ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಲ್ಕತ್ತ ನೈಟ್‌ರೈಡರ್ಸ್ ತಂಡಕ್ಕೆ ಮಹತ್ವದ ಪಂದ್ಯ

Last Updated 27 ಏಪ್ರಿಲ್ 2019, 19:43 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಚೆನ್ನೈ ಸೂಪರ್ ಕಿಂಗ್ಸ್‌ ತಂಡವನ್ನು ಅದರ ಅಂಗಳದಲ್ಲಿಯೇ ಮಣಿಸಿದ ಖುಷಿಯಲ್ಲಿರುವ ಮುಂಬೈ ಇಂಡಿಯನ್ಸ್‌ ತಂಡವು ಈಡನ್‌ ಗಾರ್ಡನ್‌ಗೆ ಬಂದಿಳಿದಿದೆ.

ಭಾನುವಾರ ರಾತ್ರಿ ಇಲ್ಲಿ ನಡೆಯಲಿರುವ ಪಂದ್ಯವು ಆತಿಥೇಯ ಕೋಲ್ಕತ್ತ ನೈಟ್ ರೈಡರ್ಸ್‌ಗೆ ಮಹತ್ವದ್ದಾಗಿದೆ. ಆದರೆ ಭರ್ಜರಿ ಆತ್ಮವಿಶ್ವಾಸದಲ್ಲಿ ಬೀಗುತ್ತಿರುವ ಮುಂಬೈ ತಂಡವನ್ನು ಸೋಲಿಸುವ ಕಠಿಣ ಸವಾಲು ಕೂಡ ಇದೆ. ಟೂರ್ನಿಯ ಆರಂಭದಲ್ಲಿ ಅಬ್ಬ
ರದ ನಾಲ್ಕು ಜಯಗಳನ್ನು ದಾಖಲಿಸಿದ್ದ ತಂಡವು ನಂತರದಲ್ಲಿ ಮಂಕಾಯಿತು.

ಸತತ ಆರು ಸೋಲುಗಳಿಂದಾಗಿ ತಂಡವು ಜರ್ಜರಿತವಾಯಿತು. ರಾಜಸ್ಥಾನ್ ರಾಯಲ್ಸ್‌ ತಂಡದ ಎದುರು ದಿನೇಶ್ ಕಾರ್ತಿಕ್ ಅವರು ಗಳಿಸಿದ್ದ ಅರ್ಧಶತಕವು ವ್ಯರ್ಥವಾಗಿತ್ತು.

’ಸಿಡಿಲುಮರಿ’ ಆ್ಯಂಡ್ರೆ ರಸೆಲ್ ಸೇರಿದಂತೆ ಉತ್ತಮ ಬ್ಯಾಟಿಂಗ್ ಪಡೆಯೇ ಇರುವ ಕೋಲ್ಕತ್ತ ಗೆಲುವಿನ ಗೆರೆ ಮುಟ್ಟು
ವಲ್ಲಿ ವೈಫಲ್ಯ ಅನುಭವಿಸುತ್ತಿದೆ. ಬೌಲಿಂಗ್‌ನಲ್ಲಿಯೂ ಪ್ರತಿಭಾವಂತರು ಇದ್ದಾರೆ. ಆದರೆ ಅವರನ್ನು ಸಮರ್ಥವಾಗಿ ಬಳಸಿ
ಕೊಳ್ಳುವತ್ತ ದಿನೇಶ್ ಯೋಜನೆ ಹೆಣೆಯಬೇಕಿದೆ.

ರೋಹಿತ್ ಶರ್ಮಾ, ಕ್ವಿಂಟನ್ ಡಿ ಕಾಕ್, ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ, ಕೃಣಾಲ್ ಪಾಂಡ್ಯ ಮತ್ತು ರಾಹುಲ್ ಚಾಹರ್ ಅವರನ್ನು ನಿಯಂತ್ರಿಸದಿದ್ದರೆ ಕೆಕೆಆರ್ ತಂಡವು ಪ್ಲೇ ಆಫ್‌ ಗೆ ಸಾಗುವ ಹಾದಿಯಿಂದ ಹೊರಬೀಳುವ ಆತಂಕವಿದೆ.

ಆ್ಯಂಡ್ರೆ ರಸೆಲ್ ಆಕ್ರೋಶ ​

ನಮ್ಮ ತಂಡದಲ್ಲಿ ವಾತಾವರಣ ಸರಿಯಿಲ್ಲಕಳಪೆ ಯೋಜನೆಗಳು ಮತ್ತು ಕೆಟ್ಟ ನಿರ್ಣಯಗಳಿಂದಾಗಿ ಸತತ ಸೋಲು ಅನುಭವಿಸಬೇಕಾಯಿತು’ ಎಂದು ಕೋಲ್ಕತ್ತ ನೈಟ್ ರೈಡರ್ಸ್‌ ತಂಡದ ಸ್ಫೋಟಕ ಬ್ಯಾಟ್ಸ್‌ಮನ್ ಆ್ಯಂಡ್ರೆ ರಸೆಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ತಂಡವು ಸತತ ಆರು ಪಂದ್ಯಗಳಲ್ಲಿ ಸೋತಿರುವ ಕುರಿತು ಪ್ರತಿಕ್ರಿಯಿಸಿರುವ ಅವರು, ‘ನಮ್ಮದು ಅತ್ಯಂತ ಬಲಿಷ್ಠವಾದ ತಂಡವಾಗಿದೆ. ಆದರೆ, ಕಣದಲ್ಲಿ ತೆಗೆದುಕೊಳ್ಳುತ್ತಿರುವ ಕೆಟ್ಟ ನಿರ್ಣಯಗಳು ದುಬಾರಿಯಾಗುತ್ತಿವೆ. ಬೌಲರ್‌ಗಳನ್ನು ಸಮರ್ಥವಾಗಿ ಬಳಸಿಕೊಳ್ಳುತ್ತಿಲ್ಲ. ಸಂದರ್ಭಕ್ಕೆ ತಕ್ಕಂತೆ ಅವರನ್ನು ಬೌಲಿಂಗ್ ಮಾಡಲು ಬಿಡುತ್ತಿಲ್ಲ. ಅವರನ್ನು ಸರಿಯಾಗಿ ಬಳಸಿಕೊಂಡಿದ್ದರೆ ಖಚಿತವಾಗಿ ಗೆಲ್ಲುತ್ತಿದ್ದೆವು’ ಎಂದು ಹೇಳಿದ್ದಾರೆ.

‘ಟೂರ್ನಿಯಲ್ಲಿ ದುರ್ಬಲ ಆಟವಾಡಿರುವ ರಾಜಸ್ಥಾನ್ ರಾಯಲ್ಸ್‌ ತಂಡದ ಎದುರೂ ನಾವು ಸೋತಿರುವುದು ಬೇಸರದ ಸಂಗತಿ. ಅದೂ 175 ರನ್‌ಗಳ ಗುರಿಯನ್ನು ಅವರಿಗೆ ನೀಡಿಯೂ ಪರಾಭವಗೊಂಡಿದ್ದೇವೆ. ಬ್ಯಾಟಿಂಗ್‌ನಲ್ಲಿ ಲೋಪವಿಲ್ಲ. ಏಕೆಂದರೆ ಹೋರಾಟದ ಮೊತ್ತವನ್ನು ಗಳಿಸುವಲ್ಲಿ ನಾವು ಸಫಲರಾಗಿದ್ದೇವೆ. ಆದರೆ ಬೌಲಿಂಗ್‌ ಯೋಜನೆಗಳು ಸರಿಯಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ರಸೆಲ್ ಈ ಟೂರ್ನಿಯಲ್ಲಿ ಒಟ್ಟು ಮೂರು ಬಾರಿ ಪಂದ್ಯಶ್ರೇಷ್ಠ ಗೌರವ ಗಳಿಸಿದ್ದಾರೆ. 10 ಪಂದ್ಯಗಳಿಂದ ಅವರು 209.27ರ ಸ್ಟ್ರೈಕ್‌ರೇಟ್‌
ನಲ್ಲಿ 406 ರನ್‌ ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT