ಕ್ರಿಕೆಟ್‌: ಕರ್ನಾಟಕ ತಂಡ ಪ್ರಕಟ

ಮಂಗಳವಾರ, ಮಾರ್ಚ್ 19, 2019
33 °C

ಕ್ರಿಕೆಟ್‌: ಕರ್ನಾಟಕ ತಂಡ ಪ್ರಕಟ

Published:
Updated:
Prajavani

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ), ಸೈಯದ್‌ ಮುಷ್ತಾಕ್‌ ಅಲಿ ಟ್ರೋಫಿ ಸೂಪರ್‌ ಲೀಗ್‌ ಟೂರ್ನಿಗೆ ಸೋಮವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಮನೀಷ್‌ ಪಾಂಡೆ ಅವರು ತಂಡದ ಸಾರಥ್ಯ ವಹಿಸಲಿದ್ದು, ಕರುಣ್‌ ನಾಯರ್‌, ಉಪ ನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ಸೂಪರ್‌ ಲೀಗ್‌ ಟೂರ್ನಿ ಇದೇ ತಿಂಗಳ ಎಂಟರಿಂದ 14ರವರೆಗೆ ಇಂದೋರ್‌ನಲ್ಲಿ ನಿಗದಿಯಾಗಿದೆ. ತನ್ನ ಮೊದಲ ಪಂದ್ಯದಲ್ಲಿ ಕರ್ನಾಟಕ ತಂಡ ಮುಂಬೈ ಎದುರು ಸೆಣಸಲಿದೆ.

ಮನೀಷ್‌ ಪಾಂಡೆ ಬಳಗವು ಲೀಗ್‌ ಹಂತದಲ್ಲಿ ಅಮೋಘ ಸಾಮರ್ಥ್ಯ ತೋರಿತ್ತು. ಆಡಿದ ಏಳು ಪಂದ್ಯಗಳಲ್ಲೂ ಗೆದ್ದು ‘ಡಿ’ ಗುಂಪಿನ ಪಾಯಿಂಟ್ಸ್‌ ಪಟ್ಟಿಯಲ್ಲಿ ಅಗ್ರಸ್ಥಾನ ಗಳಿಸಿತ್ತು.

ತಂಡ ಇಂತಿದೆ: ಮನೀಷ್‌ ಪಾಂಡೆ (ನಾಯಕ), ಕರುಣ್‌ ನಾಯರ್‌ (ಉಪ ನಾಯಕ), ಮಯಂಕ್‌ ಅಗರವಾಲ್‌, ರೋಹನ್‌ ಕದಂ, ಬಿ.ಆರ್‌.ಶರತ್‌ (ವಿಕೆಟ್‌ ಕೀಪರ್‌), ಜೆ.ಸುಚಿತ್‌, ಶ್ರೇಯಸ್‌ ಗೋಪಾಲ್‌, ಆರ್‌.ವಿನಯ್‌ ಕುಮಾರ್‌, ಪ್ರಸಿದ್ಧ ಎಂ.ಕೃಷ್ಣ, ಅಭಿಮನ್ಯು ಮಿಥುನ್‌, ಕೆ.ಸಿ.ಕಾರ್ಯಪ್ಪ, ವಿ.ಕೌಶಿಕ್‌, ಕೆ.ವಿ.ಸಿದ್ದಾರ್ಥ್‌, ಮನೋಜ್‌ ಭಾಂಡಗೆ ಮತ್ತು ಲವನೀತ್‌ ಸಿಸೋಡಿಯಾ (ವಿಕೆಟ್‌ ಕೀಪರ್‌).

ಕೋಚ್‌: ಯರೇಗೌಡ, ಬೌಲಿಂಗ್‌ ಕೋಚ್‌: ಎಸ್‌.ಅರವಿಂದ್‌.

ಬರಹ ಇಷ್ಟವಾಯಿತೆ?

 • 8

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !