ಶನಿವಾರ, ಏಪ್ರಿಲ್ 4, 2020
19 °C

ಕ್ರಿಕೆಟ್‌: ಕರ್ನಾಟಕ ತಂಡಕ್ಕೆ ಗೆಲುವು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಸಿ. ಪ್ರತ್ಯೂಷಾ ಅವರ ಬೌಲಿಂಗ್‌,  ಜಿ.ದಿವ್ಯಾ ಹಾಗೂ ರಕ್ಷಿತಾ ಕೆ. ಅವರ ಅರ್ಧಶತಕಗಳ ನೆರವಿನಿಂದ ಕರ್ನಾಟಕ ತಂಡ ಬಿಸಿಸಿಐ ಮಹಿಳಾ ಏಕದಿನ ಟ್ರೋಫಿ ಕ್ರಿಕೆಟ್‌ ಪಂದ್ಯದಲ್ಲಿ ಬರೋಡಾ ತಂಡವನ್ನು 48 ರನ್‌ಗಳಿಂದ ಸೋಲಿಸಿತು.

ಹಿಮಾಚಲ ಪ್ರದೇಶದ ಉನಾದ ಸಂತೋಷ್‌ಗಡ ಕ್ರೀಡಾಂಗಣದಲ್ಲಿ ಭಾನುವಾರ ಮೊದಲು ಬ್ಯಾಟ್‌ ಮಾಡಿದ ಕರ್ನಾಟಕ ಏಳು ವಿಕೆಟ್‌ಗೆ 169 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಬರೋಡಾ 35.2 ಓವರ್‌ಗಳಲ್ಲಿ 121 ರನ್‌ಗಳಿಸಿ ಎಲ್ಲ ವಿಕೆಟ್‌ ಒಪ್ಪಿಸಿತು.

ಸಂಕ್ಷಿಪ್ತ ಸ್ಕೋರ್‌: ಕರ್ನಾಟಕ: 37 ಓವರ್‌ಗಳಲ್ಲಿ 7 ವಿಕೆಟ್‌ಗೆ 169 (ಜಿ.ದಿವ್ಯಾ 59, ರಕ್ಷಿತಾ ಕೆ. 57; ತರನ್ನುಮ್‌ ಪಠಾಣ್‌ 28ಕ್ಕೆ3, ಜೆ.ಮೋಹಿತೆ 23ಕ್ಕೆ1) ಬರೋಡಾ: 35.2 ಓವರ್‌ಗಳಲ್ಲಿ 121ಕ್ಕೆ ಆಲೌಟ್‌. (ಪಿ.ಎ. ಪಟೇಲ್‌ 29, ತನ್ವೀರ್‌ ಶೇಖ್‌ 16, ಜೆ.ಮೋಹಿತೆ 15; ಸಿ.ಪ್ರತ್ಯೂಷಾ 23ಕ್ಕೆ 6, ನಿಕಿ ಪ್ರಸಾದ್‌ 13ಕ್ಕೆ 2): ಫಲಿತಾಂಶ: ಕರ್ನಾಟಕಕ್ಕೆ48 ರನ್‌ಗಳ ಗೆಲುವು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು