ಬುಧವಾರ, ಅಕ್ಟೋಬರ್ 16, 2019
28 °C

ಕೆಕೆಆರ್‌ಗೆ ಡೇವಿಡ್‌ ಹಸ್ಸಿ ಮುಖ್ಯ ಸಲಹೆಗಾರ

Published:
Updated:
Prajavani

ನವದೆಹಲಿ : ಆಸ್ಟ್ರೇಲಿಯಾದ ಹಿರಿಯ ಕ್ರಿಕೆಟಿಗ ಡೇವಿಡ್‌ ಹಸ್ಸಿ ಅವರು ಐಪಿಎಲ್‌ನಲ್ಲಿ ಆಡುವ ಕೋಲ್ಕತ್ತ ನೈಟ್‌ ರೈಡರ್ಸ್‌ ತಂಡದ ಮುಖ್ಯ ಸಲಹೆಗಾರರಾಗಿ ಶನಿವಾರ ನೇಮಕಗೊಂಡಿದ್ದಾರೆ.

ನ್ಯೂಜಿಲೆಂಡ್‌ನ ಹಿರಿಯ ಆಟಗಾರ ಕೈಲ್‌ ಮಿಲ್ಸ್‌ ಅವರನ್ನು ಬೌಲಿಂಗ್‌ ಕೋಚ್‌ ಆಗಿ ನೇಮಿಸಲಾಗಿದೆ. ನ್ಯೂಜಿಲೆಂಡ್‌ನ ಬ್ರೆಂಡನ್‌ ಮೆಕ್ಲಮ್‌ ಅವರು ತಂಡದ ಮುಖ್ಯ ಕೋಚ್‌ ಆಗಿದ್ದಾರೆ.

‘ಡೇವಿಡ್‌ ಹಸ್ಸಿ ಮತ್ತು ಮಿಲ್ಸ್‌ ಅವರು ಕೆಕೆಆರ್‌ ತಂಡದ ಭಾಗವಾಗಿರುವುದು ಖುಷಿಯ ವಿಚಾರ. ಅವರು ತಂಡದ ಯಶಸ್ಸಿಗಾಗಿ ಶ್ರಮಿಸಲಿದ್ದಾರೆ’ ಎಂದು ಕೆಕೆಆರ್‌ ತಂಡದ ಸಿಇಒ ವೆಂಕಿ ಮೈಸೂರು, ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

42 ವರ್ಷದ ಹಸ್ಸಿ ಅವರು 2008ರಿಂದ 2010ರವರೆಗೆ ಕೆಕೆಆರ್‌ ಪರ ಹಲವು ಪಂದ್ಯಗಳನ್ನು ಆಡಿದ್ದರು. ಮಿಲ್ಸ್‌ ಅವರು ಏಕದಿನ ಮಾದರಿಯಲ್ಲಿ ಅತೀ ಹೆಚ್ಚು ವಿಕೆಟ್‌ ಪಡೆದ ನ್ಯೂಜಿಲೆಂಡ್‌ನ ಎರಡನೇ ಬೌಲರ್‌ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.

Post Comments (+)