ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆಎಸ್‌ಸಿಎ ಟಿ–20 ಕ್ರಿಕೆಟ್‌ ಟೂರ್ನಿ: ವಲ್ಚರ್ಸ್–ಸ್ವಸ್ತಿಕ್ ಫೈನಲ್‌ ಹಣಾಹಣಿ

ಮಿಂಚಿದ ಪವನ್‌, ರೋನಿತ್ ಮೋರೆ
Last Updated 26 ಡಿಸೆಂಬರ್ 2020, 15:34 IST
ಅಕ್ಷರ ಗಾತ್ರ

ಬೆಂಗಳೂರು: ರೋನಿತ್ ಮೋರೆ ಪರಿಣಾಮಕಾರಿ ಬೌಲಿಂಗ್‌ (11ಕ್ಕೆ 5) ಹಾಗೂ ಪವನ್ ದೇಶಪಾಂಡೆ ಅರ್ಧಶತಕದ (ಔಟಾಗದೆ 69) ನೆರವಿನಿಂದ ವಲ್ಚರ್ಸ್ ಕ್ರಿಕೆಟ್‌ ಕ್ಲಬ್‌ 70 ರನ್‌ಗಳಿಂದ ಸೋಷಿಯಲ್‌ ಕ್ರಿಕೆಟರ್ಸ್ ತಂಡವನ್ನು ಪರಾಭವಗೊಳಿಸಿತು. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ನಡೆದ ಕೆಎಸ್‌ಸಿಎ ಟ್ವೆಂಟಿ–20 ಕ್ರಿಕೆಟ್ ಟೂರ್ನಿಯ ನಾಲ್ಕರ ಘಟ್ಟದ ಪಂದ್ಯದಲ್ಲಿ ಗೆದ್ದು ಪ್ರಶಸ್ತಿ ಸುತ್ತಿಗೆ ಲಗ್ಗೆಯಿಟ್ಟಿತು.

ಮತ್ತೊಂದು ಸೆಮಿಫೈನಲ್ ಹಣಾಹಣಿಯಲ್ಲಿ ಸ್ವಸ್ತಿಕ್ ಯೂನಿಯನ್ ಕ್ರಿಕೆಟ್‌ ಕ್ಲಬ್‌ ತಂಡವು ಕೆಂಬ್ರಿಡ್ಜ್ ಕ್ರಿಕೆಟ್ ಕ್ಲಬ್ ಎದುರು 26 ರನ್‌ಗಳ ಜಯಭೇರಿ ಬಾರಿಸಿತು. ಸ್ವಸ್ತಿಕ್ ಪರ ಸಮರ್ಥ್ ಆರ್‌. (60) ಹಾಗೂ ರಕ್ಷಿತ್‌ ಎಸ್‌. (55) ಅರ್ಧಶತಕ ಸಿಡಿಸಿ ಮಿಂಚಿದರು.

ಟೂರ್ನಿಯ ಫೈನಲ್‌ ಪಂದ್ಯವು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಭಾನುವಾರ ನಡೆಯಲಿದೆ.

ಸಂಕ್ಷಿಪ್ತ ಸ್ಕೋರ್‌
ವಲ್ಚರ್ಸ್‌ ಕ್ರಿಕೆಟ್‌ ಕ್ಲಬ್‌:
20 ಓವರ್‌ಗಳಲ್ಲಿ 5 ವಿಕೆಟ್‌ಗೆ 160 (ಶ್ರೀಜಿತ್ ಕೆ.ಎಲ್. 46, ಪವನ್ ದೇಶಪಾಂಡೆ ಔಟಾಗದೆ 69; ವೈಶಾಖ್ ವಿ. 26ಕ್ಕೆ 2, ಜಹೂರ್ ಫಾರೂಕಿ 38ಕ್ಕೆ 2).
ಸೋಷಿಯಲ್‌ ಕ್ರಿಕೆಟರ್ಸ್‌: 15.4 ಓವರ್‌ಗಳಲ್ಲಿ 90 ಆಲೌಟ್‌ (ಅಕ್ಷಯ್ ಬಲ್ಲಾಳ್‌ 25, ಅವಿನಾಶ್ ಡಿ. 34; ರೋನಿತ್ ಮೋರೆ 11ಕ್ಕೆ 5, ದರ್ಶನ್‌ ಎಂ.ಬಿ. 15ಕ್ಕೆ 2, ಅಭಿಷೇಕ್ ಅಹ್ಲಾವತ್ 22ಕ್ಕೆ 2).
ಫಲಿತಾಂಶ: ವಲ್ಚರ್ಸ್‌ ಕ್ರಿಕೆಟ್ ಕ್ಲಬ್‌ಗೆ 70 ರನ್‌ಗಳ ಜಯ.

ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್‌ ಕ್ಲಬ್‌ (1): 20 ಓವರ್‌ಗಳಲ್ಲಿ 5 ವಿಕೆಟ್‌ಗೆ 162 (ಸಮರ್ಥ್‌ ಆರ್‌. 60, ರಕ್ಷಿತ್ ಎಸ್‌. 55; ಅಧೋಕ್ಷ ಹೆಗ್ಡೆ 15ಕ್ಕೆ 2).
ಕೆಂಬ್ರಿಡ್ಜ್‌ ಕ್ರಿಕೆಟ್ ಕ್ಲಬ್‌: 20 ಓವರ್‌ಗಳಲ್ಲಿ 5 ವಿಕೆಟ್‌ಗೆ 136 (ದೇವದತ್ತ ಪಡಿಕ್ಕಲ್‌ 48, ಶುಭಾಂಗ್‌ ಹೆಗ್ಡೆ 25, ಮೊಹಮ್ಮದ್ ಅಕೀಬ್ ಜಾವೇದ್‌ 32, ಡೇವಿಡ್ ಮಥಾಯಿಸ್‌ ಔಟಾಗದೆ 25; ಆನಂದ ದೊಡ್ದಮನಿ 25ಕ್ಕೆ 2).
ಫಲಿತಾಂಶ: ಸ್ವಸ್ತಿಕ್‌ ಯೂನಿಯನ್ ಕ್ರಿಕೆಟ್‌ ಕ್ಲಬ್‌ಗೆ (1) 26 ರನ್‌ಗಳ ಜಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT