ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಷ್ಟ್ರಮಟ್ಟದ ಹೋರಾಟಕ್ಕೂ ಸಿದ್ಧ: ಎಚ್ಚರಿಕೆ

ಬೇಡಿಕೆ ಈಡೇರಿದರೆ ಮಾತ್ರ ಯೋಜನೆ ಪ್ರಾರಂಭಕ್ಕೆ ಅವಕಾಶ
Last Updated 10 ಮಾರ್ಚ್ 2018, 7:32 IST
ಅಕ್ಷರ ಗಾತ್ರ

ಸಿದ್ದಾಪುರ: ಉಡುಪಿ ನಗರಸಭೆಗೆ ಕುಡಿ ಯುವ ನೀರು ಒದಗಿಸುವ ಯೋಜನೆಗೆ ವಿವಿಧ ಇಲಾಖೆಗಳ ಅನುಮತಿ ಪಡೆ ಯದೆ ಯೋಜನೆ ರೂಪಿಸಿರುವುದು ಅವೈಜ್ಞಾನಿಕ ಹಾಗೂ ಕಾನೂನು ಬಾಹಿರ. ನಮ್ಮ ಬೇಡಿಕೆ ಈಡೇರಿದರೆ ಮಾತ್ರ ಈ ಯೋಜನೆ ಪ್ರಾರಂಭಿಸಲು ಅವಕಾಶ ನೀಡುತ್ತೇವೆ ಎಂದು ಹಾಲಾಡಿ ಗ್ರಾಮಸ್ಥರು ಎಚ್ಚರಿಕೆ ನೀಡಿದ್ದಾರೆ.

ಮುದೂರಿ ಸರ್ಕಾರಿ ಹಿರಿಯ ಪ್ರಾಥ ಮಿಕ ಶಾಲೆಯ ಆವರಣದಲ್ಲಿ ಶುಕ್ರವಾರ ನಡೆದ ಹಾಲಾಡಿ ಗ್ರಾಮ ಪಂಚಾಯಿತಿ ದ್ವಿತೀಯ ಸುತ್ತಿನ ಗ್ರಾಮಸಭೆಯಲ್ಲಿ ಗ್ರಾಮಸ್ಥರು ಯೋಜನೆಗೆ ವಿರೋಧ ವ್ಯಕ್ತಪಡಿಸಿದರು.

ವಕೀಲ ರವಿರಾಜ್ ಶೆಟ್ಟಿ ಮಾತ ನಾಡಿ, ‘ಕರ್ನಾಟಕ ನಗರ ನೀರು ಸರಬ ರಾಜು ಯೋಜನೆ ಅಡಿ ಉಡುಪಿ ನಗರಸಭೆಗೆ ಕುಡಿಯುವ ನೀರು ಒದಗಿ ಸುವ ಬಹುಕೋಟಿ ಯೋಜನೆಯ ಪ್ರಸ್ತಾವನೆ ಸಲ್ಲಿಸಲಾಗಿದೆ. ವಾರಾಹಿ ನದಿಯ ಭರತ್‌ಕಲ್ಲಿನಿಂದ ಕೊಳವೆ ಮೂಲಕ ಹಾಲಾಡಿ ಪೇಟೆ, ಚೋರಾಡಿ, ವಂಡಾರು ಮಾರ್ಗವಾಗಿ ನೀರು ಕೊಂಡೊಯ್ಯುವುದಾಗಿದೆ. ಆದರೆ, ಪ್ರಸ್ತಾವನೆ ಕಳುಹಿಸುವ ಮುಂಚೆ ಕೊಳವೆ ಹಾದುಹೋಗುವ ಸ್ಥಳೀಯ ಗ್ರಾಮ ಪಂಚಾಯಿತಿ, ಅರಣ್ಯ, ಕಂದಾಯ, ಪರಿಸರ ಇಲಾಖೆಯ ಅನುಮತಿ ಪಡೆಯದೆ ಸಂವಿಧಾನ ವಿರೋಧಿ ಕೆಲಸ ಮಾಡಿದ್ದಾರೆ. ಕುಡಿಯುವ ನೀರನ್ನು ವೈಜ್ಞಾನಿಕ ರೀತಿಯಲ್ಲಿ ಪಡೆಯುವುದಕ್ಕೆ ನಮ್ಮ ವಿರೋಧವಿಲ್ಲ. ಆದರೆ ಕಾನೂನುಬಾಹಿರವಾಗಿ ಯೋಜನೆ ರೂಪಿಸಿದ್ದರಿಂದ ಅದನ್ನು ಪ್ರಾರಂಭಿಸಲು ನಮ್ಮ ವಿರೋಧವಿದೆ. ಈ ಕುರಿತು ರಾಷ್ಟ್ರೀಯ ಮಟ್ಟದ ಹೋರಾಟಕ್ಕೂ ಸಿದ್ಧರಿದ್ದೇವೆ’ ಎಂದು ಎಚ್ಚರಿಕೆ ನೀಡಿದರು.

ಗ್ರಾಮ ಪಂಚಾಯಿತಿ ಸದಸ್ಯ ಅಶೋಕ್ ಶೆಟ್ಟಿ ಚೋರಾಡಿ ಮಾತ ನಾಡಿ, ಕುಡಿಯುವ ನೀರಿನ ಹೆಸರಿನಲ್ಲಿ ಪ್ರಾರಂ ಭಿಸುವ ಯೋಜನೆಯ ಹಿಂದೆ ವಿದ್ಯುತ್ ಗುತ್ತಿಗೆದಾರರ ಕೈವಾಡದ ಶಂಕೆಯಿದ್ದು, ಈ ಯೋಜನೆ ಅವರಿಗೆ ಪೂರಕವಾಗಿದೆ ಹಾಗೂ ರೈತರಿಗೆ ಸಂಪೂರ್ಣ ಮಾರಕವಾಗಿದೆ. ಹಾಲಾಡಿಯಲ್ಲಿ ನೀರು ಶುದ್ಧೀಕರಣ ಘಟಕ ಸ್ಥಾಪಿಸಿ ಕೊಳವೆ ಹಾದುಹೋಗುವ 12 ಗ್ರಾಮ ಪಂಚಾಯಿತಿಗಳಿಗೂ ಶುದ್ಧ ಕುಡಿಯುವ ನೀರು ಒದಗಿಸಬೇಕು. ಪ್ರಸ್ತುತವಿರುವ ಚೋರಾಡಿ ರಸ್ತೆ ಹಾಳು ಮಾಡದೆ, ಭೂಸ್ವಾಧೀನ ಪ್ರಕ್ರಿಯೆ ಮೂಲಕ ಯೋಜನೆ ಪ್ರಾರಂಭಿಸಬೇಕು. ಅವೈಜ್ಞಾನಿಕ ಯೋಜನೆ ಕುರಿತು ನ್ಯಾಯಾಂಗ ಹೋರಾಟಕ್ಕೂ ಸಿದ್ಧರಿ ದ್ದೇವೆ ಎಂದರು.

