ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ಹೊಸ ಋತುವು ಇದೇ 15ರಿಂದ ಆರಂಭವಾಗಲಿದೆ. ಇದರಲ್ಲಿ ಎರಡು ಪ್ರಮುಖ ಬದಲಾವಣೆಗಳನ್ನು ತರುತ್ತಿದೆ.

ಮೊದಲನೆಯದಾಗಿ; ಪರರಾಜ್ಯಗಳ ತಂಡ ಗಳಲ್ಲಿ ಆಡಲು ಕೆಎಸ್ಸಿಎಯಿಂದ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆದಿರುವ ಆಟಗಾರರು ಮರಳಿ ಕರ್ನಾಟಕ ತಂಡಕ್ಕೆ ಬರಬೇಕಾದರೆ ಒಂದು ಋತುವಿನಲ್ಲಿ ಕೂಲಿಂಗ್ ಆಫ್ (ಬಿಡುವು) ನಿಯಮ ಪಾಲಿಸಬೇಕು. ಎರಡನೆಯ ನಿಯಮವೆಂದರೆ; ಕೆಎಸ್ಸಿಎ ಸೀಮಿತ ಓವರ್ಗಳ ಕ್ರಿಕೆಟ್ ಟೂರ್ನಿ ಗಳಲ್ಲಿ ಆಡುವ ತಂಡಗಳಿಗೆ ಇನ್ನು ಮುಂದೆ ಬಣ್ಣದ ಸಮವಸ್ತ್ರ ಧರಿಸುವುದು ಕಡ್ಡಾಯವಾಗಲಿದೆ.

‘ಇತರ ರಾಜ್ಯಗಳನ್ನು ಪ್ರತಿನಿಧಿಸಲು ಎನ್ಒಸಿ ಪಡೆದ ನಂತರ ಕರ್ನಾಟಕಕ್ಕೆ ಮರಳಲು ಬಯಸುವ ಆಟಗಾರರಿಗೆ ಒಂದು ಋತುವಿನ ಕೂಲಿಂಗ್-ಆಫ್ ಅವಧಿ ಪಾಲಿಸಬೇಕೆಂಬ ದೀರ್ಘಕಾಲದಿಂದ ನಿಯಮ ಇದೆ. ಆದರೆ ಅದನ್ನು ಕಟ್ಟುನಿಟ್ಟಾಗಿ ಪಾಲಿಸಲಾಗಿಲ್ಲ. ಈ ಋತುವಿನಿಂದ ನಾವು ಅದನ್ನು ಕಟ್ಟುನಿಟ್ಟಾಗಿ ಜಾರಿ ಮಾಡುತ್ತೇವೆ’ ಎಂದು ಕೆಎಸ್ಸಿಎ ಕಾರ್ಯದರ್ಶಿ ಸಂತೋಷ್ ಮೆನನ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮತ್ತೊಂದು ಪ್ರಮುಖ ನಿಯಮವೆಂದರೆ, ಶ್ವೇತವರ್ಣದ ಚೆಂಡಿನ ಕ್ರಿಕೆಟ್ ಟೂರ್ನಿಗಳಲ್ಲಿ ಆರಂಭದಿಂದಲೂ ಬಣ್ಣದ ಉಡುಪುಗಳೊಂದಿಗೆ ಆಡಬೇಕು. ಇದು ನಾಲ್ಕು ಮತ್ತು ಐದನೇ ಡಿವಿಷನ್ಗಳಿಗೂ ಅನ್ವಯಿಸುತ್ತದೆ‘ ಎಂದು ಮೆನನ್ ಹೇಳಿದರು.

ಕೆಎಸ್ಸಿಎ ಋತುವಿನ ಆರಂಭ ದಲ್ಲಿ ನಡೆಯುವ ಕಸ್ತೂರಿರಂಗನ್ ಸ್ಮಾರಕ ಟಿ20 ಟೂರ್ನಿಯಲ್ಲಿ ಭಾಗವಹಿಸುವ ಕ್ಲಬ್ ತಂಡಗಳ ಡ್ರಾ ಸಮಾರಂಭ ಸೋಮವಾರ ನಡೆಯಿತು. ಸಂಸ್ಥೆಯ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿಇದರ ನೇರಪ್ರಸಾರ ಮಾಡಲಾಯಿತು. ಕ್ಲಬ್ಗಳ ಅಧ್ಯಕ್ಷರು ಮತ್ತು ಕಾರ್ಯದರ್ಶಿಗಳು ಹಾಜರಿದ್ದರು.

‘ಪಂದ್ಯಗಳು ಮತ್ತು ಸ್ಥಳಗಳ ಅಂತಿಮಗೊಳಿಸು ವಿಕೆಯಲ್ಲಿ ಪಾರದರ್ಶಕತೆಯನ್ನು ಖಚಿತಪಡಿಸಿ ಕೊಳ್ಳಲು ನಾವು ಎಲ್ಲಾ ಟೂರ್ನಿ ಗಳಲ್ಲಿಯೂ ಇದೇ ನಿಯಮ ಪಾಲಿಸುತ್ತೇವೆ. ಕೆಲವು ತಂಡಗಳಿಗೆ ಮಾತ್ರ ಕೆಲವು ನಿರ್ದಿಷ್ಟ ಮೈದಾನಗಳು ಆಡಲು ಸಿಗುತ್ತವೆ ಎಂಬ ಮಾತುಗಳು ಕೇಳಿಬಂದಿವೆ. ಆದ್ದರಿಂದ ಎಲ್ಲರಿಗೂ ಸಮಾನ ಅವಕಾಶ ಕಲ್ಪಿಸಲು ಒಂದು ದಾರಿ ಕಂಡುಕೊಂಡಿದ್ದೇವೆ. ಎ, ಬಿ, ಸಿ ಮತ್ತು ಡಿ ಎಂದು ತಂಡಗಳನ್ನು ವಿಂಗಡಿಸಲಾಗಿದೆ. ಇಲ್ಲಿ ಯಾವುದೇ ತಂಡದ ನಿಜ ಹೆಸರು ಬಹಿರಂಗ ಮಾಡಿಲ್ಲ. ಆದ್ದರಿಂದ ಎ,ಬಿ,ಸಿ, ಡಿ ಸಂಕೇತಗಳನ್ನಷ್ಟೇ ಮಾಡಲಾಗಿದ್ದು, ಡ್ರಾ ಮಾಡಿ ಮೈದಾನಗಳನ್ನು ಹಂಚಿಕೆ ಮಾಡಲಾಗಿದೆ. ಇದು ಚಾಂಪಿಯನ್ಸ್ ಲೀಗ್ ಫುಟ್ಬಾಲ್ ಟೂರ್ನಿಯ ಡ್ರಾ ಹೋಲುತ್ತದೆ. ಪಕ್ಷಪಾತ ತಡೆಯುವ ನಿಟ್ಟಿನಲ್ಲಿ ಇದು ಪ್ರಮುಖ ಹೆಜ್ಜೆ’ ಎಂದು ಮೆನನ್ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260402-51-1535755072

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.