ಕೋವಿಡ್: ಕಿರಣ್ ಮೋರೆ ಗುಣಮುಖ

ಮುಂಬೈ : ಕೋವಿಡ್–19 ಸೋಂಕಿತರಾಗಿದ್ದ, ಭಾರತ ಕ್ರಿಕೆಟ್ ತಂಡದ ಮಾಜಿ ವಿಕೆಟ್ ಕೀಪರ್ ಕಿರಣ್ ಮೋರೆ ಚೇತರಿಸಿಕೊಂಡಿದ್ದಾರೆ. ಅವರು ತಂಡದ ಬಯೋಬಬಲ್ ಸೇರಿಕೊಳ್ಳಲಿದ್ದಾರೆ ಎಂದು ಮುಂಬೈ ಇಂಡಿಯನ್ಸ್ ಫ್ರಾಂಚೈಸ್ ಬುಧವಾರ ಹೇಳಿದೆ. ಮೋರೆ ಅವರು ಮುಂಬೈ ಇಂಡಿಯನ್ಸ್ ತಂಡಕ್ಕೆ ವಿಕೆಟ್ ಕೀಪಿಂಗ್ ಹಾಗೂ ಪ್ರತಿಭಾ ಶೋಧದ ಸಲಹೆಗಾರರಾಗಿದ್ದಾರೆ.
58 ವರ್ಷದ ಮೋರೆ ಅವರಿಗೆ ಏಪ್ರಿಲ್ ಆರರಂದು ಸೋಂಕು ದೃಢಪಟ್ಟಿತ್ತು.
‘ಕಿರಣ್ ಮೋರೆ ಗುಣಮುಖರಾಗಿದ್ದಾರೆ. ವೈದ್ಯಕೀಯ ನಿಗಾದಲ್ಲಿ ಪ್ರತ್ಯೇಕವಾಸವನ್ನೂ ಪೂರ್ಣಗೊಳಿಸಿದ್ದಾರೆ‘ ಎಂದು ಫ್ರಾಂಚೈಸ್ ಟ್ವೀಟ್ ಮಾಡಿದೆ.
ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.