ಕೆಯುಐಡಿಎಫ್‌ಸಿ ಜಿಲ್ಲಾ ಕಾರ್ಯನಿ ರ್ವಾಹಕ ಎಂಜಿನಿಯರ್ ಪ್ರಭಾಕರ ಶೆಟ್ಟಿ ಪ್ರತಿಕ್ರಿಯಿಸಿ, ಅಮೃತ್ ಯೋಜನೆಯಡಿ ಸುಮಾರು 38.4 ಕಿ.ಮೀ. ದೂರದ ಕೊಳವೆ ಹಾದುಹೋಗುವ 12 ಗ್ರಾಮ ಪಂಚಾಯಿತಿಗಳಿಗೆ ನೀರು ಒದಗಿ ಸುವ ಕುರಿತು ತಿಳಿಸಲಾಗಿದೆಯೇ ಹೊರತು ಶುದ್ಧೀಕರಿಸಿದ ನೀರು ಎನ್ನುವ ಪ್ರಸ್ತಾಪವಿಲ್ಲ. ಪ್ರಸ್ತುತ ಉಡುಪಿ ನಗರಸಭೆಗೆ ಹಿರಿಯಡ್ಕದ ಅಂಜಾರು ಎಂಬಲ್ಲಿ ಮಾತ್ರ ನೀರು ಶುದ್ಧೀಕರಿಸುವ ಘಟಕವಿದೆ. ಮೂರು ಅಡಿಯಷ್ಟು ಅಗಲದ ಕಬ್ಬಿಣದ ಕೊಳವೆ ಮೂಲಕ ನೀರು ಪಡೆಯಲಾಗುತ್ತಿದ್ದು, ರಸ್ತೆ ಅಗಲ ಇರುವಲ್ಲಿ ರಸ್ತೆಯಿಂದ ಹೊರಭಾಗದಲ್ಲಿಯೂ ಹಾಗೂ ಕಿರಿದಾದ ಸ್ಥಳದಲ್ಲಿ ರಸ್ತೆಯ ಮೇಲೆ ಕೊಂಡೊಯ್ಯಲಾಗುತ್ತದೆ. ಭೂಸ್ವಾಧೀನ ಪ್ರಕ್ರಿಯೆ ಕುರಿತು ಪ್ರಸ್ತಾವನೆಯಲ್ಲಿ ಸೇರಿಸಿಲ್ಲ. ಕೊಳವೆ ಮೂಲಕ 41 ಎಂಎಲ್‌ಡಿ ನೀರು ಪಡೆಯಲಾಗುತ್ತಿದ್ದು, ನಾಲ್ಕು ಎಂಎಲ್‌ಡಿ ನೀರು ಆಯಾ ಗ್ರಾಮ ಪಂಚಾಯಿತಿಗಳಿಗೆ ಒದಗಿಸುವ ಕುರಿತು ಪ್ರಸ್ತಾಪವಿದೆ ಎಂದು ಯೋಜನೆ ಕುರಿತು ಸ್ಪಷ್ಟ ಪಡಿಸಿದರು.

ಹಾಲಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಸರ್ವೋತ್ತಮ ಹೆಗ್ಡೆ ಕಾರ್ಯ ಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ಕೃಷಿ ಅಧಿಕಾರಿ ರಾಜೇಂದ್ರ ಮಾರ್ಗದರ್ಶಿ ಅಧಿಕಾರಿಯಾಗಿದ್ದರು.
***
‘ವಾಹನ ಸಂಚಾರ ಅಸಾಧ್ಯ’
ಇದೇ ಸಂದರ್ಭ ವಂಡಾರು, ಚೋರಾಡಿ, ಹಾಲಾಡಿ ಸಂಪರ್ಕ ರಸ್ತೆ ಕಿರಿದಾಗಿದ್ದು, ರಸ್ತೆಯನ್ನು ಅಗೆದರೆ ವಾಹನ ಸಂಚಾರ ಸಾಧ್ಯವಿಲ್ಲ. ಅಲ್ಲದೆ ಶುದ್ಧೀಕರಿಸದೆ ಗ್ರಾಮ ಪಂಚಾಯಿತಿಗಳಿಗೆ ನೀರು ಸರಬರಾಜು ಮಾಡುವ ಯೋಜನೆ ಅವೈಜ್ಞಾನಿಕ. ಆದ್ದರಿಂದ ಯೋಜನೆ ಕೈಬಿಡುವಂತೆ ನಿರ್ಣಯ ಕೈಗೊಳ್ಳಬೇಕು ಎನ್ನುವ ಆಗ್ರಹ ಗ್ರಾಮಸ್ಥರಿಂದ ಕೇಳಿಬಂತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT