ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಣಜಿ | ಕರ್ನಾಟಕ–ಕಾಶ್ಮೀರ ಕ್ವಾರ್ಟರ್ ಫೈನಲ್ ವಿಳಂಬ: ಉಳಿದ ಮೂರು ಪಂದ್ಯಗಳು ಆರಂಭ

Last Updated 20 ಫೆಬ್ರುವರಿ 2020, 6:30 IST
ಅಕ್ಷರ ಗಾತ್ರ

ಜಮ್ಮು: ರಣಜಿ ಕ್ರಿಕೆಟ್‌ ಟೂರ್ನಿಯ ಕ್ವಾರ್ಟರ್‌ ಫೈನಲ್‌ ಪಂದ್ಯಗಳು ಇಂದಿನಿಂದ ಆರಂಭವಾಗಿವೆ. ಕರ್ನಾಟಕ ಹಾಗೂ ಜಮ್ಮು ಕಾಶ್ಮೀರ ತಂಡಗಳ ನಡುವಣ ಮೂರನೇ ಕ್ವಾರ್ಟರ್ ಫೈನಲ್‌ ಪಂದ್ಯ ಮಂದಬೆಳಕಿನ ಕಾರಣದಿಂದಾಗಿ ವಿಳಂಬವಾಗಿದ್ದು, ಉಳಿದ ಮೂರು ಪಂದ್ಯಗಳು ಆರಂಭವಾಗಿವೆ.

ಮೊದಲ ಕ್ವಾರ್ಟರ್ ಫೈನಲ್‌:ಗುಜರಾತ್‌ನ ವಲ್ಸಾದ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಗುಜರಾತ್‌ಮತ್ತು ಗೋವಾ ತಂಡಗಳು ಮುಖಾಮುಖಿಯಾಗಿವೆ. ಟಾಸ್‌ ಗೆದ್ದು ಮೊದಲು ಬ್ಯಾಟಿಂಗ್ ಆರಂಭಿಸಿರುವ ಆತಿಥೇಯರು ಸದ್ಯ 30 ಓವರ್‌ಗಳಲ್ಲಿ 1 ವಿಕೆಟ್‌ ನಷ್ಟಕ್ಕೆ 85 ರನ್ ಗಳಿಸಿದ್ದಾರೆ.

28 ರನ್‌ ಗಳಿಸಿದ್ದ ಆರಂಭಿಕ ಪ್ರಿಯಾಂಕ್‌ ಪಾಂಚಾಲ್‌ ವಿಕೆಟ್‌ ಒಪ್ಪಿಸಿದ್ದಾರೆ. ಸಮಿತ್ ಗೊಹೆಲ್‌ (45) ಮತ್ತು ಭಾರ್ಗವ್ ಮೆರೈ (7) ಬ್ಯಾಟಿಂಗ್ ಮುಂದುವರಿಸಿದ್ದಾರೆ.

ಎರಡನೇ ಕ್ವಾರ್ಟರ್ ಫೈನಲ್‌:ಬಂಗಾಳವಿರುದ್ಧದ ಪಂದ್ಯದಲ್ಲಿ ಟಾಸ್‌ ಗೆದ್ದು ಬೌಲಿಂಗ್ ಆಯ್ಕೆ ಮಾಡಿಕೊಂಡಿರುವ ಒಡಿಶಾ ಪಡೆ ಆರಂಭಿಕ ಯಶಸ್ಸು ಸಾಧಿಸಿದೆ.

ಕಟಕ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಬಂಗಾಳಕ್ಕೆ ಉತ್ತಮ ಆರಂಭ ಸಿಗಲಿಲ್ಲ.ತಂಡದ ಮೊತ್ತ ಕೇವಲ 46 ಆಗುವಷ್ಟರಲ್ಲಿ ಪ್ರಮುಖ ಐದು ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಬಳಿಕ ಜೊತೆಯಾದ ಅನುಸ್ತುಪ್‌ ಮಜುಂದಾರ್ ಮತ್ತು ಶ್ರೀವತ್ಸ್‌ ಗೋಸ್ವಾಮಿ ಜೋಡಿ ಆರನೇ ವಿಕೆಟ್‌ಗೆ ಅಜೇಯ 65 ರನ್‌ ಕೂಡಿಸಿ ಬಂಗಾಳ ಇನಿಂಗ್ಸ್‌ಗೆ ಚೇತರಿಕೆ ನೀಡಿದೆ.

ಸದ್ಯ ಬಂಗಾಳ ತಂಡ 32 ಓವರ್‌ಗಳಲ್ಲಿ ಐದು ವಿಕೆಟ್‌ಗೆ 111 ರನ್‌ ಕಲೆಹಾಕಿದೆ.ಮಜುಂದಾರ್ 40 ರನ್‌ ಹಾಗೂ ಗೋಸ್ವಾಮಿ 24 ರನ್‌ ಗಳಿಸಿದ್ದಾರೆ.

ನಾಲ್ಕನೇ ಕ್ವಾರ್ಟರ್ ಫೈನಲ್‌:ಆಂಧ್ರ ಪ್ರದೇಶದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಆತಿಥೇಯ ಆಂಧ್ರ ಮತ್ತು ಸೌರಾಷ್ಟ್ರ ತಂಡಗಳು ಎದುರಾಗಿವೆ. ಟಾಸ್‌ ಗೆದ್ದಿರುವ ಆಂಧ್ರ ಬೌಲಿಂಗ್‌ ಆಯ್ಕೆ ಮಾಡಿಕೊಂಡಿದೆ.

ಸದ್ಯ ಸೌರಾಷ್ಟ್ರ ತಂಡ 26 ಓವರ್‌ಗಳಲ್ಲಿ ಮೂರು ವಿಕೆಟ್‌ ಕಳೆದುಕೊಂಡು 98 ರನ್‌ ಗಳಿಸಿದೆ. ವಿಶ್ವರಾಜ್‌ ಜಡೇಜಾ (32) ಹಾಗೂ ಶೆಲ್ಡನ್‌ ಜಾಕ್ಸನ್‌ (17) ಕ್ರೀಸ್‌ನಲ್ಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT