ಬುಧವಾರ, ಸೆಪ್ಟೆಂಬರ್ 18, 2019
28 °C

ಡೇವಿಡ್ ಮಿಂಚು; ಹುಬ್ಬಳ್ಳಿಗೆ ಜಯ

Published:
Updated:

ಬೆಂಗಳೂರು: ಗುರುವಾರ ರಾತ್ರಿ ಪಂದ್ಯದ ಕೊನೆಯ ಎರಡು ಎಸೆತಗಳಲ್ಲಿ ಡೇವಿಡ್ ಮಥಾಯಿಸ್ ಹೊಡೆದ ಒಂದು ಸಿಕ್ಸರ್ ಮತ್ತು ಒಂದು ಬೌಂಡರಿ ಹುಬ್ಬಳ್ಳಿ ಟೈಗರ್ಸ್‌ ತಂಡದ ಪಾಲಿಗೆ ಮತ್ತೊಂದು ರೋಚಕ ಜಯದ ಕಾಣಿಕೆ ನೀಡಿದವು. ಹಾಲಿ ಚಾಂಪಿಯನ್ ಬಿಜಾಪುರ ಬುಲ್ಸ್‌ಗೆ ನಿರಾಶೆಯ ಕಹಿ ಕೊಟ್ಟವು.

ಮೊದಲು ಬ್ಯಾಟಿಂಗ್ ಮಾಡಿದ್ದ ಬುಲ್ಸ್‌ ತಂಡವು 19 ಓವರ್‌ಗಳಲ್ಲಿ 7 ವಿಕೆಟ್‌ಗಳಿಗೆ 119 ರನ್‌ ಗಳಿಸಿತು. ಇನಿಂಗ್ಸ್‌ ಮಧ್ಯದಲ್ಲಿ ಮಳೆ ಸುರಿದಿದ್ದ ರಿಂದ ಒಂದು ಓವರ್‌ ಕಡಿತಗೊಳಿಸಲಾಯಿತು. ವಿಜೆಡಿ ನಿಯಮದನ್ವಯ ಹುಬ್ಬಳ್ಳಿ ತಂಡಕ್ಕೆ ಗೆಲುವಿಗಾಗಿ 124 ರನ್‌ ನಿಗದಿಗೊಳಿಸಲಾಯಿತು. ಕೊನೆಯ ಓವರ್‌ನಲ್ಲಿ ಹುಬ್ಬಳ್ಳಿ ತಂಡ 12 ರನ್‌ಗ ಳಿಸಬೇಕಿತ್ತು.  ಬುಲ್ಸ್‌ ತಂಡದ ಪ್ರತೀಕ್ ಜೈನ್ ಹಾಕಿದ ಓವರ್‌ನ ಮೊದಲ ನಾಲ್ಕು ಎಸೆತಗಳಲ್ಲಿ ಕ್ರೀಸ್‌ನಲ್ಲಿದ್ದ ಆದಿತ್ಯ ಸೋಮಣ್ಣ ಮತ್ತು ಡೇವಿಡ್ ಒಟ್ಟು ಮೂರು ರನ್‌ ಗಳಿಸಿದ್ದರು. ಇದರಿಂದಾಗಿ ಕೊನೆಯ ಎರಡು ಎಸೆತಗಳಲ್ಲಿ 9 ರನ್‌ ಗಳಿಸಬೇಕಿತ್ತು. ಒಂದು ಎಸೆತವನ್ನು ಡೇವಿಡ್ ಅವರು ಬೌಲರ್‌ ತಲೆ ಮೇಲಿಂದ ಬೌಂಡರಿಗೆ ಕಳಿಸಿದರು. ಕೊನೆಯ ಎಸೆತದಲ್ಲಿ ಸಿಕ್ಸರ್‌ ಎತ್ತಿದರು.

ಸ್ಕೋರು:  ಬಿಜಾಪುರ ಬುಲ್ಸ್‌: 19 ಓವರ್‌ ಗಳಲ್ಲಿ 7 ವಿಕೆಟ್‌ಗೆ 119 (ರಾಜು ಭಟ್ಕಳ 67; ಆರ್. ವಿನಯಕುಮಾರ್ 18ಕ್ಕೆ2, ವಿದ್ಯಾಧರ ಪಾಟೀಲ 18ಕ್ಕೆ3)  ಹುಬ್ಬಳ್ಳಿ ಟೈಗರ್ಸ್: 19 ಓವರ್‌ಗಳಲ್ಲಿ 7 ವಿಕೆಟ್‌ಗೆ 125 (ಪ್ರವೀಣ್ ದುಬೆ 27, ಆದಿತ್ಯ ಸೋಮಣ್ಣ ಔಟಾಗದೆ 14, ಡೇವಿಡ್ ಮಥಾಯಿಸ್ ಔಟಾಗದೆ 20, ಸೂರಜ್ ಕಾಮತ್ 12ಕ್ಕೆ3) ಫಲಿತಾಂಶ: ಹುಬ್ಬಳ್ಳಿ ಟೈಗರ್ಸ್‌ ತಂಡಕ್ಕೆ 3 ವಿಕೆಟ್‌ ಜಯ.

Post Comments (+)