ಕೋಲ್ಕತ್ತ : ಕೋಲ್ಕತ್ತ ನೈಟ್ ರೈಡರ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಭಾನುವಾರ ನಡೆಯುವ ಐಪಿಎಲ್ ಋತುವಿನ ಕೊನೆಯ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ. ‘ಲೆಕ್ಕ’ದ ಪ್ರಕಾರ ಎರಡೂ ತಂಡಗಳ ಪ್ಲೇ ಆಫ್ ಅವಕಾಶ ಜೀವಂತವಾಗಿದ್ದರೂ ಅದು ಕ್ಷೀಣವಾಗಿದೆ.

ಕೆಕೆಆರ್ ಈಗ ಆರನೇ ಮತ್ತು ಡೆಲ್ಲಿ ತಂಡ ಎಂಟನೇ ಸ್ಥಾನದಲ್ಲಿವೆ. ಆದರೆ ಈ ಪಂದ್ಯಕ್ಕೆ ಮೊದಲು ನಡೆಯುವ ಮುಂಬೈ ಇಂಡಿಯಲ್ಸ್– ರಾಜಸ್ಥಾನ ರಾಯಲ್ಸ್ ಪಂದ್ಯದಲ್ಲಿ ರಾಯಲ್ಸ್ ಗೆದ್ದರೆ, ಈ ಪಂದ್ಯಕ್ಕೇನೂ ಮಹತ್ವ ಇರುವುದಿಲ್ಲ. ಲೆಕ್ಕಾಚಾರಗಳೇನೇ ಇರಲಿ, ಎರಡೂ ತಂಡಗಳಿಗೆ ಗೆಲುವಿನೊಡನೆ ಅಭಿಯಾನ ಮುಗಿಸುವುದು ಮುಖ್ಯವಾಗಿದೆ.

ಬೌಲರ್ಗಳು ಗಾಯಾಳಾಗಿದ್ದು, ಈ ಋತುವಿನಲ್ಲಿ ಕೋಲ್ಕತ್ತ ನೈಟ್ರೈಡರ್ಸ್ ತಂಡದ ಅಭಿಯಾನದ ಮೇಲೆ ಪರಿಣಾಮ ಬೀರಿತು. ಬಾಂಗ್ಲಾದೇಶದ ವೇಗಿ ಮುಸ್ತಫಿಜುರ್ ರಹಮಾನ್ ಅವರನ್ನು ತಂಡದಿಂದ ಕೈಬಿಡಬೇಕಾಯಿತು. ಹರ್ಷಿತ್ ರಾಣಾ, ಆಕಾಶ್ ದೀಪ್, ಮಥೀಶ ಪಥಿರಾಣ ಕೂಡ ಅಲಭ್ಯರಾದರು. ಆಸ್ಟ್ರೇಲಿಯಾದ ಆಲ್ರೌಂಡರ್ ಕ್ಯಾಮರೂನ್ ಗ್ರೀನ್ ಆರಂಭದ ಕೆಲವು ಪಂದ್ಯಗಳಲ್ಲಿ ಬೌಲಿಂಗ್ ಮಾಡಲಿಲ್ಲ.

ಅಮೋಘ ಚೇತರಿಕೆ:

ಆದರೆ ಆರಂಭದಲ್ಲಿ ಸತತವಾಗಿ ಹಿನ್ನಡೆ ಕಂಡಿದ್ದ ಅಜಿಂಕ್ಯ ರಹಾನೆ ನೇತೃತ್ವದ ತಂಡ ನಂತರ ಅಮೋಘವಾಗಿ ಚೇತರಿಸಿದೆ. ಆಡಿದ ಕೊನೆಯ ಏಳು ಪಂದ್ಯಗಳಲ್ಲಿ ಆರರಲ್ಲಿ ಜಯಗಳಿಸಿದೆ.

ರಘುವಂಶಿ ಅಲಭ್ಯ:

ಐದು ಅರ್ಧಶತಕಗಳೊಂದಿಗೆ ತಂಡದ ಪರ ಅತಿ ಹೆಚ್ಚು ರನ್ ಗಳಿಸಿರುವ ಮಧ್ಯಮ ಸರದಿಯ ಬ್ಯಾಟರ್ ಅಂಗ್ಕ್ರಿಶ್ ರಘುವಂಶಿ ಈ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ಪಾದದ ನೋವಿನಿಂದ ಬಳಲುತ್ತಿರುವ ವರುಣ್ ಚಕ್ರವರ್ತಿ ಅವರೂ ಫಿಟ್ನೆಸ್ ಪರೀಕ್ಷೆಗೆ ಒಳಗಾಗಗಲಿದ್ದು, ಅವರ ಲಭ್ಯತೆ ಕೊನೆಯ ಗಳಿಗೆಯಲ್ಲಿ ನಿರ್ಧಾರವಾಗಲಿದೆ.

ರಾಹುಲ್ ಮೇಲೆ ಭಾರ:

ಡೆಲ್ಲಿ ಕ್ಯಾಪಿಟಲ್ಸ್ ತಂಡವು ದೊಡ್ಡ ಮೊತ್ತಕ್ಕಾಗಿ ಕೆ.ಎಲ್.ರಾಹುಲ್ ಅವರನ್ನು ಅವಲಂಬಿಸಿದೆ. ಕನ್ನಡಿಗ ಆಟಗಾರ ಈವರೆಗೆ 13 ಪಂದ್ಯಗಳಿಂದ 533 ರನ್ ಕಲೆಹಾಕಿದ್ದಾರೆ. ಸ್ಟ್ರೈಕ್ರೇಟ್ (171) ಕೂಡ ಉತ್ತಮವಾಗಿದೆ. ಡೇವಿಡ್ ಮಿಲ್ಲರ್ ತಂಡಕ್ಕೆ ಮರಳಿರುವುದು ಬ್ಯಾಟಿಂಗ್ ವಿಭಾಗಕ್ಕೆ ಬಲತಂದಿದೆ.

ಬೌಲಿಂಗ್ ವಿಭಾಗ ಅಷ್ಟೇನೂ ಪರಿಣಾಮಕಾರಿ ಎನಿಸಿಲ್ಲ. ವಿಶೇಷವಾಗಿ ಅನುಭವಿಗಳಾದ ನಾಯಕ ವರುಣ್ ಚಕ್ರವರ್ತಿ ಮತ್ತು ಕುಲದೀಪ್ ಯಾದವ್ ಅವರಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಅಕ್ಷರ್ 32.30ರ ಸರಾಸರಿಯಲ್ಲಿ 10 ವಿಕೆಟ್ ಅಷ್ಟೇ ಗಳಿಸಿದ್ದಾರೆ. ಕುಲದೀಪ್ ಏಳು ವಿಕೆಟ್ ಗಳಿಸಿದ್ದರೂ, ಸರಾಸರಿ 50.28 ಆಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.