ಮಂಗಳವಾರ, ನವೆಂಬರ್ 19, 2019
29 °C

ಮನೋಜ್‌ಗೆ ಸಾರಥ್ಯ

Published:
Updated:

ಬೆಂಗಳೂರು: ಮನೋಜ್‌ ಭಾಂಡಗೆ ಅವರು ಇದೇ ತಿಂಗಳ 31ರಿಂದ ಮೈಸೂರಿನಲ್ಲಿ ಆರಂಭವಾಗುವ ಬಿಸಿಸಿಐ ಏಕದಿನ ಕ್ರಿಕೆಟ್‌ ಟೂರ್ನಿಯ ಮೊದಲ ಎರಡು ಪಂದ್ಯಗಳಲ್ಲಿ ಕರ್ನಾಟಕದ 23 ವರ್ಷದೊಳಗಿನವರ ತಂಡವನ್ನು ಮುನ್ನಡೆಸಲಿದ್ದಾರೆ.

ಎಸ್‌.ಜೆ.ನಿಕಿನ್‌ ಜೋಸ್‌ ಅವರು ಉಪನಾಯಕನ ಜವಾಬ್ದಾರಿ ನಿಭಾಯಿಸಲಿದ್ದಾರೆ.

ತಂಡ ಇಂತಿದೆ: ಮನೋಜ್‌ ಭಾಂಡಗೆ (ನಾಯಕ), ಎಸ್‌.ಜೆ.ನಿಕಿನ್‌ ಜೋಸ್‌ (ಉಪ ನಾಯಕ), ಸುಜಿತ್‌ ಎನ್‌.ಗೌಡ, ಕಿಶನ್‌ ಎಸ್‌.ಬೆಡಾರೆ, ಬಿ.ಆರ್‌.ಶರತ್‌ (ವಿಕೆಟ್‌ ಕೀಪರ್‌), ವೈಶಾಖ್‌ ವಿಜಯಕುಮಾರ್‌, ಎಂ.ವೆಂಕಟೇಶ್‌, ಬಿ.ಯು.ಶಿವಕುಮಾರ, ಅಭಿಲಾಷ್‌ ಶೆಟ್ಟಿ, ವಿಷ್ಣು ಪ್ರಿಯಾನ್‌, ಸಂತೋಕ್‌ ಸಿಂಗ್‌, ಲವನಿತ್‌ ಸಿಸೋಡಿಯಾ, ಪ್ರಣವ್‌ ಭಾಟಿಯಾ, ಕುಶಾಲ್‌ ವಧ್ವಾನಿ ಮತ್ತು ಮಾಧವ್‌ ಬಜಾಜ್‌. ಕೋಚ್‌ಗಳು: ಎನ್‌.ಸಿ.ಅಯ್ಯಪ್ಪ ಮತ್ತು ದೀಪಕ್‌ ಚೌಗುಲೆ.

ಪ್ರತಿಕ್ರಿಯಿಸಿ (+)