ರ‍್ಯಾಂಕಿಂಗ್‌: ಅಗ್ರ ಐದರಲ್ಲಿ ಕುಲದೀಪ್‌ಗೆ ಸ್ಥಾನ

ಬುಧವಾರ, ಮಾರ್ಚ್ 20, 2019
31 °C

ರ‍್ಯಾಂಕಿಂಗ್‌: ಅಗ್ರ ಐದರಲ್ಲಿ ಕುಲದೀಪ್‌ಗೆ ಸ್ಥಾನ

Published:
Updated:
Prajavani

ದುಬೈ (ಪಿಟಿಐ): ಭಾರತದ ಎಡಗೈ ಸ್ಪಿನ್ನರ್ ಕುಲದೀಪ್ ಯಾದವ್‌ ಅವರು ಐಸಿಸಿ ಟ್ವೆಂಟಿ–20 ರ‍್ಯಾಂಕಿಂಗ್‌ನ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಬಾರಿ ಅಗ್ರ ಐದರಲ್ಲಿ ಸ್ಥಾನ ಪಡೆದಿದ್ದಾರೆ. ಆಸ್ಟ್ರೇಲಿಯಾ ಎದುರಿನ ಮೂರು ಟ್ವೆಂಟಿ–20 ಪಂದ್ಯಗಳಲ್ಲಿ ನಾಲ್ಕು ವಿಕೆಟ್ ಕಬಳಿಸಿದ್ದ ಅವರು 20 ಸ್ಥಾನಗಳ ಏರಿಕೆಯೊಂದಿಗೆ ಮೂರನೇ ಸ್ಥಾನ ಗಳಿಸಿದ್ದಾರೆ.

ಅಗ್ರ ಹತ್ತರಲ್ಲಿ ಒಂಬತ್ತು ಮಂದಿ ಸ್ಪಿನ್ನರ್‌ಗಳಾಗಿದ್ದಾರೆ. ಪಾಕಿಸ್ತಾನದ ಫಾಹಿಮ್ ಅಶ್ರಫ್‌, ಪಟ್ಟಿಯಲ್ಲಿರುವ ಏಕೈಕ ವೇಗದ ಬೌಲರ್‌. ಬ್ಯಾಟಿಂಗ್ ವಿಭಾಗದಲ್ಲಿ ಭಾರತದ ಶಿಖರ್ ಧವನ್‌ ಐದು ಸ್ಥಾನಗಳ ಏರಿಕೆಯೊಂದಿಗೆ 11ನೇ ಸ್ಥಾನದಲ್ಲಿದ್ದಾರೆ. ರೋಹಿತ್ ಶರ್ಮಾ ಮತ್ತು ಕೆ.ಎಲ್‌.ರಾಹುಲ್‌ ತಲಾ ಎರಡು ಸ್ಥಾನಗಳ ಕುಸಿತ ಕಂಡಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !