ಬೆಂಗಳೂರು: ಪಿ. ಸಲೋನಿ (20ಕ್ಕೆ 4) ಮತ್ತು ಬಿ.ಜಿ.ತೇಜಸ್ವಿನಿ (30ಕ್ಕೆ 3) ಅವರ ಪರಿಣಾಮಕಾರಿ ಬೌಲಿಂಗ್ ದಾಳಿಯ ನೆರವಿನಿಂದ ಕರ್ನಾಟಕ ತಂಡವು ಬಿಸಿಸಿಐ 23 ವರ್ಷದೊಳಗಿನ ಮಹಿಳೆಯರ ಏಕದಿನ ಟ್ರೋಫಿ ಕ್ರಿಕೆಟ್ ಟೂರ್ನಿಯಲ್ಲಿ ಮುಂಬೈ ತಂಡವನ್ನು ಏಳು ವಿಕೆಟ್ಗಳಿಂದ ಮಣಿಸಿ ಫೈನಲ್ಗೆ ಲಗ್ಗೆ ಹಾಕಿತು.

ರಾಂಚಿಯ ಜೆಎಸ್ಸಿಎ ಜೆಎಸ್ಸಿಎ ಅಂತರರಾಷ್ಟ್ರೀಯ ಕ್ರೀಡಾಂಗಣ ಸಂಕೀರ್ಣದಲ್ಲಿ ಶುಕ್ರವಾರ ನಡೆದ ಸೆಮಿಫೈನಲ್ನಲ್ಲಿ ಟಾಸ್ ಗೆದ್ದ ಕರ್ನಾಟಕ ಫೀಲ್ಡಿಂಗ್ ಆಯ್ದುಕೊಂಡಿತು. ಮೊದಲು ಬ್ಯಾಟಿಂಗ್ಗೆ ಇಳಿದ ಮುಂಬೈ ತಂಡವನ್ನು ಸಲೋನಿ ಮತ್ತು ತೇಜಸ್ವಿನಿ ಅವರು ಅಲ್ಪಮೊತ್ತಕ್ಕೆ ಕಟ್ಟಿಹಾಕುವಲ್ಲಿ ಯಶಸ್ವಿಯಾದರು. ತಂಡವು 41.3 ಓವರ್ಗಳಲ್ಲಿ 134 ರನ್ಗಳಿಗೆ ಕುಸಿಯಿತು.

ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ತಂಡವು ನಿಕ್ಕಿ ಪ್ರಸಾದ್ (ಔಟಾಗದೇ 49;50ಎ) ಮತ್ತು ಸೌಮ್ಯಾ ವರ್ಮಾ (ಔಟಾಗದೇ 45;34ಎ) ಅವರ ಬ್ಯಾಟಿಂಗ್ ಬಲದಿಂದ 25.5 ಓವರ್ಗಳಲ್ಲಿ 3 ವಿಕೆಟ್ಗೆ 135 ರನ್ ಗಳಿಸಿ ಸಂಭ್ರಮಿಸಿತು.

ಭಾನುವಾರ ನಡೆಯುವ ಫೈನಲ್ನಲ್ಲಿ ಕರ್ನಾಟಕ ತಂಡವು ಮಹಾರಾಷ್ಟ್ರ ತಂಡವನ್ನು ಎದುರಿಸಲಿದೆ. ಕರ್ನಾಟಕ ತಂಡವು ಕ್ವಾರ್ಟರ್ ಫೈನಲ್ನಲ್ಲಿ ಉತ್ತರಾಖಂಡ ತಂಡವನ್ನು 42 ರನ್ಗಳಿಂದ ಮಣಿಸಿತ್ತು.

ಸಂಕ್ಷಿಪ್ತ ಸ್ಕೋರು: ಮುಂಬೈ: 41.3 ಓವರ್ಗಳಲ್ಲಿ 134 (ಯಯಾತಿ 31; ಬಿ.ಜಿ.ತೇಜಸ್ವಿನಿ 30ಕ್ಕೆ 3, ಪಿ. ಸಲೋನಿ 20ಕ್ಕೆ 4). ಕರ್ನಾಟಕ: 25.5 ಓವರ್ಗಳಲ್ಲಿ 3 ವಿಕೆಟ್ಗೆ 135 (ರಚಿತಾ ಹತ್ವಾರ್ 36, ನಿಕ್ಕಿ ಪ್ರಸಾದ್ ಔಟಾಗದೇ 49, ಸೌಮ್ಯಾ ವರ್ಮಾ ಔಟಾಗದೇ 45; ಝೀಲ್ ಡಿಮೆಲ್ಲೊ 24ಕ್ಕೆ 2). ಫಲಿತಾಂಶ: ಕರ್ನಾಟಕಕ್ಕೆ 7 ವಿಕೆಟ್ ಗೆಲುವು, ಫೈನಲ್ ಪ್ರವೇಶ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.