ಭಾನುವಾರ, ನವೆಂಬರ್ 1, 2020
20 °C

ಟಾಸ್ ಗೆದ್ದ ಕಿಂಗ್‌ ಕೆಎಲ್: ಕಣದಲ್ಲಿ ಇಲ್ಲ ಗೇಲ್‌!

ಪಿಟಿಐ Updated:

ಅಕ್ಷರ ಗಾತ್ರ : | |

ಕೆ.ಎಲ್. ರಾಹುಲ್

ದುಬೈ:  ಕನ್ನಡಿಗ ಕೆ.ಎಲ್. ರಾಹುಲ್ ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ನಾಯಕತ್ವ ವಹಿಸಿಕೊಂಡ ನಂತರ ಆಡುತ್ತಿರುವ ಮೊದಲ ಪಂದ್ಯದಲ್ಲಿ ಟಾಸ್ ಗೆದ್ದರು. ಫೀಲ್ಡಿಂಗ್ ಮಾಡಲು ನಿರ್ಧರಿಸಿದರು.

ಈ ಪಂದ್ಯದಲ್ಲಿ ಕಣಕ್ಕಿಳಿಯಲಿರುವ ಕಿಂಗ್ಸ್‌ ತಂಡದಲ್ಲಿ ರಾಹುಲ್ ಸೇರಿ ನಾಲ್ವರು ಕನ್ನಡಿಗರು ಇದ್ದಾರೆ. ಮಯಂಕ್ ಅಗರವಾಲ್, ಕರುಣ್ ನಾಯರ್ ಮತ್ತು ಕೃಷ್ಣಪ್ಪ ಗೌತಮ್ ಸ್ಥಾನ ಪಡೆದುಕೊಂಡಿದ್ಧಾರೆ. ಆದರೆ, ಸ್ಪೋಟಕ ಬ್ಯಾಟ್ಸ್‌ಮನ್, ವಿಂಡೀಸ್‌ನ ಕ್ರಿಸ್‌ ಗೇಲ್‌ ಅವರಿಗೆ ಸ್ಥಾನ ಸಿಕ್ಕಿಲ್ಲ. ಗ್ಲೆನ್ ಮ್ಯಾಕ್ಸ್‌ವೆಲ್, ನಿಕೊಲಸ್ ಪೂರನ್, ಕ್ರಿಸ್ ಜೋರ್ಡಾನ್ ಮತ್ತು ಶೆಲ್ಡನ್ ಕಾಟ್ರೆಲ್ ತಂಡದಲ್ಲಿ ಸ್ಥಾನ ಪಡೆದಿರುವ ವಿದೇಶಿಗರು. ಮೊಹಮ್ಮದ್ ಶಮಿ, ಸರ್ಫರಾಜ್ ಖಾನ್, ರವಿ ಬಿಷ್ಣೋಯ್‌ ಕೂಡ ಆಡಲಿದ್ದಾರೆ. 

ಶ್ರೇಯಸ್ ಅಯ್ಯರ್ ಬಳಗದ ಡೆಲ್ಲಿ ಕ್ಯಾಪಿಟಲ್ಸ್‌ನಲ್ಲಿ ಅನುಭವಿ ಬ್ಯಾಟ್ಸ್‌ಮನ್ ಅಜಿಂಕ್ಯ ರಹಾನೆ ಅವರಿಗೆ ಅಂತಿಮ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿಲ್ಲ.  ಪೃಥ್ವಿ ಶಾ, ಶಿಖರ್ ಧವನ್, ರಿಷಭ್ ಪಂತ್, ಆಲ್‌ರೌಂಡರ್‌ಗಳಾದ ಅಕ್ಷರ್ ಪಟೇಲ್, ಆರ್. ಅಶ್ವಿನ್ ಇದ್ದಾರೆ. ವೇಗಿ ಕಗಿಸೊ ರಬಾಡ, ಎನ್ರಿಚ್ ನೊರ್ಜೆ, ಶಿಮ್ರನ್ ಹೆಟ್ಮೆಯರ್, ಮಾರ್ಕಸ್ ಸ್ಟೋಯಿನಿಸ್ ಅವರಿಗೆ ಅವಕಾಶ ಲಭಿಸಿದೆ.

ಕ್ಷಣಕ್ಷಣದ ಅಪ್‌ಡೇಟ್: IPL-2020: ಟಾಸ್ ಗೆದ್ದ ಪಂಜಾಬ್ ಬೌಲಿಂಗ್ ಆಯ್ಕೆ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು