‘ಚುಟುಕು ಕ್ರಿಕೆಟ್‌’ ಹಬ್ಬಕ್ಕೆ ವೇದಿಕೆ ಸಜ್ಜು

7
ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿ ಇಂದಿನಿಂದ: ಚಿನ್ನಸ್ವಾಮಿ ಅಂಗಳದಲ್ಲಿ ಪಂದ್ಯ

‘ಚುಟುಕು ಕ್ರಿಕೆಟ್‌’ ಹಬ್ಬಕ್ಕೆ ವೇದಿಕೆ ಸಜ್ಜು

Published:
Updated:
Deccan Herald

ಬೆಂಗಳೂರು: ಸ್ವಾತಂತ್ರ್ಯ ದಿನದ ರಂಗು, ಮಳೆಯ ಗುಂಗು ಮೇಳೈಸಿರುವ ಬೆಂಗಳೂರಿನಲ್ಲಿ ಬುಧವಾರ ಕರ್ನಾಟಕ ಪ್ರೀಮಿಯರ್ ಲೀಗ್ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ಸಂಭ್ರಮ ಗರಿಗೆದರಲಿದೆ.

ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿರುವ ಉದ್ಘಾಟನೆಯ ನಂತರ ಹೋದ ವರ್ಷದ ಚಾಂಪಿಯನ್ ಬೆಳಗಾವಿ ಪ್ಯಾಂಥರ್ಸ್‌ ಮತ್ತು ಬೆಂಗಳೂರು ಬ್ಲಾಸ್ಟರ್ಸ್‌ ತಂಡಗಳು ಮುಖಾಮುಖಿಯಾಗಲಿವೆ. ಕ್ರಮವಾಗಿ ಆಲ್‌ರೌಂಡರ್ ಸ್ಟುವರ್ಟ್‌ ಬಿನ್ನಿ ಮತ್ತು ಸ್ಪೋಟಕ ಬ್ಯಾಟ್ಸ್‌ಮನ್ ರಾಬಿನ್ ಉತ್ತಪ್ಪ ಅವರು ತಂಡಗಳನ್ನು ಮುನ್ನಡೆಸಲಿದ್ದಾರೆ.

ಮೇಲ್ನೋಟಕ್ಕೆ ಎರಡೂ ತಂಡಗಳು ಬಲಿಷ್ಠವಾಗಿವೆ.  ಅನುಭವಿ ಮತ್ತು ಯುವ ಆಟಗಾರರ ಪಡೆ ಇದೆ. ಬೆಂಗಳೂರು ತಂಡದಲ್ಲಿ ಕೆ.ಸಿ. ಅವಿನಾಶ್, ಮನೋಜ್ ಭಾಂಡಗೆ, ಆನಂದ ದೊಡ್ಡಮನಿ, ಕೆ.ಸಿ. ಅವಿನಾಶ್ ಅವರು ತಮ್ಮ ಹೆಜ್ಜೆಗುರುತು ಮೂಡಿಸಲು ಕಾದಿರುವ ಉದಯೋನ್ಮುಖ ಆಟಗಾರರು. ಎಡಗೈ ಬ್ಯಾಟ್ಸ್‌ಮನ್ ಪವನ್‌ ದೇಶಪಾಂಡೆ,   ಕೆ.ಬಿ. ಪವನ್, ಮಿತ್ರಕಾಂತ್ ಯಾದವ್ ಅವರು ತಮ್ಮ ಅನುಭವವನ್ನು ತಂಡಕ್ಕೆ ಧಾರೆಯೆರೆಯಲು ಸಿದ್ಧರಾಗಿದ್ದಾರೆ.

ಬೆಳಗಾವಿ ತಂಡದಲ್ಲಿ ಸ್ಥಾನ ಪಡೆದಿರುವ ಯುವ ಬೌಲರ್‌ ಶುಭಾಂಗ್ ಹೆಗ್ಡೆ ಅವರು ತಮ್ಮ ಸಾಮರ್ಥ್ಯ ಸಾಬೀತುಪಡಿಸಲು ಕಾತುರರಾಗಿದ್ದಾರೆ. ಎದುರಾಳಿ ತಂಡದ ಬ್ಯಾಟ್ಸ್‌ಮನ್‌ಗಳಾದ ರಾಬಿನ್ ಮತ್ತು ಪವನ್ ಅವರನ್ನು ಕಟ್ಟಿಹಾಕುವ ಸವಾಲು ಶುಭಾಂಗ್ ಮುಂದೆ ಇದೆ. ಮನೀಷ್ ಪಾಂಡೆ ಮತ್ತು ಸ್ಟಾಲಿನ್ ಹೂವರ್ ತಂಡದ ಬ್ಯಾಟಿಂಗ್ ಶಕ್ತಿಯಾಗಿದ್ದಾರೆ.

ನಗರದಲ್ಲಿ ಮೂರು ಪಂದ್ಯಗಳು: ಈ ಬಾರಿಯ ಟೂರ್ನಿಯ ಮೊದಲ ಮೂರು ಪಂದ್ಯಗಳು  ಇಲ್ಲಿ ನಡೆಯಲಿವೆ. ಆ. 19ರಿಂದ 31ರವರೆಗೆ ಹುಬ್ಬಳ್ಳಿಯಲ್ಲಿ. ಸೆ. 1ರಿಂದ 6ರವರೆಗೆ ಮೈಸೂರಿನಲ್ಲಿ ನಾಕೌಟ್ ಹಂತದ ಪಂದ್ಯಗಳು ನಡೆಯಲಿವೆ.

ಪಂದ್ಯ ಆರಂಭ: ಸಂಜೆ 6.45.

‌ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್

ಬರಹ ಇಷ್ಟವಾಯಿತೆ?

 • 1

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !