ಕ್ರಿಕೆಟ್‌: ಮುತ್ತು, ಸುರೇಶ್‌ ಅಮೋಘ ಬೌಲಿಂಗ್‌

ಶುಕ್ರವಾರ, ಮಾರ್ಚ್ 22, 2019
21 °C

ಕ್ರಿಕೆಟ್‌: ಮುತ್ತು, ಸುರೇಶ್‌ ಅಮೋಘ ಬೌಲಿಂಗ್‌

Published:
Updated:

ಬೆಂಗಳೂರು: ಮುತ್ತು ನಾಯಕ್‌ (23ಕ್ಕೆ4) ಮತ್ತು ಸುರೇಶ್‌ ಎಚ್‌.ಕರಣಿ (17ಕ್ಕೆ3) ಅವರ ಪರಿಣಾಮಕಾರಿ ಬೌಲಿಂಗ್‌ ಬಲದಿಂದ ಸೆಂಟ್ರಲ್‌ ಎಕ್ಸೈಸ್‌ ಆ್ಯಂಡ್‌ ಕಸ್ಟಮ್ಸ್‌ ತಂಡ ಕೆಎಸ್‌ಸಿಎ ಗುಂಪು–2, ಡಿವಿಷನ್‌–1 ಕ್ರಿಕೆಟ್‌ ಟೂರ್ನಿಯ ಪಂದ್ಯದಲ್ಲಿ ಮೈಸೂರಿನ ಸೌತ್‌ ವೆಸ್ಟರ್ನ್‌ ರೈಲ್ವೆ ತಂಡದ ಎದುರು 9 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ.

ಮೊದಲು ಬ್ಯಾಟ್‌ ಮಾಡಿದ ಸೌತ್ ವೆಸ್ಟರ್ನ್‌ ರೈಲ್ವೆ, ಅಂಕಿತ್‌ (59) ಅರ್ಧಶತಕದ ನೆರವಿನಿಂದ 30.2 ಓವರ್‌ಗಳಲ್ಲಿ 117ರನ್‌ ಗಳಿಸಿತು.

ಈ ಮೊತ್ತ ಸೆಂಟ್ರಲ್‌ ಎಕ್ಸೈಸ್‌ ತಂಡಕ್ಕೆ ಸವಾಲೆನಿಸಲೇ ಇಲ್ಲ. ಬಿ.ಎ.ಮೋಹಿತ್‌ (ಔಟಾಗದೆ 60) ಮತ್ತು ಎಂ.ನಿದೀಶ್‌ (ಔಟಾಗದೆ 50) ಅಬ್ಬರದ ಆಟ ಆಡಿದ್ದರಿಂದ, ಈ ತಂಡ ಕೇವಲ ಒಂಬತ್ತು ಓವರ್‌ಗಳಲ್ಲಿ ಒಂದು ವಿಕೆಟ್‌ ಕಳೆದುಕೊಂಡು ಗುರಿ ಸೇರಿತು.

ಸಂಕ್ಷಿಪ್ತ ಸ್ಕೋರ್‌: ಸೌತ್‌ ವೆಸ್ಟರ್ನ್‌ ರೈಲ್ವೆ, ಮೈಸೂರು: 30.2 ಓವರ್‌ಗಳಲ್ಲಿ 117 (ಅಂಕಿತ್‌ 59; ಮುತ್ತು ನಾಯಕ್‌ 23ಕ್ಕೆ4, ಸುರೇಶ್‌ ಎಚ್‌.ಕರಣಿ 17ಕ್ಕೆ3). ಸೆಂಟ್ರಲ್‌ ಎಕ್ಸೈಸ್‌ ಆ್ಯಂಡ್‌ ಕಸ್ಟಮ್ಸ್‌: 9 ಓವರ್‌ಗಳಲ್ಲಿ 1 ವಿಕೆಟ್‌ಗೆ 120 (ಬಿ.ಎ.ಮೋಹಿತ್‌ ಔಟಾಗದೆ 60, ಎಂ.ನಿದೀಶ್‌ ಔಟಾಗದೆ 50). ಫಲಿತಾಂಶ: ಸೆಂಟ್ರಲ್‌ ಎಕ್ಸೈಸ್‌ ತಂಡಕ್ಕೆ 9 ವಿಕೆಟ್‌ ಗೆಲುವು.

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ: 50 ಓವರ್‌ಗಳಲ್ಲಿ 9 ವಿಕೆಟ್‌ಗೆ 258 (ಎಂ.ಕೆ.ಮಂಜುನಾಥ್‌ 34, ಮೀರ್‌ ಕೌನೈನ್‌ ಅಬ್ಬಾಸ್‌ 26, ಆಶಿಶ್‌ 55, ಅನಿರುದ್ಧ್‌ ಜೋಶಿ 53, ಕೆ.ಸಿ.ಅವಿನಾಶ್‌ ಔಟಾಗದೆ 38; ಸೀನಪ್ಪ 39ಕ್ಕೆ2, ಪರೀಕ್ಷಿತ್‌ ಶೆಟ್ಟಿ 35ಕ್ಕೆ2, ಐ.ಜಿ.ಅನಿಲ್‌ 40ಕ್ಕೆ2).

ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ: 41 ಓವರ್‌ಗಳಲ್ಲಿ 136 (ಬಿ.ಯು.ಶಿವಕುಮಾರ್‌ 28, ಹರೀಶ್‌ ಕುಮಾರ್‌ 22, ಐ.ಜಿ.ಅನಿಲ್‌ ಔಟಾಗದೆ 39; ಆನಂದ್‌ ಕಟ್ಟಿ 13ಕ್ಕೆ2, ಅನಿರುದ್ಧ್‌ ಜೋಶಿ 25ಕ್ಕೆ3, ಚೇತನ್‌ ವಿಲಿಯಮ್ಸ್‌ 29ಕ್ಕೆ4).

ಫಲಿತಾಂಶ: ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾಗೆ 122ರನ್‌ ಗೆಲುವು.

Tags: 

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !