ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರಸಿದ್ಧ ಕೃಷ್ಣಗೆ ಅವಕಾಶ

ಬರೋಡಾ ಎದುರಿನ ರಣಜಿ ಪಂದ್ಯಕ್ಕೆ ಕರ್ನಾಟಕ ತಂಡ
Last Updated 10 ಫೆಬ್ರುವರಿ 2020, 15:48 IST
ಅಕ್ಷರ ಗಾತ್ರ

ಬೆಂಗಳೂರು: ಮಧ್ಯಮ ವೇಗದ ಬೌಲರ್‌ ಪ್ರಸಿದ್ಧ ಕೃಷ್ಣ ಅವರು ಬರೋಡಾ ಎದುರಿನ ರಣಜಿ ಟ್ರೋಫಿ ಕ್ರಿಕೆಟ್‌ ಪಂದ್ಯಕ್ಕೆ ಕರ್ನಾಟಕ ತಂಡದಲ್ಲಿ ಸ್ಥಾನ ಪಡೆದಿದ್ದಾರೆ.

ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) ಸೋಮವಾರ 15 ಸದಸ್ಯರ ತಂಡವನ್ನು ಪ್ರಕಟಿಸಿದೆ.

ಬ್ಯಾಟ್ಸ್‌ಮನ್‌ಗಳಾದ ಪವನ್‌ ದೇಶಪಾಂಡೆ ಮತ್ತು ಡೇಗಾ ನಿಶ್ಚಲ್‌ ಅವರೂ ತಂಡಕ್ಕೆ ಮರಳಿದ್ದಾರೆ. ರೈಲ್ವೇಸ್‌ ಎದುರಿನ ಪಂದ್ಯದಲ್ಲಿ ಮಿಂಚಿದ್ದ ವೇಗದ ಮಧ್ಯಮ ವೇಗದ ಬೌಲರ್‌ ಪ್ರತೀಕ್‌ ಜೈನ್‌ ಹಾಗೂ ಬ್ಯಾಟಿಂಗ್‌ನಲ್ಲಿ ವೈಫಲ್ಯ ಕಂಡಿದ್ದ ರೋಹನ್‌ ಕದಂ ಅವರನ್ನು ಕೈಬಿಡಲಾಗಿದೆ. ಶ್ರೇಯಸ್‌ ಗೋಪಾಲ್‌ ಅವರ ಬದಲು ಆರಂಭಿಕ ಆಟಗಾರ ಆರ್‌.ಸಮರ್ಥ್‌ಗೆ ಉಪನಾಯಕನ ಜವಾಬ್ದಾರಿ ವಹಿಸಲಾಗಿದೆ. ಕರುಣ್‌ ನಾಯರ್‌ ಅವರು ನಾಯಕರಾಗಿ ಮುಂದುವರಿದಿದ್ದಾರೆ.

ಬರೋಡಾ ಎದುರಿನ ಪಂದ್ಯವು ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಬುಧವಾರದಿಂದ ಆರಂಭವಾಗಲಿದೆ. ಕ್ವಾರ್ಟರ್‌ ಫೈನಲ್‌ ಪ್ರವೇಶಿಸಬೇಕಾದರೆ ಕರ್ನಾಟಕ ತಂಡ ಈ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.

ತಂಡ ಇಂತಿದೆ: ಕರುಣ್‌ ನಾಯರ್‌ (ನಾಯಕ), ಆರ್‌.ಸಮರ್ಥ್‌ (ಉಪ ನಾಯಕ), ದೇವದತ್ತ ಪಡಿಕ್ಕಲ್‌, ಡೇಗಾ ನಿಶ್ಚಲ್‌, ಪವನ್‌ ದೇಶಪಾಂಡೆ, ಶರತ್‌ ಶ್ರೀನಿವಾಸ್‌ (ವಿಕೆಟ್‌ ಕೀಪರ್‌), ಶ್ರೇಯಸ್‌ ಗೋಪಾಲ್‌, ಕೆ.ಗೌತಮ್‌, ಅಭಿಮನ್ಯು ಮಿಥುನ್‌, ಕೆ.ವಿ.ಸಿದ್ಧಾರ್ಥ್‌, ಪ್ರಸಿದ್ಧ ಎಂ.ಕೃಷ್ಣ, ಪ್ರವೀಣ್‌ ದುಬೆ, ವಿ.ಕೌಶಿಕ್‌, ರೋನಿತ್‌ ಮೋರೆ ಮತ್ತು ಬಿ.ಆರ್‌.ಶರತ್‌ (ವಿಕೆಟ್‌ ಕೀಪರ್‌).

ಮುಖ್ಯ ಕೋಚ್‌: ಯರೇ ಕೆ.ಗೌಡ, ಬೌಲಿಂಗ್‌ ಕೋಚ್‌: ಎಸ್‌.ಅರವಿಂದ್‌, ಫೀಲ್ಡಿಂಗ್

ಕೋಚ್‌: ಶಬರೀಷ್‌ ಪಿ.ಮೋಹನ್‌.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT