ಗುರುವಾರ , ಅಕ್ಟೋಬರ್ 17, 2019
24 °C

ಕೆಎಸ್‌ಸಿಎ: ಅಧಿಕಾರ ಸ್ವೀಕಾರ

Published:
Updated:
Prajavani

ಬೆಂಗಳೂರು: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್‌ಸಿಎ) ಗೆ ಚುನಾಯಿರತರಾಗಿರುವ ನೂತನ ಪದಾಧಿಕಾರಿಗಳು ಗುರುವಾರ ಅಧಿಕಾರ ಸ್ವೀಕರಿಸಿದರು.

ಹಿರಿಯ ಕ್ರಿಕೆಟಿಗ ರೋಜರ್ ಬಿನ್ನಿ ಅಧ್ಯಕ್ಷರಾಗಿ ಪದಗ್ರಹಣ ಮಾಡಿದರು. ಈ ಸಂದರ್ಭದಲ್ಲಿ ಅಧ್ಯಕ್ಷರ ಕಚೇರಿಯಲ್ಲಿ ಪೂಜೆ ನೆರವೇರಿತು. ಸಂತೋಷ್ ಮೆನನ್ (ಕಾರ್ಯದರ್ಶಿ), ಜೆ. ಅಭಿರಾಮ್ (ಉಪಾಧ್ಯಕ್ಷರು), ವಿನಯ್ ಮೃತ್ಯುಂಜಯ್ (ಖಜಾಂಚಿ) ಮತ್ತು ಶಾವೀರ್ ತಾರಾಪೂರ್ (ಜಂಟಿ ಕಾರ್ಯದರ್ಶಿ) ಕೂಡ  ಈ ಸಂದರ್ಭದಲ್ಲಿ ಪದಗ್ರಹಣ ಮಾಡಿದರು. ಹಿರಿಯ ಕ್ರಿಕೆಟಿಗ ಕಸ್ತೂರಿ ರಂಗನ್ ಅವರು ಎಲ್ಲರಿಗೂ ಶುಭ ಹಾರೈಸಿದರು. 

ಅಕ್ಟೋಬರ್ 3ರಂದು ನಡೆದಿದ್ದ ಕೆಎಸ್‌ಸಿಎ ಚುನಾವಣೆಯಲ್ಲಿ ರೋಜರ್ ಬಿನ್ನಿ ಬಳಗವು ಜಯಗಳಿಸಿತ್ತು.  

Post Comments (+)