ಸೋಮವಾರ, ನವೆಂಬರ್ 18, 2019
26 °C

ಕ್ರಿಕೆಟ್‌: ಕರ್ನಾಟಕಕ್ಕೆ ಜಯ

Published:
Updated:

ಬೆಂಗಳೂರು: ನಾಯಕಿ ವೇದಾ ಕೃಷ್ಣಮೂರ್ತಿ (ಔಟಾಗದೆ 36; 24ಎ, 3ಬೌಂ, 2ಸಿ) ಮತ್ತು ವಿ.ಚಂದು (11ಕ್ಕೆ2) ಅವರ ಉತ್ತಮ ಆಟದಿಂದಾಗಿ ಕರ್ನಾಟಕದ ಮಹಿಳಾ ತಂಡದವರು ಬಿಸಿಸಿಐ ಸೀನಿಯರ್ ಮಹಿಳಾ ಟ್ವೆಂಟಿ–20 ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 6 ವಿಕೆಟ್‌ಗಳಿಂದ ತ್ರಿಪುರ ತಂಡವನ್ನು ಮಣಿಸಿದ್ದಾರೆ.

ಮುಂಬೈನ ಸಚಿನ್‌ ತೆಂಡೂಲ್ಕರ್‌ ಜಿಮ್ಖಾನದಲ್ಲಿ ಶುಕ್ರವಾರ ಮೊದಲು ಬ್ಯಾಟ್‌ ಮಾಡಿದ ತ್ರಿಪುರ 20 ಓವರ್‌ಗಳಲ್ಲಿ 7 ವಿಕೆಟ್‌ಗೆ 82ರನ್‌ ಗಳಿಸಿತು. ಸುಲಭ ಗುರಿಯನ್ನು ಕರ್ನಾಟಕ ತಂಡ 15.4 ಓವರ್‌ಗಳಲ್ಲಿ 4 ವಿಕೆಟ್‌ ಕಳೆದುಕೊಂಡು ಮುಟ್ಟಿತು.

ಸಂಕ್ಷಿಪ್ತ ಸ್ಕೋರ್‌: ತ್ರಿಪುರ: 20 ಓವರ್‌ಗಳಲ್ಲಿ 7 ವಿಕೆಟ್‌ಗೆ 82 (ಮೌಚೈತಿ ಬಿ ದೇವನಾಥ್‌ 18, ಜುಮ್ಕಿ ರವೀಂದ್ರ ದೇವನಾಥ್ 16, ರಿಜು ರತನ್‌ ಸಹಾ 10, ಮಮತಾ ಕಾರ್ತಿಕ್‌ ಔಟಾಗದೆ 16; ಮೋನಿಕಾ ಸಿ.ಪಟೇಲ್‌ 15ಕ್ಕೆ1, ಆಕಾಂಕ್ಷಾ ಕೊಹ್ಲಿ 15ಕ್ಕೆ1, ಸಹನಾ ಎಸ್‌.ಪವಾರ್‌ 20ಕ್ಕೆ1, ಸಿಮ್ರನ್‌ ಹೆನ್ರಿ 13ಕ್ಕೆ1, ವಿ.ಚಂದು 11ಕ್ಕೆ2, ಸಿ.ಪ್ರತ್ಯೂಷಾ 8ಕ್ಕೆ1).

ಕರ್ನಾಟಕ: 15.4 ಓವರ್‌ಗಳಲ್ಲಿ 4 ವಿಕೆಟ್‌ಗೆ 88 (ದಿವ್ಯಾ ಜ್ಞಾನಾನಂದ 12, ವಿ.ಆರ್‌.ವನಿತಾ 5, ಕೆ. ರಕ್ಷಿತಾ 7, ಸಿ.ಪ್ರತ್ಯೂಷಾ 26, ವೇದಾ ಕೃಷ್ಣಮೂರ್ತಿ ಔಟಾಗದೆ 36; ಅನ್ನಪೂರ್ಣ ಬನಮಾಲಿ ದಾಸ್‌ 20ಕ್ಕೆ2, ಸುರವಿ ಸುಬ್ರತಾ ರಾಯ್‌ 13ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ 6 ವಿಕೆಟ್‌ ಗೆಲುವು.

ಪ್ರತಿಕ್ರಿಯಿಸಿ (+)