ಶುಕ್ರವಾರ, ಫೆಬ್ರವರಿ 26, 2021
20 °C

ಇದೇ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ಐಪಿಎಲ್ ಹರಾಜು ಪ್ರಕ್ರಿಯೆ

ಪಿಟಿಐ Updated:

ಅಕ್ಷರ ಗಾತ್ರ : | |

ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಟೂರ್ನಿಯ ಹರಾಜು ಪ್ರಕ್ರಿಯೆಯು ಇದೇ ಮೊದಲ ಬಾರಿಗೆ ಕೋಲ್ಕತ್ತದಲ್ಲಿ ನಡೆಯಲಿದೆ. ಡಿಸೆಂಬರ್ 19ರಂದು ಆಯೋಜನೆಗೊಂಡಿದೆ.

ಈ ಹಿಂದಿನ ಬಹುತೇಕ ಹರಾಜು ಕಾರ್ಯಕ್ರಮಗಳು ಬೆಂಗಳೂರಿನಲ್ಲಿ ಆಗಿದ್ದವು. ಬಾಲಿವುಡ್ ನಟ ಶಾರೂಕ್ ಖಾನ್ ಮಾಲೀಕತ್ವದ ಕೋಲ್ಕತ್ತ ನೈಟ್ ರೈಡರ್ಸ್ ತಂಡದ ತವರಿನಲ್ಲಿ ಇದೇ ಮೊದಲ ಸಲ ಬಿಡ್ಡಿಂಗ್ ನಡೆಯಲಿದೆ.

ಟ್ರೇಡಿಂಗ್ ವಿಂಡೊ ನವೆಂಬರ್ 14ರಂದು ಕೊನೆಯಾಗಲಿದೆ ಎಂದು ಐಪಿಎಲ್ ಆಡಳಿತ ಮಂಡಳಿಯು ಫ್ರ್ಯಾಂಚೈಸ್‌ಗಳಿಗೆ ತಿಳಿಸಿದೆ ಎಂದು ಇಎಸ್‌ಪಿಎನ್ ಕ್ರಿಕ್‌ಇನ್ಫೋ ವರದಿ ಮಾಡಿದೆ.

2020ರ ಟೂರ್ನಿಯಲ್ಲಿ ತಂಡ ರಚಿಸಿಕೊಳ್ಳಲು ತಂಡಗಳಿಗೆ ₹ 85 ಕೋಟಿ ಹೂಡಲು ಅವಕಾಶ ನೀಡಲಾಗಿದೆ. ಅದಲ್ಲದೇ ಮೂರು ಕೋಟಿ ರೂಪಾಯಿ ಹೆಚ್ಚುವರಿ ಹಣವನ್ನೂ ಬಳಸಬಹುದು. ತಂಡಗಳು ಈಗಾಗಲೇ ತಮ್ಮ ಖಾತೆಯಲ್ಲಿರುವ ಉಳಿಕೆಯ ಹಣ ಕೂಡ ಬಳಸಿಕೊಳ್ಳಬಹುದು. 

ಫ್ರ್ಯಾಂಚೈಸ್‌ಗಳು ತಮ್ಮ ಪರ್ಸ್‌ನಲ್ಲಿಟ್ಟುಕೊಂಡಿರುವ ನಿಧಿ

ಚೆನ್ನೈ ಸೂಪರ್‌ ಕಿಂಗ್ಸ್‌ (₹ 3.2 ಕೋಟಿ), ಡೆಲ್ಲಿ ಕ್ಯಾಪಿಟಲ್ಸ್‌ (₹ 7.7 ಕೋಟಿ), ಕಿಂಗ್ಸ್‌ ಇಲೆವನ್ ಪಂಜಾಬ್ (₹ 3.7 ಕೋಟಿ), ಕೋಲ್ಕತ್ತ ನೈಟ್ ರೈಡರ್ಸ್ (₹ 6.05 ಕೋಟಿ), ಮುಂಬೈ ಇಂಡಿಯನ್ಸ್ (₹ 3.55 ಕೋಟಿ), ರಾಜಸ್ಥಾನ್ ರಾಯಲ್ಸ್ (₹ 7.15 ಕೋಟಿ), ರಾಯಲ್ ಚಾಲೆಂಜರ್ಸ್‌ ಬೆಂಗಳೂರು (₹ .1.80 ಕೋಟಿ), ಸನ್‌ರೈಸರ್ಸ್ ಹೈದರಾಬಾದ್ (₹ 5.30 ಕೋಟಿ). 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು