ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕ್ರಿಕೆಟ್‌: ಆರ್‌ಡಬ್ಲ್ಯುಎಫ್‌ಗೆ ಭಾರಿ ಜಯ

Last Updated 22 ಮಾರ್ಚ್ 2019, 20:29 IST
ಅಕ್ಷರ ಗಾತ್ರ

ಬೆಂಗಳೂರು: ಸಂಘಟಿತ ಬ್ಯಾಟಿಂಗ್ ಮತ್ತು ಮನೋಜ್‌ ಕೆ.ಎಚ್‌ ಅವರ ಪ್ರಭಾವಿ ಬೌಲಿಂಗ್ ದಾಳಿಯ ಬಲದಿಂದ ರೈಲು ಗಾಲಿ ಕಾರ್ಖಾನೆ ತಂಡ ಭರ್ಜರಿ ಜಯ ಸಾಧಿಸಿತು. ಕೆಎಸ್‌ಸಿಎ ಒಂದನೇ ಗುಂಪಿನ ಒಂದನೇ ಡಿವಿಷನ್ ಪಂದ್ಯ ದಲ್ಲಿ ಈ ತಂಡ ಎನ್‌.ಆರ್‌.ಸ್ಪೋರ್ಟ್ಸ್‌ ಗ್ರೂಪ್ ಎದುರು 123 ರನ್‌ಗಳಿಂದ ಗೆದ್ದಿತು.

ರೈಲು ಗಾಲಿ ಕಾರ್ಖಾನೆ ತಂಡ 321 ರನ್‌ಗಳನ್ನು ಗಳಿಸಿತು. ಗುರಿ ಬೆನ್ನತ್ತಿದ ಎನ್‌.ಆರ್ ತಂಡ 198 ರನ್‌ಗಳಿಗೆ ಪತನ ಕಂಡಿತು. ಮನೋಜ್‌ ನಾಲ್ಕು ವಿಕೆಟ್ ಕಬಳಿಸಿದರು.

ಸಂಕ್ಷಿಪ್ತ ಸ್ಕೋರು: ರೈಲು ಗಾಲಿ ಕಾರ್ಖಾನೆ: 50 ಓವರ್‌ಗಳಲ್ಲಿ 9ಕ್ಕೆ 321 (ಚೆಲುವರಾಜು ಅಜೇಯ 68, ಮಂಜೇಶ್ ರೆಡ್ಡಿ 68, ಶೊಯೆಬ್ ಮ್ಯಾನೇಜರ್ 30, ಅಕ್ಷಯ್‌ ಸಿ.ಕೆ 51, ಪ್ರದೀಪ್‌ ಟಿ 53; ನಂದಕಿಶೋರ್‌ 63ಕ್ಕೆ3, ಸಾಯಿ ಶಿವನಾರಾಯಣ್‌ 59ಕ್ಕೆ2, ಅರುಣ್‌ 8ಕ್ಕೆ2); ಎನ್‌.ಆರ್‌.ಸ್ಪೋರ್ಟ್ಸ್‌ ಗ್ರೂಪ್‌: 38.5 ಓವರ್‌ಗಳಲ್ಲಿ 198 (ತನು ಬಿ 47, ಸಾಯಿ ಶಿವ ನಾ ರಾಯಣ 75, ನಂದಕಿಶೋರ 45; ಪ್ರದೀಪ್‌ ಟಿ 21ಕ್ಕೆ2, ಮನೋಜ್‌ ಕೆ.ಎಚ್‌ 21ಕ್ಕೆ4, ಪ್ರಾಣೇಶ್‌ ದೇಸಾಯಿ 49ಕ್ಕೆ2). ಫಲಿತಾಂಶ: ರೈಲು ಗಾಲಿ ಕಾರ್ಖಾನೆಗೆ 123 ರನ್‌ಗಳ ಜಯ. ಸೆಂಟ್ರಲ್‌ ಎಕ್ಸೈಸ್‌ ಆ್ಯಂಡ್ ಕಸ್ಟಮ್ಸ್‌: 45 ಓವರ್‌ಗಳಲ್ಲಿ 6ಕ್ಕೆ 186 (ಆರ್.ಸಮರ್ಥ್‌ 87, ನಿದೀಶ್‌ ಎಂ 59; ವಿಠ್ಠಲ್‌ 27ಕ್ಕೆ2, ಮದನ್‌ 26ಕ್ಕೆ2); ರೈಲ್ವೆ ಇನ್‌ಸ್ಟಿಟ್ಯೂಟ್ ಹುಬ್ಬಳ್ಳಿ: 25.3 ಓವರ್‌ಗಳಲ್ಲಿ 140 (ಪ್ರಥಮೇಶ್‌ 37, ವಿಠ್ಠಲ್‌ 28, ಮಲಿಕ್ ಸಾಬ್‌ 32; ಮುತ್ತು 30ಕ್ಕೆ2, ಶಿವರಾಜ್‌ 9ಕ್ಕೆ3, ನಿದೀಶ್‌ 8ಕ್ಕೆ2). ಫಲಿತಾಂಶ: ಸೆಂಟ್ರಲ್‌ ಎಕ್ಸೈಸ್‌ ಆ್ಯಂಡ್ ಕಸ್ಟಮ್ಸ್‌ ತಂಡಕ್ಕೆ 46 ರನ್‌ಗಳ ಗೆಲುವು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT