ಮಂಗಳವಾರ, ನವೆಂಬರ್ 12, 2019
24 °C

ಕ್ರೀಡಾ ವಿವಿಗೆ ಕಪಿಲ್ ದೇವ್ ಕುಲಪತಿ

Published:
Updated:
Prajavani

ಚಂಡೀಗಡ: ಹಿರಿಯ ಕ್ರಿಕೆಟಿಗ ಕಪಿಲ್ ದೇವ್ ಅವರು ಹರಿಯಾಣ ಕ್ರೀಡಾ ವಿಶ್ವವಿದ್ಯಾಲಯದ ಮೊಟ್ಟಮೊದಲ ಕುಲಪತಿಯಾಗಿ ನೇಮಕವಾಗಿದ್ದಾರೆ.

ದೇಶದ ಮೂರನೇ ಕ್ರೀಡಾ ವಿಶ್ವವಿದ್ಯಾಲಯ ಇದಾಗಿದೆ. ಈ ಮೊದಲು ಗುಜರಾತ್‌ನ ಗಾಂಧಿನಗರದಲ್ಲಿ ಮತ್ತು ತಮಿಳುನಾಡಿನ ಚೆನ್ನೈನಲ್ಲಿ ಕ್ರೀಡಾ ವಿಶ್ವವಿದ್ಯಾಲಯಗಳು ಕಾರ್ಯನಿರ್ವಹಿಸುತ್ತಿವೆ.

‘ಹರಿಯಾಣ ಕ್ರೀಡಾ ವಿವಿಗೆ ಕಪಿಲ್‌ದೇವ ಪ್ರಪ್ರಥಮ ಕುಲಪತಿಯಾಗಿದ್ದಾರೆ. ಸೋನೆಪತ್‌ನ ರಾಯ್‌ನಲ್ಲಿ ಈ ವಿವಿಯು ಆರಂಭವಾಗಿದೆ’ ಎಂದು ಹರಿಯಾಣದ ಕ್ರೀಡಾ ಸಚಿವ ಅನಿಲ್ ವಿಜ್ ಟ್ವೀಟ್ ಮಾಡಿದ್ದಾರೆ.

 

ಪ್ರತಿಕ್ರಿಯಿಸಿ (+)