ರಾಯಪುರ (ಪಿಟಿಐ): ವಿರಾಟ್ ಕೊಹ್ಲಿ ಅವರು ತಾವು ಚೇಸಿಂಗ್ ಮಾಸ್ಟರ್ ಎಂಬುದನ್ನು ಮತ್ತೊಮ್ಮೆ ಸಾಬೀತು ಮಾಡಿದರು. ಬುಧವಾರ ರಾತ್ರಿ ಕೋಲ್ಕತ್ತ ನೈಟ್ ರೈಡರ್ಸ್ ಎದುರು ಕೊಹ್ಲಿ (ಅಜೇಯ 105; 60ಎಸೆತ) ಶತಕ ಗಳಿಸಿದರು. ಜೊತೆಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 6 ವಿಕೆಟ್ಗಳಿಂದ ಜಯಿಸಲು ಕಾರಣರಾದರು.

193 ರನ್ಗಳ ಗುರಿ ಬೆನ್ನಟ್ಟಿದ್ದ ಆರ್ಸಿಬಿಯ ಮೊದಲ ವಿಕೆಟ್ (ಜೇಕಬ್ ಬೆಥೆಲ್) ಬೇಗನೆ ಪತನವಾಯಿತು. ಕೊಹ್ಲಿ ಅವರನ್ನೂ ಬೇಗನೆ ಔಟ್ ಮಾಡುವ ಅವಕಾಶ ಇತ್ತು. ಅವರು 21 ರನ್ ಗಳಿಸಿದ್ದ ಸಂದರ್ಭದಲ್ಲಿ ರೋವ್ಮನ್ ಪೊವೆಲ್ ಅವರು ಕ್ಯಾಚ್ ಕೈಚೆಲ್ಲಿದರು. ಇದು ಕೋಲ್ಕತ್ತ ತಂಡಕ್ಕೆ ದುಬಾರಿಯಾಯಿತು. ವಿರಾಟ್ ಅವರು ದೇವದತ್ತ ಪಡಿಕ್ಕಲ್ (39 ರನ್) ಅವರೊಂದಿಗೆ ಎರಡನೇ ವಿಕೆಟ್ ಜೊತೆಯಾಟದಲ್ಲಿ 92 ರನ್ ಸೇರಿಸಿದರು. ಗೆಲುವಿನ ಹಾದಿ ಸುಗಮವಾಯಿತು.

‘ಚೇಸಿಂಗ್ ಮಾಡುವಾಗ ವಿರಾಟ್ ಅವರಿಗೆ ಜೀವದಾನ ನೀಡುವುದು ಬಹಳ ತುಟ್ಟಿಯಾಗುತ್ತದೆ’ ಎಂದು ಕೋಲ್ಕತ್ತ ನೈಟ್ ರೈಡರ್ಸ್ ಕೋಚ್ ಅಭಿಷೇಕ್ ನಾಯರ್ ಹೇಳಿದರು.

‘ಕ್ರಿಕೆಟ್ನಲ್ಲಿ ಅಂತಿಮವಾಗಿ ಫಲಿತಾಂಶಗಳು ನಿರ್ಧಾರವಾಗುವುದು ಇಂತಹ ಕಾರಣಗಳಿಂದಲೇ. ನಾವು ಕೂಡ ಇನ್ನೂ 10–15 ರನ್ ಹೆಚ್ಚು ಗಳಿಸಬೇಕಿತ್ತು. ಆಗ ಮತ್ತಷ್ಟು ಕಠಿಣ ಸವಾಲೊಡ್ಡಲು ಸಾಧ್ಯವಾಗುತ್ತಿತ್ತು. ಕ್ಯಾಚ್ಗಳನ್ನು ಬಿಡದೇ ಹೋಗಿದ್ದರೆ ಕೂಡ ಗೆಲುವು ಸಾಧ್ಯವಿತ್ತು’ ಎಂದು ಪಂದ್ಯದ ನಂತರ ಅಧಿಕೃತ ಪ್ರಸಾರ ವಾಹಿನಿಗೆ ನೀಡಿದ ಸಂದರ್ಶನದಲ್ಲಿ ಹೇಳಿದರು.

ವಿರಾಟ್ ಐಪಿಎಲ್ನಲ್ಲಿ 9ನೇ ಶತಕ ದಾಖಲಿಸಿದರು. ಅಲ್ಲದೇ ಹಾಲಿ ಚಾಂಪಿಯನ್ ಆರ್ಸಿಬಿ ತಂಡವು 16 ಅಂಕಗಳೊಂದಿಗೆ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿತು.

ವಿರಾಟ್ ಅವರು ಕೋಲ್ಕತ್ತ ತಂಡದ ಎದುರಿನ ಪಂದ್ಯಕ್ಕೂ ಮುನ್ನ ನಡೆದಿದ್ದ ಎರಡು ಹಣಾಹಣಿಗಳಲ್ಲಿ ಸೊನ್ನೆ ಸುತ್ತಿದ್ದರು. ಆದ್ದರಿಂದ ಈ ಪಂದ್ಯದಲ್ಲಿ ಅವರು ಮೊದಲ ರನ್ ತೆಗೆದುಕೊಂಡು ಖಾತೆ ತೆರೆದಾಗ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಸಂತಸದಿಂದ ಕುಣಿದಾಡಿದ್ದರು. ಕೇಕೆ ಹಾಕಿದ್ದರು. ಅವರೊಂದಿಗೆ ಕೊಹ್ಲಿ ಕೂಡ ಸಂಭ್ರಮಿಸಿದ್ದರು.

‘ಎರಡು ಪಂದ್ಯಗಳಲ್ಲಿ ರನ್ ಗಳಿಸಿರಲಿಲ್ಲ. ಅದು ನನ್ನನ್ನು ವಿಪರೀತವಾಗಿ ಕಾಡುತ್ತಿತ್ತು. ತಂಡಕ್ಕೆ ನಿರೀಕ್ಷಿತ ಕಾಣಿಕೆ ನೀಡದೇ ಹೋದಾಗ ಮನಸ್ಸಿಗೆ ಬೇಸರವಾಗುತ್ತದೆ. ಆದ್ದರಿಂದ ಒತ್ತಡಕ್ಕೂ ಒಳಗಾಗಿದ್ದೆ. ಶತಕ ಗಳಿಸಿದ ನಂತರ ಹೆಚ್ಚು ಸಂಭ್ರಮಾಚರಣೆ ಮಾಡಲಿಲ್ಲ. ಏಕೆಂದರೆ; ತಂಡಕ್ಕೆ ಪಾಯಿಂಟ್ ಗಳಿಸಿಕೊಡುವುದು ಮುಖ್ಯ. ವೈಯಕ್ತಿಕ ಸಾಧನೆಗಿಂತ ತಂಡಕ್ಕೆ ಕಾಣಿಕೆ ನೀಡುವುದು ಮುಖ್ಯ’ ಎಂದು ವಿರಾಟ್ ಅವರು ಪಂದ್ಯದ ನಂತರ ಅಧಿಕೃತ ಪ್ರಸಾರ ವಾಹಿನಿಗೆ ತಿಳಿಸಿದರು.

ಈ ಟೂರ್ನಿಯಲ್ಲಿ ಕೊಹ್ಲಿ ಈಗಾಗಲೇ ಮೂರು ಅರ್ಧಶತಕ ಗಳಿಸಿದ್ದಾರೆ. ಒಟ್ಟು 12 ಇನಿಂಗ್ಸ್ಗಳಿಂದ 484 ರನ್ ಕಲೆಹಾಕಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260515-51-1990304073

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.