌ ಸೂಪರ್ ಜೈಂಟ್ಸ್ ಮೌಲ್ಯವನ್ನು ಹೋಲಿಕೆ ಮಾಡಿ ನೋಡಿದರೆ ಸದ್ಯ ರಾಜಸ್ಥಾನ ಪಡೆದಿರುವುದು ಬಹುದೊಡ್ಡ ಮೊತ್ತ. ಇದು ಅದ್ಭುತವಾದ ಬೆಳವಣಿಗೆಯಾಗಿದೆ’ ಎಂದು ಐಪಿಎಲ್ ಅಧಿಕಾರಿಯೊಬ್ಬರು ಹೇಳಿದರು. ಲಖನೌ ತಂಡವು 2021ರಲ್ಲಿ ₹ 7000 ಕೋಟಿಗೆ ಬಿಡ್ ಆಗಿತ್ತು.

2008ರಲ್ಲಿ ಎಮರ್ಜಿಂಗ್ ಮೀಡಿಯಾ ಕಂಪೆನಿಗೆ ₹ 630 ಕೋಟಿಗೆ ಮಾರಾಟವಾಗಿತ್ತು. ಇಂಗ್ಲೆಂಡ್ನಲ್ಲಿರುವ ಭಾರತದ ಮನೋಜ್ ಬದಾಳೆ ಶೇ 65ರಷ್ಟು ಪಾಲು ಹೊಂದಿದ್ದರು. ರಾಜಸ್ಥಾನ ತಂಡವು ಮೊದಲ ಐಪಿಎಲ್ನಲ್ಲಿ ಚಾಂಪಿಯನ್ ಆಗಿತ್ತು.

ಐಪಿಎಲ್ನಲ್ಲಿ ಅತ್ಯಂತ ಜನಪ್ರಿಯ ಹಾಗೂ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಕೂಡ ಮಾರಾಟಕ್ಕೆ ಸಿದ್ಧವಾಗಿದೆ. ಈ ತಂಡದ ಮೌಲ್ಯವು ₹ 20 ಸಾವಿರ ಕೋಟಿ ದಾಟುವ ನಿರೀಕ್ಷೆ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.