ಶುಕ್ರವಾರ, ಸೆಪ್ಟೆಂಬರ್ 20, 2019
28 °C
ಮಾಲಿಂಗಗೆ ಮೂರು; ಬೂಮ್ರಾಗೆ ಎರಡು ವಿಕೆಟ್

ಕೆಕೆಆರ್: ಸಾಧಾರಣ ಮೊತ್ತ

Published:
Updated:
Prajavani

ಮುಂಬೈ: ಮುಂಬೈ ಇಂಡಿಯನ್ಸ್‌ ತಂಡದ ಮಧ್ಯಮವೇಗಿಗಳ ಪ್ರತಾಪದ ಮುಂದೆ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ಬ್ಯಾಟ್ಂಗ್ ಪಡೆ ಮಂಕಾಯಿತು.

ವಾಂಖೆಡೆ ಕ್ರೀಡಾಂಗಣದಲ್ಲಿ ಭಾನುವಾರ ರಾತ್ರಿ ನಡೆದ  ಕೊನೆಯ ಲೀಗ್ ಪಂದ್ಯದಲ್ಲಿ ಕೋಲ್ಕತ್ತ ನೈಟ್ ರೈಡರ್ಸ್‌ 20 ಓವರ್‌ಗಳಲ್ಲಿ 7 ವಿಕೆಟ್‌ ಗಳಿಗೆ 133 ರನ್ ಗಳಿಸಿತು. ಮುಂಬೈ ತಂಡಕ್ಕೆ ಸಾಧಾರಣ ಗುರಿ ನೀಡಿತು.

ಪ್ಲೇ ಆಫ್‌ ಪ್ರವೇಶಿಸಲು ಈ ಪಂದ್ಯವನ್ನು ಗೆಲ್ಲುವ ಒತ್ತಡದಲ್ಲಿ ಕೆಕೆಆರ್‌ ಇತ್ತು. ಮುಂಬೈ ತಂಡವು ಈಗಾಗಲೇ ಪ್ಲೇ ಆಫ್‌ ಪ್ರವೇಶಿಸಿದೆ. ಟಾಸ್ ಗೆದ್ದ ಆತಿಥೇಯ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು.

ತಂಡದ ಮೂವರು ಮಧ್ಯಮವೇಗಿಗಳಾದ ಲಸಿತ್ ಮಾಲಿಂಗ (35ಕ್ಕೆ3), ಹಾರ್ದಿಕ್ ಪಾಂಡ್ಯ (20ಕ್ಕೆ2) ಮತ್ತು ಜಸ್‌ಪ್ರೀತ್ ಬೂಮ್ರಾ (31ಕ್ಕೆ2) ಅವರ ಪರಿಣಾಮಕಾರಿ ದಾಳಿಯಿಂದಾಗಿ ಕೆಕೆಆರ್ ದೊಡ್ಡ ಮೊತ್ತ ಗಳಿಸಲಿಲ್ಲ.

ಬ್ಯಾಟಿಂಗ್ ಆರಂಭಿಸಿದ ಕೋಲ್ಕತ್ತ ತಂಡದ   ಶುಭಮನ್ ಗಿಲ್ ಇಲ್ಲಿ ಮುಗ್ಗರಿಸಿದರು. ಕೇವಲ 9 ರನ್ ಗಳಿಸಿ ಔಟಾದರು. ಇನ್ನೊಂದು ಬದಿಯಲ್ಲಿ ಕ್ರಿಸ್ ಲಿನ್ (41 ರನ್) ಉತ್ತಮವಾಗಿ ಆಡುತ್ತಿದ್ದರು. ಆದರೆ, ಅವರೂ   ಒಂಬತ್ತನೇ ಓವರ್‌ನಲ್ಲಿ ಕ್ರಿಸ್ ಲಿನ್ ಔಟಾದರು. ಈ ಹಂತದಲ್ಲಿ ಕ್ರೀಸ್‌ಗೆ ಬಂದ ರಾಬಿನ್ ಉತ್ತಪ್ಪ (40; 47ಎಸೆತ, 1ಬೌಂಡರಿ, 3ಸಿಕ್ಸರ್) ಏಕಾಂಗಿ ಹೋರಾಟ ನಡೆಸಿದರು. ದಿನೇಶ್ ಕಾರ್ತಿಕ್ ಮೂರು ರನ್‌ ಗಳಿಸಿದರು.

ಟೂರ್ನಿಯುದ್ದಕ್ಕೂ ಸ್ಫೋಟಕ ಬ್ಯಾಟಿಂಗ್ ಮಾಡಿದ್ದ ಆ್ಯಂಡ್ರೆ ರಸೆಲ್ ಇಲ್ಲಿ ಖಾತೆ ತೆರೆಯಲಿಲ್ಲ. ಅವರಿಗೆ ಲಸಿತ್ ಮಾಲಿಂಗ ಅವರ ಮೊದಲ ಎಸೆತದಲ್ಲಿಯೇ ಡಗ್‌ಔಟ್ ದಾರಿ ತೋರಿಸಿದರು. ಇದು ಕೆಕೆಆರ್‌ಗೆ ದುಬಾರಿಯಾಯಿತು.

ರಾಬಿನ್ ಕೊನೆಯ ಓವರ್‌ನವರೆಗೂ ತಮ್ಮ ಹೋರಾಟ ಮಾಡಿದರು. ಇನಿಂಗ್ಸ್‌ನಲ್ಲಿ ಇನ್ನೊಂದು ಎಸೆತ ಬಾಕಿಯಿರುವಾಗ ಔಟಾದರು. 

Post Comments (+)