ಶನಿವಾರ, ಡಿಸೆಂಬರ್ 14, 2019
22 °C

ಕ್ರಿಕೆಟ್‌: ಕರ್ನಾಟಕಕ್ಕೆ ಸೋಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಅಂಜಲಿ ಅಮರ್‌ ಸಿಂಗ್‌ (19ಕ್ಕೆ3) ಮತ್ತು ಕಾಜಲ್‌ (10ಕ್ಕೆ2) ಅವರ ದಾಳಿಗೆ ಕಂಗೆಟ್ಟ ಕರ್ನಾಟಕ ತಂಡವು ಬಿಸಿಸಿಐ ಮಹಿಳೆಯರ 23ವರ್ಷದೊಳಗಿನವರ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 5 ವಿಕೆಟ್‌ಗಳಿಂದ ಉತ್ತರಪ್ರದೇಶ ಎದುರು ಸೋತಿದೆ.

ನಗರದ ಹೊರವಲಯದಲ್ಲಿರುವ ಆಲೂರಿನ ಎರಡನೇ ಮೈದಾನದಲ್ಲಿ ಮಂಗಳವಾರ ಮೊದಲು ಬ್ಯಾಟ್‌ ಮಾಡಿದ ಆತಿಥೇಯ ತಂಡ 19.3 ಓವರ್‌ಗಳಲ್ಲಿ 97ರನ್‌ಗಳಿಗೆ ಆಲೌಟ್‌ ಆಯಿತು. ನಿಕಿ ಪ್ರಸಾದ್‌ (24) ಗರಿಷ್ಠ ಸ್ಕೋರರ್‌ ಎನಿಸಿದರು.

ಸುಲಭ ಗುರಿಯನ್ನು ಉತ್ತರ ಪ್ರದೇಶ 19 ಓವರ್‌ಗಳಲ್ಲಿ 5 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ; 19.3 ಓವರ್‌ಗಳಲ್ಲಿ 97 (ನಿಕಿ ಪ್ರಸಾದ್‌ 24; ಅಂಜಲಿ ಅಮರ್‌ ಸಿಂಗ್‌ 19ಕ್ಕೆ3, ಕಾಜಲ್‌ 10ಕ್ಕೆ2).

ಉತ್ತರ ಪ್ರದೇಶ: 19 ಓವರ್‌ಗಳಲ್ಲಿ 5 ವಿಕೆಟ್‌ಗೆ 98 (ಮುಸ್ಕಾನ್‌ ಮಲಿಕ್‌ 46, ಆಯುಷಿ ಶ್ರೀವಾಸ್ತವ 28).

ಫಲಿತಾಂಶ: ಉತ್ತರ ಪ್ರದೇಶ ತಂಡಕ್ಕೆ 5 ವಿಕೆಟ್‌ ಗೆಲುವು.

ಪ್ರತಿಕ್ರಿಯಿಸಿ (+)