ರಶೀದ್‌ ಖಾನ್‌, ನಬಿಗೆ ಸ್ಥಾನ

ಗುರುವಾರ , ಮೇ 23, 2019
28 °C

ಫಲಿತಾಂಶ (ಮುನ್ನಡೆ+ಗೆಲುವು) 0/542LIVE

ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಗೆ ಅಫ್ಗಾನಿಸ್ತಾನ ತಂಡ ಪ್ರಕಟ

ರಶೀದ್‌ ಖಾನ್‌, ನಬಿಗೆ ಸ್ಥಾನ

Published:
Updated:
Prajavani

ಕಾಬೂಲ್‌: ವಿಶ್ವಕಪ್‌ ಕ್ರಿಕೆಟ್ ಟೂರ್ನಿಗೆ ಅಫ್ಗಾನಿಸ್ತಾನ ತಂಡವನ್ನು ಆಯ್ಕೆ ಮಾಡಲಾಗಿದ್ದು, ಐಪಿಎಲ್‌ನಲ್ಲಿ ಮಿಂಚುತ್ತಿರುವ ರಶೀದ್‌ ಖಾನ್‌ ಮತ್ತು ಮೊಹಮ್ಮದ್ ನಬಿ ಸ್ಥಾನ ಪಡೆದಿದ್ದಾರೆ.

ಸೋಮವಾರ ಅಫ್ಗಾನಿಸ್ತಾನ ಕ್ರಿಕೆಟ್‌ ಮಂಡಳಿಯು 15 ಆಟಗಾರರ ತಂಡವನ್ನು ಪ್ರಕಟಿಸಿದ್ದು, ಗುಲ್ಬದೀನ್ ನಯೀಬ್‌ ಅವರಿಗೆ ನಾಯಕತ್ವದ ಜವಾಬ್ದಾರಿ ನೀಡಿದೆ. ಅನುಭವಿ ಆಟಗಾರರಾದ ಹಮೀದ್‌ ಹಸನ್‌ ಮತ್ತು ಅಸ್ಘರ್‌ ಅಫ್ಘಾನ್‌ ತಂಡದಲ್ಲಿದ್ದಾರೆ.

ಅಫ್ಘಾನ್‌ ಅವರನ್ನು ಈ ವರ್ಷದ ಆರಂಭದಲ್ಲಿ ಎಲ್ಲ ಮಾದರಿಯ ಕ್ರಿಕೆಟ್‌ ನಾಯಕತ್ವದಿಂದ ಕೆಳಗಿಳಿಸಲಾಗಿತ್ತು. ಹಮೀದ್‌ ಹಸನ್‌ ಗಾಯದ ಸಮಸ್ಯೆಯಿಂದ ಮೂರು ವರ್ಷ ಅಂಗಳಕ್ಕೆ ಇಳಿದಿರಲಿಲ್ಲ. ವಿಕೆಟ್‌ ಕೀಪರ್‌ ಮೊಹಮ್ಮದ್‌ ಶೆಹಜಾದ್‌ ಮತ್ತು ಸ್ಪಿನ್ನರ್‌ ಮುಜೀಬ್‌ ಉರ್‌ ರೆಹಮಾನ್ ಅವರಿಗೂ ಸ್ಥಾನ ಲಭಿಸಿದೆ.

ತಂಡ ಇಂತಿದೆ: ಗುಲ್ಬದೀನ್‌ ನಯೀಬ್‌ (ನಾಯಕ), ಮೊಹಮ್ಮದ್‌ ಶೆಹಜಾದ್‌, ನೂರ್‌ ಆಲಿ ಜದ್ರಾ‌ನ್‌, ಹಜರತ್‌ವುಲ್ಲ ಜಜಾಯ್, ರಹಮತ್‌ ಶಾ, ಅಸ್ಘರ್‌ ಅಫ್ಘಾನ್, ಹಶ್ಮತ್‌ವುಲ್ಲ ಶಹೀದಿ, ನಜೀಬುಲ್ಲ ಜದ್ರಾನ್ ಶಮೀವುಲ್ಲಾ ಶಿನ್ವಾರಿ, ಮೊಹಮ್ಮದ್‌ ನಬಿ, ರಶೀದ್‌ ಖಾನ್‌, ದೌಲತ್‌ ಜದ್ರಾನ್, ಅಫ್ತಾಬ್‌ ಆಲಂ, ಹಮೀದ್‌ ಹಸನ್‌, ಮುಜೀಬ್ ಉರ್‌ ರೆಹಮಾನ್  

ಇರ್ತಾರಾ ಮೋದಿ? ಬರ್ತಾರಾ ರಾಹುಲ್?

ಲೋಕಸಭೆ ಫಲಿತಾಂಶಕ್ಕಾಗಿ ವಿಶ್ವವೇ ಬೆರಗುಗಣ್ಣಿನಿಂದ ಕಾಯುತ್ತಿದೆ. ನರೇಂದ್ರ ಮೋದಿ ಗೆಲ್ತಾರಾ? ರಾಹುಲ್‌ ಗಾಂಧಿ ಬರ್ತಾರಾ? ರಾಜಕಾರಣದ ಕ್ಷಣಕ್ಷಣದ ಮಾಹಿತಿ, ತಾಜಾ ಅಪ್‌ಡೇಟ್‌ಗಳಿಗಾಗಿ www.prajavani.net/prajamatha ನೋಡಿ.

ಫೇಸ್‌ಬುಕ್‌ನಲ್ಲಿ ನಮ್ಮನ್ನು ಲೈಕ್ ಮಾಡಿ ಅಥವಾ ಟ್ವಿಟರ್, ಯೂಟ್ಯೂಬ್, ಇನ್‌ಸ್ಟಾಗ್ರಾಂನಲ್ಲಿ ಫಾಲೊ ಮಾಡಿ.

ತ್ವರಿತ ಸುದ್ದಿ, ನಿಖರ ವಿಶ್ಲೇಷಣೆಗೆ www.prajavani.net ಓದಿ. 'ಪ್ರಜಾವಾಣಿ' ಅತ್ಯಂತ ವಿಶ್ವಾಸಾರ್ಹ ಸುದ್ದಿ ಮಾಧ್ಯಮ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !