ಕ್ರಿಕೆಟ್‌: ಸ್ವಪ್ನಿಲ್‌ ಆಲ್‌ರೌಂಡ್‌ ಆಟ

ಶುಕ್ರವಾರ, ಮಾರ್ಚ್ 22, 2019
21 °C

ಕ್ರಿಕೆಟ್‌: ಸ್ವಪ್ನಿಲ್‌ ಆಲ್‌ರೌಂಡ್‌ ಆಟ

Published:
Updated:

ಬೆಂಗಳೂರು: ಸ್ವಪ್ನಿಲ್‌ ಯಳವೆ (83 ರನ್‌) ಮತ್ತು (26ಕ್ಕೆ2) ಅವರ ಆಲ್‌ರೌಂಡ್‌ ಆಟದ ನೆರವಿನಿಂದ ಬೆಳಗಾವಿ ಕ್ಲಬ್, ಕೆಎಸ್‌ಸಿಎ ವಿಶೇಷ ಕ್ರಿಕೆಟ್‌ ಟೂರ್ನಿಯಲ್ಲಿ ಫೈನಲ್‌ ಪ್ರವೇಶಿಸಿದೆ.

ಸೆಮಿಫೈನಲ್‌ನಲ್ಲಿ ಬೆಳಗಾವಿ ಕ್ಲಬ್‌ 109ರನ್‌ಗಳಿಂದ ರಾಯಚೂರಿನ ಸಿಟಿ ಇಲೆವನ್‌ ಕ್ಲಬ್‌ ತಂಡವನ್ನು ಸೋಲಿಸಿದೆ.

ಇನ್ನೊಂದು ಸೆಮಿಫೈನಲ್‌ನಲ್ಲಿ ದೂರವಾಣಿ ಕ್ರಿಕೆಟರ್ಸ್‌ 6 ವಿಕೆಟ್‌ಗಳಿಂದ ರಾಜಾಜಿನಗರ ಕ್ರಿಕೆಟರ್ಸ್‌ ಎದುರು ಗೆದ್ದಿದೆ.

ಸಂಕ್ಷಿಪ್ತ ಸ್ಕೋರ್‌: ಬೆಳಗಾವಿ ಕ್ಲಬ್‌: 43 ಓವರ್‌ಗಳಲ್ಲಿ 252 (ಅಮಿತ್‌ ಯಾದವ್‌ 75, ಸ್ವಪ್ನಿಲ್‌ ಯಳವೆ 83; ರಾಘವೇಂದ್ರ 35ಕ್ಕೆ2, ತಿಪ್ಪಾ ರೆಡ್ಡಿ 40ಕ್ಕೆ2, ಶಶಿ ಕಾಂಬ್ಳೆ 39ಕ್ಕೆ4). ಸಿಟಿ ಇಲೆವನ್‌ ಕ್ಲಬ್‌, ರಾಯಚೂರು: 36 ಓವರ್‌ಗಳಲ್ಲಿ 143 (ರಾಘವೇಂದ್ರ 46, ಎನ್‌.ಭೀಮಾರಾವ್‌ 23, ಬಿ.ಜಿ.ಶಿವಾನಂದ 20; ಸ್ವಪ್ನಿಲ್‌ ಯಳವೆ 26ಕ್ಕೆ2, ವಸಂತ್‌ ಶಹಾಪುರಕರ 34ಕ್ಕೆ4, ವಿಜಯಕುಮಾರ ಪಾಟೀಲ 36ಕ್ಕೆ3). ಫಲಿತಾಂಶ: ಬೆಳಗಾವಿ ಕ್ಲಬ್‌ಗೆ 109ರನ್‌ ಗೆಲುವು.

ರಾಜಾಜಿನಗರ ಕ್ರಿಕೆಟರ್ಸ್: 40.1 ಓವರ್‌ಗಳಲ್ಲಿ 186 (ಮಂಜೇಶ್‌ 25, ಎಸ್‌.ಪಿ.ಮಂಜುನಾಥ್‌ 60, ಎಂ.ಸಿ.ಕರಣ್‌ 32; ಯತೀಶ್‌ ಕುಮಾರ್‌ 14ಕ್ಕೆ2, ಟಿ.ಶಾನ್‌ 56ಕ್ಕೆ2, ಎಂ.ಕೀರ್ತಿ 26ಕ್ಕೆ4). ದೂರವಾಣಿ ಕ್ರಿಕೆಟರ್ಸ್‌: 24.2 ಓವರ್‌ಗಳಲ್ಲಿ 4 ವಿಕೆಟ್‌ಗೆ 187 (ಎಂ.ಕೀರ್ತಿ 43, ಮೋಹಿತ್‌ ಪಿಂಪ್ಲಾಪುರೆ 67, ಟಿ.ಶಾನ್‌ ಔಟಾಗದೆ 49; ಅಮೋಘ್‌ 35ಕ್ಕೆ2, ಎಸ್‌.ಪಿ.ಮಂಜುನಾಥ್‌ 27ಕ್ಕೆ2). ಫಲಿತಾಂಶ: ದೂರವಾಣಿ ಕ್ರಿಕೆಟರ್ಸ್‌ಗೆ 6 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !