ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಕರ್ನಾಟಕಕ್ಕೆ ಗೆಲುವು

Last Updated 25 ಫೆಬ್ರುವರಿ 2020, 19:45 IST
ಅಕ್ಷರ ಗಾತ್ರ

ಬೆಂಗಳೂರು: ಜಿ.ದಿವ್ಯಾ (90; 115ಎ, 12ಬೌಂ) ಮತ್ತು ಕೆ.ರಕ್ಷಿತಾ (ಔಟಾಗದೆ 52) ಅವರ ಅರ್ಧಶತಕಗಳ ಬಲದಿಂದ ಕರ್ನಾಟಕ ತಂಡ ಬಿಸಿಸಿಐ ಸೀನಿಯರ್‌ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ 98ರನ್‌ಗಳಿಂದ ತ್ರಿಪುರ ತಂಡವನ್ನು ಮಣಿಸಿದೆ.

ಹಿಮಾಚಲ ಪ್ರದೇಶದ ಉನಾ ಜಿಲ್ಲೆಯ ಜೆಎನ್‌ವಿ ಶಾಲಾ ಮೈದಾನದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ 50 ಓವರ್‌ಗಳಲ್ಲಿ 3 ವಿಕೆಟ್‌ಗೆ 218ರನ್‌ ದಾಖಲಿಸಿತು. ಗುರಿ ಬೆನ್ನಟ್ಟಿದ ತ್ರಿಪುರ, ಆಕಾಂಕ್ಷಾ ಕೊಹ್ಲಿ (16ಕ್ಕೆ3) ಮತ್ತು ಸಹನಾ ಎಸ್‌.ಪವಾರ್‌ (9ಕ್ಕೆ2) ಅವರ ದಾಳಿಗೆ ತತ್ತರಿಸಿತು. ಈ ತಂಡ 50 ಓವರ್‌ಗಳಲ್ಲಿ 9 ವಿಕೆಟ್‌ಗೆ 120ರನ್‌ ಗಳಿಸಲಷ್ಟೇ ಶಕ್ತವಾಯಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ; 50 ಓವರ್‌ಗಳಲ್ಲಿ 3 ವಿಕೆಟ್‌ಗೆ 218 (ಎಸ್‌.ಶುಭಾ 40, ಜಿ.ದಿವ್ಯಾ 90, ಕೆ.ರಕ್ಷಿತಾ ಔಟಾಗದೆ 52, ಸಿ.ಪ್ರತ್ಯೂಷಾ ಔಟಾಗದೆ 29).

ತ್ರಿಪುರ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 120 (ಇಂದ್ರಾ ರಾಣಿ ಜಮಾತಿಯಾ 33, ಆರ್‌.ಆರ್‌.ಸಹಾ 22; ವಿ.ಚಂದು 24ಕ್ಕೆ2, ಸಹನಾ ಎಸ್‌.ಪವಾರ್‌ 9ಕ್ಕೆ2, ಆಕಾಂಕ್ಷಾ ಕೊಹ್ಲಿ 16ಕ್ಕೆ3). ಫಲಿತಾಂಶ: ಕರ್ನಾಟಕಕ್ಕೆ 98ರನ್‌ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT