ನವದೆಹಲಿ: ಇಂಡಿಯನ್ ಪ್ರೀಮಿಯರ್ ಲೀಗ್ 2026ರಲ್ಲಿ ಅದ್ಭುತ ಬ್ಯಾಟಿಂಗ್ ಮೂಲಕವೇ ಎಲ್ಲರ ಗಮನ ಸೆಳೆಯುತ್ತಿರುವ ಪ್ರತಿಭಾವಂತ, ಯುವ ಬ್ಯಾಟರ್ ವೈಭವ್ ಸೂರ್ಯವಂಶಿ, ಐಪಿಎಲ್ನ ಒಂದೇ ಆವೃತ್ತಿಯಲ್ಲಿ ಅತ್ಯಧಿಕ ಸಿಕ್ಸರ್ ಸಿಡಿಸಿರುವ ಕ್ರಿಸ್ ಗೇಲ್ ಅವರ ದಾಖಲೆಯನ್ನು ಮುರಿಯಲಿದ್ದಾರೆ ಎಂದು ಭಾರತ ತಂಡದ ಮಾಜಿ ನಾಯಕ ಅನಿಲ್ ಕುಂಬ್ಳೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಮುಕ್ತಾಯಗೊಂಡ ಲಖನೌ ಸೂಪರ್ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಅಮೋಘ ಬ್ಯಾಟಿಂಗ್ ಮಾಡಿದ ವೈಭವ್ 10 ಸಿಕ್ಸರ್, 7 ಬೌಂಡರಿಗಳ ನೆರವಿನಿಂದ 39 ಎಸೆತಗಳಲ್ಲಿ 93 ರನ್ ಸಿಡಿಸಿದರು. ಆ ಮೂಲಕ ಭಾರತದ ಪರ ಸೀಸನ್ ಒಂದರಲ್ಲಿ 50ಕ್ಕೂ ಅಧಿಕ ಸಿಕ್ಸರ್ ಬಾರಿಸಿದ ಬ್ಯಾಟರ್ ಎಂಬ ದಾಖಲೆ ಮಾಡಿದ್ದಾರೆ.
.10 ಸಿಕ್ಸರ್, 7 ಬೌಂಡರಿ ಸಹಿತ 93 ರನ್: IPLನಲ್ಲಿ ಹಲವು ದಾಖಲೆ ಸೃಷ್ಟಿಸಿದ ವೈಭವ್.ವೇಗವಾಗಿ 100 ಸಿಕ್ಸರ್: ದಿಗ್ಗಜರನ್ನು ಹಿಂದಿಕ್ಕಿ ದಾಖಲೆ ಬರೆದ ವೈಭವ್ ಸೂರ್ಯವಂಶಿ.
15 ವರ್ಷದ ಸೂರ್ಯವಂಶಿ ಐಪಿಎಲ್ 2026ರಲ್ಲಿ ಆಡಿರುವ 13 ಪಂದ್ಯಗಳಿಂದ 53 ಸಿಕ್ಸರ್ಗಳನ್ನು ಬಾರಿಸಿದ್ದಾರೆ. ಕ್ರಿಸ್ ಗೇಲ್ ಅವರು ಐಪಿಎಲ್ ಆವೃತ್ತಿ ಒಂದರಲ್ಲಿ 59 ಸಿಕ್ಸರ್ ಸಿಡಿಸಿದ್ದಾರೆ. ಈ ದಾಖಲೆ ಮುರಿಯಲು ಸೂರ್ಯವಂಶಿ ಅವರಿಗೆ ಇನ್ನೂ 7 ಸಿಕ್ಸರ್ಗಳ ಅಗತ್ಯವಿದೆ. ಹಾಗಾಗಿ, ಕುಂಬ್ಳೆ ಅವರು ಈ ಬಾರಿ ಗೇಲ್ ದಾಖಲೆಯನ್ನು ಸೂರ್ಯವಂಶಿ ಮುರಿಯಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

‘ರಾಜಸ್ಥಾನ ರಾಯಲ್ಸ್ ಲೀಗ್ನಲ್ಲಿ ಬಾಕಿ ಉಳಿದಿರುವ ಒಂದು ಪಂದ್ಯ ಗೆದ್ದರೆ, ಪ್ಲೇ ಆಫ್ ತಲುಪಲಿದೆ. ಆಗ ಸೂರ್ಯವಂಶಿ ಅವರಿಗೆ ಇನ್ನೂ ಹೆಚ್ಚಿನ ಅವಕಾಶಗಳು ಸಿಗಲಿವೆ. ಹಾಗಾಗಿ, ಅವರು ಕ್ರಿಸ್ ಗೇಲ್ ಹೆಸರಿನಲ್ಲಿರುವ ಸಾರ್ವಕಾಲಿಕ ದಾಖಲೆಯನ್ನು ಮುರಿದು ಹೊಸ ದಾಖಲೆ ಬರೆಯುವುದನ್ನು ನಾವು ನೋಡಬಹುದು’ ಎಂದು ಕುಂಬ್ಳೆ ಸ್ಟಾರ್ ಸ್ಪೋರ್ಟ್ಸ್ಗೆ ತಿಳಿಸಿದ್ದಾರೆ.

‘ಕೆಲವೇ ಬ್ಯಾಟರ್ಗಳು ಮಾತ್ರ ಕವರ್ ಮೇಲೆ ಸುಲಭವಾಗಿ ಸಿಕ್ಸರ್ ಹೊಡೆಯುವ ಸಾಮರ್ಥ್ಯ ಹೊಂದಿದ್ದಾರೆ. ಅದರಲ್ಲಿ ಸೂರ್ಯವಂಶಿ ಕೂಡ ಒಬ್ಬರು. ಅವರು, ದಿಗ್ವೇಶ್ ರಾಥಿ ಬೌಲಿಂಗ್ನಲ್ಲಿ ಬಾರಿಸಿದ ಸಿಕ್ಸರ್ ಅದಕ್ಕೆ ಸಾಕ್ಷಿ. ಅವರ ಕುರಿತು ವಿವರಿಸಲು ನನ್ನ ಬಳಿ ಪದಗಳೇ ಇಲ್ಲ. ಆ ಮಗು ತುಂಬಾ ವಿಶೇಷ ಎಂದಷ್ಟೇ ಹೇಳಬಲ್ಲೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.