ಕಿಂಗ್ಸ್‌ಗೆ ಸನ್‌ರೈಸರ್ಸ್ ಸವಾಲು ಇಂದು

ಬುಧವಾರ, ಏಪ್ರಿಲ್ 24, 2019
31 °C

ಕಿಂಗ್ಸ್‌ಗೆ ಸನ್‌ರೈಸರ್ಸ್ ಸವಾಲು ಇಂದು

Published:
Updated:
Prajavani

ಮೊಹಾಲಿ: ಡೇವಿಡ್ ವಾರ್ನರ್ ಮತ್ತು ಜಾನಿ ಬೆಸ್ಟೊ ಅವರಂತಹ ಸ್ಫೋಟಕ ಆರಂಭಿಕ ಬ್ಯಾಟಿಂಗ್ ಜೋಡಿ ಇರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವನ್ನು ಸೋಮವಾರ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರಿಸಲಿದೆ.

ಸನ್‌ರೈಸರ್ಸ್‌ ತಂಡವು ಐದು ಪಂದ್ಯಗಳನ್ನು ಆಡಿದ್ದು ಮೂರರಲ್ಲಿ ಗೆದ್ದು ಎರಡರಲ್ಲಿ ಸೋತಿದೆ. ಕಿಂಗ್ಸ್‌ ಸಾಧನೆಯೂ ಅಷ್ಟೇ ಇದೆ. ಆದರೆ, ರನ್‌ ಗಳಿಕೆಯ ಸರಾಸರಿಯಲ್ಲಿ ಸನ್‌ರೈಸರ್‌ ಮುಂದಿದೆ.

ಆಲ್‌ರೌಂಡ್‌ ತಂಡವೆಂಬ ಹೆಗ್ಗಳಿಕೆಯೂ ಕೇನ್ ವಿಲಿಯಮ್ಸನ್‌ ಬಳಗಕ್ಕೆ ಇದೆ. ತನ್ನ ಐದನೇ ಪಂದ್ಯದಲ್ಲಿ ಸನ್‌
ರೈಸರ್ಸ್‌ ತಂಡವು  ಮುಂಬೈ ಇಂಡಿಯನ್ಸ್‌ ಎದುರು ಸಾಧಾರಣ ಗುರಿಯನ್ನು  ಸಾಧಿಸಲಾಗದೇ ಸೋತಿತ್ತು.

ಆದರೆ ಆ ಸೋಲಿನ ಆಘಾತದಿಂದ ಹೊರಬರುವ ಛಲದೊಂದಿಗೆ ತಂಡವು ಕಿಂಗ್ಸ್‌ ವಿರುದ್ಧ ಕಣಕ್ಕೆ ಇಳಿಯಲಿದೆ.

ಕಿಂಗ್ಸ್‌ ತಂಡದಲ್ಲಿ ಕನ್ನಡಿಗರಾದ ಕೆ.ಎಲ್. ರಾಹುಲ್, ಕರುಣ್ ನಾಯರ್ ಮತ್ತು ಮಯಂಕ್ ಅಗರವಾಲ್ ಇದ್ದಾರೆ. ಕ್ರಿಸ್‌ ಗೇಲ್ ಚೇತರಿಸಿಕೊಂಡು ಮರಳಿದರೆ ತಂಡದ ಬಲ ಹೆಚ್ಚಲಿದೆ. ಸನ್‌ರೈಸರ್ಸ್‌ ತಂಡಕ್ಕೆ ಕೇನ್ ವಿಲಿಯಮ್ಸನ್‌ ಮರಳುವ ಸಾಧ್ಯತೆ ಇದೆ. ಹೋದ ಪಂದ್ಯದಲ್ಲಿ ಅವರು ವಿಶ್ರಾಂತಿ ಪಡೆದಿದ್ದರು. ಭುವನೇಶ್ವರ್ ಕುಮಾರ್ ನಾಯಕತ್ವ ವಹಿಸಿದ್ದರು.

ಬರಹ ಇಷ್ಟವಾಯಿತೆ?

 • 1

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !