ಕೆಎಸ್‌ಸಿಎ ಮಹಿಳಾ ಲೀಗ್‌ ಕ್ರಿಕೆಟ್‌: 12ಕ್ಕೆ ಆಲೌಟ್‌ ಆದ ಜಾಲಿ ಕ್ರಿಕೆಟರ್ಸ್‌!

7
ಮಿಂಚಿದ ರಾಮೇಶ್ವರಿ, ಮೋನಿಕಾ

ಕೆಎಸ್‌ಸಿಎ ಮಹಿಳಾ ಲೀಗ್‌ ಕ್ರಿಕೆಟ್‌: 12ಕ್ಕೆ ಆಲೌಟ್‌ ಆದ ಜಾಲಿ ಕ್ರಿಕೆಟರ್ಸ್‌!

Published:
Updated:
Prajavani

ಬೆಂಗಳೂರು: ರಾಮೇಶ್ವರಿ ಗಾಯಕವಾಡ ಮತ್ತು ಮೋನಿಕಾ ಸಿ. ‍ಪಟೇಲ್‌ ಅವರ ದಾಳಿಗೆ ಬೆಚ್ಚಿದ ಜಾಲಿ ಕ್ರಿಕೆಟರ್ಸ್‌ ತಂಡ ಕೆಎಸ್‌ಸಿಎ ಮಹಿಳಾ ಕ್ರಿಕೆಟ್‌ ಲೀಗ್‌ನ ಪಂದ್ಯದಲ್ಲಿ ಕೇವಲ 12ರನ್‌ಗಳಿಗೆ ಆಲೌಟ್‌ ಆಗಿದೆ. ಈ ಪಂದ್ಯದಲ್ಲಿ ಹೆರಾನ್ಸ್‌ ಕ್ಲಬ್‌ 10 ವಿಕೆಟ್‌ಗಳ ಜಯಭೇರಿ ಮೊಳಗಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಮೊದಲು ಬ್ಯಾಟ್‌ ಮಾಡಿದ ಜಾಲಿ ಕ್ರಿಕೆಟರ್ಸ್‌ 16.3 ಓವರ್‌ಗಳಲ್ಲಿ ಹೋರಾಟ ಮುಗಿಸಿತು. ರಾಮೇಶ್ವರಿ, ಕೇವಲ ಒಂದು ರನ್‌ ನೀಡಿ ನಾಲ್ಕು ವಿಕೆಟ್‌ ಉರುಳಿಸಿದರು. ಎರಡು ರನ್‌ ಬಿಟ್ಟುಕೊಟ್ಟ ಮೋನಿಕಾ ಮೂರು ವಿಕೆಟ್‌ ಕಬಳಿಸಿದರು.

ಸಂಕ್ಷಿಪ್ತ ಸ್ಕೋರ್‌: ಜಾಲಿ ಕ್ರಿಕೆಟರ್ಸ್‌: 16.3 ಓವರ್‌ಗಳಲ್ಲಿ 12 (ಮೋನಿಕಾ ಸಿ.‍ಪಟೇಲ್‌ 2ಕ್ಕೆ3, ರಾಮೇಶ್ವರಿ ಗಾಯಕವಾಡ 1ಕ್ಕೆ4). ಹೆರಾನ್ಸ್‌ ಕ್ಲಬ್‌: 1.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 13. ಫಲಿತಾಂಶ: ಹೆರಾನ್ಸ್‌ ಕ್ಲಬ್‌ಗೆ 10 ವಿಕೆಟ್‌ ಗೆಲುವು.

ದಿ ಬೆಂಗಳೂರು ಕ್ರಿಕೆಟರ್ಸ್‌: 22.3 ಓವರ್‌ಗಳಲ್ಲಿ 23 (ಕೆ.ಹರ್ಷಿತಾ 4ಕ್ಕೆ3, ಎಚ್‌.ಹೀನಾ 2ಕ್ಕೆ2, ಲಿಖಿತಾ 3ಕ್ಕೆ3). ಸ್ವಸ್ತಿಕ್‌ ಯೂನಿಯನ್‌ ಕ್ಲಬ್‌ (2): 2.2 ಓವರ್‌ಗಳಲ್ಲಿ ವಿಕೆಟ್‌ ನಷ್ಟವಿಲ್ಲದೆ 24. ಫಲಿತಾಂಶ: ಸ್ವಸ್ತಿಕ್‌ ಯೂನಿಯನ್‌ಗೆ 10 ವಿಕೆಟ್‌ ಗೆಲುವು.

ಬಿ.ಇ.ಎಲ್‌.ಕಾಲೋನಿ ರಿಕ್ರಿಯೇಷನ್‌ ಕ್ಲಬ್‌: 19 ಓವರ್‌ಗಳಲ್ಲಿ 2 ವಿಕೆಟ್‌ಗೆ 321 (ಶ್ರುತಿ ರಾಮಕೃಷ್ಣ 98). ವಿಲ್ಸನ್‌ ಗಾರ್ಡನ್‌ ಕ್ಲಬ್‌: 15.2 ಓವರ್‌ಗಳಲ್ಲಿ 29 (ಜೆ.ಮಲ್ಲಿಕಾ 13ಕ್ಕೆ3, ಬಿ.ಸಿ.ಅನುಷಾ 4ಕ್ಕೆ2, ಮನೀಷಾ ಜೈನ್‌ 2ಕ್ಕೆ2, ಎಸ್‌.ಮೋನಿಷಾ 4ಕ್ಕೆ2). ಫಲಿತಾಂಶ: ಬಿಇಎಲ್‌ ಕಾಲೋನಿ ತಂಡಕ್ಕೆ 292ರನ್‌ ಗೆಲುವು.

ಕೇಂಬ್ರಿಡ್ಜ್‌ ಕ್ಲಬ್‌: 26 ಓವರ್‌ಗಳಲ್ಲಿ 3 ವಿಕೆಟ್‌ಗೆ 209 (ಆರ್‌.ಚೈತನ್ಯ 66). ಮಾಡರ್ನ್‌ ಕ್ಲಬ್‌: 14.1 ಓವರ್‌ಗಳಲ್ಲಿ 38 (ಎಸ್‌.ವಿನಯ 4ಕ್ಕೆ3, ಎಚ್‌.ಕೆ.ಮೋನಿಷಾ 3ಕ್ಕೆ2). ಫಲಿತಾಂಶ: ಕೇಂಬ್ರಿಡ್ಜ್‌ ತಂಡಕ್ಕೆ 171ರನ್‌ ಗೆಲುವು.

ಹಮ್ಮಂಡ್ಸ್‌ ಕ್ಲಬ್‌: 25 ಓವರ್‌ಗಳಲ್ಲಿ 7 ವಿಕೆಟ್‌ಗೆ 115 (ಗೀತಾ 54; ಪೂಜಾ ಕುಮಾರಿ 12ಕ್ಕೆ3, ಸವಿ 6ಕ್ಕೆ2). ಮೌಂಟ್‌ ಜಾಯ್‌ ಕ್ಲಬ್‌: 21.5 ಓವರ್‌ಗಳಲ್ಲಿ 81 (ನಿವೇದಿತಾ 17ಕ್ಕೆ3, ಗೀತಾ 8ಕ್ಕೆ2, ಮೀನಾ 7ಕ್ಕೆ3). ಫಲಿತಾಂಶ: ಹಮ್ಮಂಡ್ಸ್‌ ಕ್ಲಬ್‌ಗೆ 34ರನ್‌ ಗೆಲುವು.

ವಲ್ಚರ್ಸ್‌ ಕ್ಲಬ್‌: 17.4 ಓವರ್‌ಗಳಲ್ಲಿ 53 (ಸಹನಾ 5ಕ್ಕೆ6). ಜವಾನ್ಸ್‌ ಕ್ಲಬ್‌: 5.2 ಓವರ್‌ಗಳಲ್ಲಿ 1 ವಿಕೆಟ್‌ಗೆ 57. ಫಲಿತಾಂಶ: ಜವಾನ್ಸ್‌ ತಂಡಕ್ಕೆ 9 ವಿಕೆಟ್‌ ಗೆಲುವು.

ಬೆಂಗಳೂರು ಅಕೇಷನಲ್ಸ್‌: 19.1 ಓವರ್‌ಗಳಲ್ಲಿ 29 (ಶ್ರೇಯಾಂಕ ಆರ್.ಪಾಟೀಲ 2ಕ್ಕೆ2, ಸಂಜನಾ ರಾಜ್‌ 4ಕ್ಕೆ2, ಸ್ನೇಹಾ ಜಗದೀಶ್‌ 5ಕ್ಕೆ4). ರಾಜಾಜಿನಗರ ಕ್ರಿಕೆಟರ್ಸ್‌: 3.5 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 30. ಫಲಿತಾಂಶ: ರಾಜಾಜಿನಗರ ಕ್ರಿಕೆಟರ್ಸ್‌ಗೆ 10 ವಿಕೆಟ್‌ ಗೆಲುವು.

ಜುಪಿಟರ್‌ ಕ್ರಿಕೆಟ್‌ ಸಂಸ್ಥೆ: 11.1 ಓವರ್‌ಗಳಲ್ಲಿ 27 (ಅಶಮೀರಾ ಬಾನು 10ಕ್ಕೆ6, ಅನನ್ಯ ಸುಭಾಷ್‌ 10ಕ್ಕೆ3). ಯಂಗ್‌ ಲಯನ್ಸ್‌ ಕ್ಲಬ್‌: 4.4 ಓವರ್‌ಗಳಲ್ಲಿ 1 ವಿಕೆಟ್‌ಗೆ 28. ಫಲಿತಾಂಶ: ಯಂಗ್‌ ಲಯನ್ಸ್‌ಗೆ 9 ವಿಕೆಟ್‌ ಗೆಲುವು.

ಬರಹ ಇಷ್ಟವಾಯಿತೆ?

 • 3

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !