ಕೊಹ್ಲಿ ಬೆಂಬಲಕ್ಕೆ ಕುಲದೀಪ್

ಶನಿವಾರ, ಏಪ್ರಿಲ್ 20, 2019
27 °C
ಐಪಿಎಲ್‌ನಲ್ಲಿ ಆರ್‌ಸಿಬಿ ತಂಡದ ಸತತ ಸೋಲು

ಕೊಹ್ಲಿ ಬೆಂಬಲಕ್ಕೆ ಕುಲದೀಪ್

Published:
Updated:

 ಕೋಲ್ಕತ್ತ: ವಿರಾಟ್ ಕೊಹ್ಲಿ ಅವರು ಭಾರತದ ತಂಡದ ಪರ ಆಡುವಾಗ ಸದಾ ಗೆಲುವಿಗೆ ತುಡಿಯುತ್ತಾರೆ.  ಆರ್‌ಸಿಬಿ ತಂಡದ ಸೋಲು ವಿಶ್ವಕಪ್‌ ಟೂರ್ನಿಯಲ್ಲಿ ಅವರ ನಾಯಕತ್ವದ ಮೇಲೆ ಪರಿಣಾಮ ಬೀರದು ಎಂದು ಕ್ರಿಕೆಟಿಗ ಕುಲದೀಪ್ ಯಾದವ್ ಹೇಳಿದ್ದಾರೆ.  

ಹಲವು ದಾಖಲೆಗಳನ್ನು ಮುರಿದಿರುವ ಕೊಹ್ಲಿ ವಿಶ್ವದ ಶ್ರೇಷ್ಠ ಕ್ರಿಕೆಟಿಗ. ಐಪಿಎಲ್‌ನಲ್ಲಿ 5000ಕ್ಕೂ ಹೆಚ್ಚು ರನ್‌ ಗಳಿಸಿರುವ ಅವರು ತಂಡಕ್ಕೆ ತಮಗೆಷ್ಟು ಸಾಧ್ಯವೋ ಅಷ್ಟು ಕೊಡುಗೆಯನ್ನು ನೀಡಿದ್ದಾರೆ. ಬಹುಶಃ ತಂಡದ ಸಂಯೋಜನೆ ಕೊರತೆ ಅವರ ಹಿನ್ನಡೆಗೆ ಕಾರಣವಾಗಿದೆ. ಅವರ ನಾಯಕತ್ವದಲ್ಲಿ ವಿಶ್ವಕಪ್‌ ಕ್ರಿಕೆಟ್ ಟೂರ್ನಿಯಲ್ಲಿ ನಮ್ಮ ತಂಡ ಉತ್ತಮವಾಗಿ ಆಡುವುದು ಖಚಿತ ಎಂದಿದ್ದಾರೆ.

ರಾಯಲ್‌ ಚಾಲೆಂಜರ್ಸ್ ಬೆಂಗಳೂರು ತಂಡ ಪ್ರಸಕ್ತ ಐಪಿಎಲ್ ಆವೃತ್ತಿಯಲ್ಲಿ ಸತತ ಆರು ಸೋಲು ಅನುಭವಿಸಿದೆ. ತಂಡವು ಶನಿವಾರ ಮೊಹಾಲಿಯಲ್ಲಿ ಕಿಂಗ್ಸ್‌ ಇಲೆವನ್ ಪಂಜಾಬ್ ಎದುರು ಆಡಲಿದೆ.

ಬರಹ ಇಷ್ಟವಾಯಿತೆ?

 • 4

  Happy
 • 1

  Amused
 • 0

  Sad
 • 0

  Frustrated
 • 2

  Angry

Comments:

0 comments

Write the first review for this !