ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಕ್ಷಿಣ ಆಫ್ರಿಕಾ ಆಟಗಾರರಿಗೆ ‘ಕೋಲ್ಕತ್ತ’ ಸುರಕ್ಷಿತ ನಗರ!

Last Updated 15 ಮಾರ್ಚ್ 2020, 21:14 IST
ಅಕ್ಷರ ಗಾತ್ರ

ಕೋಲ್ಕತ್ತ: ದಕ್ಷಿಣ ಆಫ್ರಿಕಾ ಕ್ರಿಕೆಟ್‌ ತಂಡವು ಲಖನೌನಿಂದ ತಮ್ಮ ತವರಿಗೆ ತೆರಳುವ ಮಧ್ಯೆ ಕೋಲ್ಕತ್ತದಲ್ಲಿ ಒಂದು ದಿನ ತಂಗಲಿದೆ.

ಕೊರೊನಾ ವೈರಸ್‌ ಸೋಂಕು ಹರಡುವ ಭೀತಿಯಿಂದಾಗಿ ದಕ್ಷಿಣ ಆಫ್ರಿಕಾ ಮತ್ತು ಭಾರತ ನಡುವಣ ಸರಣಿಯ ಎರಡು ಏಕದಿನ ಪಂದ್ಯಗಳನ್ನು ರದ್ದುಗೊಳಿಸಲಾಗಿತ್ತು. ಆದ್ದರಿಂದ ಎರಡನೇ ಪಂದ್ಯ ನಡೆಯಬೇಕಿದ್ದ ಲಖನೌನಲ್ಲಿ ತಂಡವು ತಂಗಿತ್ತು. ತಮ್ಮ ತವರು ದೇಶದ ವಿಮಾನವನ್ನು ಏರಲು ಕೋಲ್ಕತ್ತ ನಗರದ ವಿಮಾನ ನಿಲ್ದಾಣವನ್ನು ತಂಡವು ಆಯ್ಕೆ ಮಾಡಿಕೊಂಡಿದೆ.

ವಿಶ್ವದ ಬಹುತೇಕ ಎಲ್ಲ ದೇಶಗಳಲ್ಲಿಯೂ ಹರಡುತ್ತಿರುವ ಕೊರೊನಾ ವೈರಸ್‌ ಸೋಂಕಿನ ಒಂದೂ ಪ್ರಕರಣ ಕೋಲ್ಕತ್ತದಲ್ಲಿ ಇದುವರೆಗೆ ದಾಖಲಾಗಿಲ್ಲ. ಆದ್ದರಿಂದ ದಕ್ಷಿಣ ಆಫ್ರಿಕಾ ತಂಡವು ಈ ನಗರವನ್ನು ಸುರಕ್ಷಿತ ತಾಣ ವೆಂದು ಆಯ್ಕೆ ಮಾಡಿಕೊಂಡಿದೆ.

‘ತಂಡವು ನಾಳೆ (ಸೋಮವಾರ) ಬೆಳಿಗ್ಗೆ ಲಖನೌನಿಂದ ಕೋಲ್ಕತ್ತಕ್ಕೆ ಬರಲಿದೆ. ಮಂಗಳವಾರ ಇಲ್ಲಿಂದ ದುಬೈ ಮಾರ್ಗವಾಗಿ ದಕ್ಷಿಣ ಆಫ್ರಿಕಾಕ್ಕೆ ತೆರಳುವುದು. ತಂಡವು ಇಲ್ಲಿ ತಂಗಲು ಬಿಸಿಸಿಐ ಎಲ್ಲ ರೀತಿಯ ವ್ಯವಸ್ಥೆಗಳನ್ನೂ ಮಾಡುತ್ತಿದೆ’ ಎಂದು ಬಂಗಾಳ ಕ್ರಿಕೆಟ್ ಸಂಸ್ಥೆ (ಸಿಎಬಿ) ಅಧ್ಯಕ್ಷ ಅಭಿಷೆಕ್ ದಾಲ್ಮಿಯಾ ತಿಳಿಸಿದ್ದಾರೆ.

‘ರಾಜ್ಯದ ಮುಖ್ಯಮಂತ್ರಿ ಮತ್ತು ಮುಖ್ಯ ಕಾರ್ಯದರ್ಶಿಗೆ ಈ ವಿಷಯವನ್ನು ತಿಳಿಸಿದ್ದೇವೆ. ಬಿಸಿಸಿಐ ಅಧ್ಯಕ್ಷರೂ ಕೂಡ ನಮ್ಮೊಂದಿಗೆ ನಿರಂತರ ಸಂಪರ್ಕದಲ್ಲಿದ್ದಾರೆ. ಪ್ರವಾಸಿ ತಂಡದ ಆಟಗಾರರನ್ನು ಸುರಕ್ಷಿತವಾಗಿ ತವರಿಗೆ ಕಳಿಸಿಕೊಡುತ್ತೇವೆ’ ಎಂದು ದಾಲ್ಮಿಯಾ ತಿಳಿಸಿದ್ದಾರೆ.

ದಕ್ಷಿಣ ಆಫ್ರಿಕಾ ಎದುರು ಮೂರು ಏಕದಿನ ಪಂದ್ಯಗಳ ಸರಣಿ ನಿಗದಿಯಾಗಿತ್ತು. ಹೋದ ಗುರುವಾರ ಧರ್ಮಶಾಲಾದಲ್ಲಿ ನಡೆಯಲಿದ್ದ ಮೊದಲ ಪಂದ್ಯವು ಮಳೆಗೆ ಆಹುತಿಯಾಗಿತ್ತು. ಇನ್ನುಳಿದ ಎರಡು ಪಂದ್ಯಗಳನ್ನು ಕೊರೊನಾ ವೈರಸ್‌ ಆತಂಕದ ಹಿನ್ನೆಲೆಯಲ್ಲಿ ರದ್ದು ಮಾಡಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT