ಸೋಮವಾರ, ನವೆಂಬರ್ 18, 2019
25 °C
ಸ್ಮಿತ್‌ಗಿಂತ ಒಂದು ಪಾಯಿಂಟ್‌ ಹಿಂದೆ

ಐಸಿಸಿ ರ‍್ಯಾಂಕಿಂಗ್‌: ಅಗ್ರಸ್ಥಾನದತ್ತ ಕೊಹ್ಲಿ ಹೆಜ್ಜೆ

Published:
Updated:

ದುಬೈ: ದಕ್ಷಿಣ ಆಫ್ರಿಕಾ ವಿರುದ್ಧ ಪುಣೆಯ ಎರಡನೇ ಟೆಸ್ಟ್‌ನಲ್ಲಿ ದ್ವಿಶತಕ (254) ಬಾರಿಸಿದ್ದ ವಿರಾಟ್‌ ಕೊಹ್ಲಿ, ಈಗ ಐಸಿಸಿ ಟೆಸ್ಟ್‌ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನದಲ್ಲಿರುವ ಸ್ಟೀವ್‌ ಸ್ಮಿತ್‌ ಅವರಿಗಿಂತ ಕೇವಲ ಒಂದು ಪಾಯಿಂಟ್‌ ಹಿಂದೆಯಿದ್ದಾರೆ. 

ಆರಂಭ ಆಟಗಾರ ಮಯಂಕ್‌ ಅಗರವಾಲ್‌, ರ‍್ಯಾಂಕಿಂಗ್‌ನಲ್ಲಿ ಎಂಟು ಸ್ಥಾನಗಳಷ್ಟು ಮೇಲೆ ಜಿಗಿದು 17ನೇ ಸ್ಥಾನಕ್ಕೇರಿದ್ದಾರೆ. ಅವರು ದಕ್ಷಿಣ ಆಫ್ರಿಕಾ ವಿರುದ್ಧ ಎರಡನೇ ಟೆಸ್ಟ್‌ನಲ್ಲಿ 108 ರನ್‌ ಹೊಡೆದಿದ್ದರು. ಚೇತೇಶ್ವರ್  ಪೂಜಾರ (4 ಸ್ಥಾನ) ಮತ್ತು ಅಜಿಂಕ್ಯ ರಹಾನೆ (9ನೇ) ಅವರು ‘ಟಾಪ್‌ ಟೆನ್‌’ನಲ್ಲಿರುವ ಭಾರತದ ಇನ್ನಿಬ್ಬರು ಆಟಗಾರರು.

ಜನವರಿ 2018ರ ನಂತರ ಕೊಹ್ಲಿ ಮೊದಲ ಬಾರಿ ರ‍್ಯಾಂಕಿಂಗ್‌ನಲ್ಲಿ 900ಕ್ಕಿಂತ ಕಡಿಮೆ ಪಾಯಿಂಟ್ಸ್‌ಗೆ ಇಳಿದಿದ್ದರು. ಈಗ ಅವರು 936 ಪಾಯಿಂಟ್‌ ಹೊಂದಿದ್ದಾರೆ. ಇದು, 2018ರ ಆಗಸ್ಟ್‌ನಲ್ಲಿ ಅವರ ಜೀವನಶ್ರೇಷ್ಠ ರ‍್ಯಾಂಕಿಂಗ್‌ಗಿಂತ ಒಂದು ಪಾಯಿಂಟ್‌ ಕಡಿಮೆ. ಕೊಹ್ಲಿ, ರಾಂಚಿಯಲ್ಲಿ ಅಂತಿಮ ಟೆಸ್ಟ್‌ ನಂತರ, ಸ್ಮಿತ್‌ ಅವರನ್ನು ಹಿಂದೆಹಾಕಿ ಮೊದಲ ಕ್ರಮಾಂಕಕ್ಕೆ ಏರುವ ಅವಕಾಶ ಹೊಂದಿದ್ದಾರೆ.

ರವಿಚಂದ್ರನ್‌ ಅಶ್ವಿನ್‌ ಬೌಲರ್‌ಗಳ ಯಾದಿಯಲ್ಲಿ ಮೂರು ಸ್ಥಾನ ಬಡ್ತಿ ಪಡೆದು ಏಳನೇ ಸ್ಥಾನದಲ್ಲಿದ್ದಾರೆ. ಜಸ್‌ಪ್ಈತ್‌ ಬೂಮ್ರಾ ಮೂರನೇ ಸ್ಥಾನದಲ್ಲಿ ಮುಂದುವರಿದಿದ್ದಾರೆ.

ಆಲ್‌ರೌಂಡರ್‌ಗಳ ಪಟ್ಟಿಯಲ್ಲಿ ರವೀಂದ್ರ ಜಡೇಜ ಎರಡನೇ ಸ್ಥಾನದಲ್ಲಿದ್ದಾರೆ. ವೆಸ್ಟ್ ಇಂಡೀಸ್‌ನ ನಾಯಕ ಜೇಸನ್‌ ಹೋಲ್ಡರ್‌ ಅಗ್ರಸ್ಥಾನದಲ್ಲಿದ್ದಾರೆ. ಅಶ್ವಿನ್‌ ಐದನೇ ಸ್ಥಾನದಲ್ಲಿದ್ದಾರೆ.

ಪ್ರತಿಕ್ರಿಯಿಸಿ (+)