ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಟೂರ್ನಿಯಲ್ಲಿ ಪ್ರತಿದಿನವೂ ಕೋವಿಡ್ ಟೆಸ್ಟ್ ನಡೆಸಿ: ನೆಸ್ ವಾಡಿಯಾ ಸಲಹೆ

Last Updated 24 ಜುಲೈ 2020, 14:32 IST
ಅಕ್ಷರ ಗಾತ್ರ

ನವದೆಹಲಿ: ಈ ಸಲ ಐಪಿಎಲ್ ಕ್ರಿಕೆಟ್ ಟೂರ್ನಿಯಲ್ಲಿ ಆಡುವ ಆಟಗಾರರಿಗೆ ಪ್ರತಿದಿನವೂ ಕೋವಿಡ್ –19 ಪರೀಕ್ಷೆ ಮಾಡಬೇಕು ಎಂದು ಕಿಂಗ್ಸ್ ಇಲೆವನ್ ಪಂಜಾಬ್ ತಂಡದ ಸಹಮಾಲೀಕ ನೆಸ್ ವಾಡಿಯಾ ಸಲಹೆ ನೀಡಿದ್ದಾರೆ.

ಸೆಪ್ಟೆಂಬರ್ 19ರಿಂದ ಯುಎಇಯಲ್ಲಿ ಐಪಿಎಲ್ ಸಂಘಟಿಸಲಾಗುವುದು ಎಂದು ಟೂರ್ನಿಯ ಆಡಳಿತ ಸಮಿತಿಯ ಮುಖ್ಯಸ್ಥ ಬ್ರಿಜೇಶ್ ಪಟೇಲ್ ಹೇಳಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿರುವ ವಾಡಿಯಾ, ’ಆಟದ ಮೈದಾನದೊಳಗೆ ಮತ್ತು ಹೊರಗೆ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಬೇಕು. ಪೂರ್ತಿ ಟೂರ್ನಿಯು ನಿಷ್ಕಂಳಕವಾಗಿ ಮುಗಿಯುವಂತೆ ನೋಡಿಕೊಳ್ಳಬೇಕು. ಎಲ್ಲಕ್ಕಿಂತ ಪ್ರಮುಖವಾಗಿ ಆಟಗಾರರ ಆರೋಗ್ಯ ಮತ್ತು ಸುರಕ್ಷತೆಗೆ ಒತ್ತು ನೀಡಬೇಕು‘ ಎಂದಿದ್ದಾರೆ.

’ಟೂರ್ನಿ ನಡೆಯುವ ಪ್ರತಿದಿನವೂ ಪರೀಕ್ಷೆ ನಡೆಸುವುದು ಸೂಕ್ತ. ನಾನೊಬ್ಬ ಕ್ರಿಕೆಟಿಗನಾಗಿದ್ದರೆ ಖಂಡಿತವಾಗಿಯೂ ಇಂತಹ ಪ್ರಕ್ರಿಯೆಗೆ ಸಂಪೂರ್ಣವಾಗಿ ಸಹಕರಿಸುತ್ತಿದ್ದೆ. ದಿನವೂ ಪರೀಕ್ಷೆಗೊಳಪಡುವುದರಿಂದ ಯಾವುದೇ ಹಾನಿಯಾಗುವುದಿಲ್ಲ‘ ಎಂದಿದ್ದಾರೆ.

’ಇಂಗ್ಲೆಂಡ್ ವೆಸ್ಟ್ ಇಂಡಿಸ್ ನಡುವಣ ಸರಣಿಯ ಮಾದರಿಯಲ್ಲಿ ಐಪಿಎಲ್‌ನಲ್ಲಿಯೂ ಜೀವ ಸುರಕ್ಷತಾ ವಾತಾವರಣ ನಿರ್ಮಾಣ ಕಷ್ಟಸಾಧ್ಯ. ಇಲ್ಲಿ ಎಂಟು ತಂಡಗಳು ಭಾಗವಹಿಸುತ್ತವೆ. ಆದ್ದರಿಂದ ಇಲ್ಲಿ ಪ್ರಯಾಣ, ಸರಂಜಾಮು ಸಾಗಣೆಗಳ ಸವಾಲು ದೊಡ್ಡದು. ಆದ್ದರಿಂದ ಇದಕ್ಕೆ ಸೂಕ್ತವಾಗುವ ರೀತಿಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಬೇಕಿದೆ‘ ಎಂದರು.

’ಕೊರೊನಾ ಟೆಸ್ಟ್ ಪ್ರಕ್ರಿಯೆಗೆ ಯುಎಇಯಲ್ಲಿ ಅತ್ಯುತ್ತಮ ಸೌಲಭ್ಯಗಳು ಇವೆ. ಅಲ್ಲಿಯ ಸರ್ಕಾರದ ನೆರವಿನೊಂದಿಗೆ ಬಿಸಿಸಿಐ ನಮ್ಮ ಆಟಗಾರರಿಗೂ ಆ ಸೌಲಭ್ಯಗಳು ಸಿಗುವಂತೆ ನೋಡಿಕೊಳ್ಳಬೇಕು‘ ಎಂದಿದ್ದಾರೆ.

’ಐಪಿಎಲ್ ಪಂದ್ಯಗಳನ್ನು ಟಿವಿಯ ನೇರಪ್ರಸಾರದಲ್ಲಿ ದಾಖಲೆಯ ಸಂಖ್ಯೆಯಲ್ಲಿ ಜನರು ವೀಕ್ಷಿಸುವುದರಲ್ಲಿ ಸಂದೇಹವೇ ಇಲ್ಲ. ಇದು ಪ್ರಾಯೋಜಕರಿಗೆ ಬಹಳಷ್ಟು ಲಾಭ ತಂದುಕೊಡುತ್ತದೆ. ಆದ್ದರಿಂದ ಇಂತಹ ಪರಿಸ್ಥಿತಿಯಲ್ಲಿಯೂ ಪ್ರಾಯೋಜಕತ್ವ ನೀಡುವವರು ಹಿಂದೆ ಸರಿಯುವುದಿಲ್ಲ‘ ಎಂದು ವಾಡಿಯಾ ಭರವಸೆ ವ್ಯಕ್ತಪಡಿಸಿದರು.

’ಇವತ್ತಿನ ಪರಿಸ್ಥಿತಿಯಲ್ಲಿ ಸಕಾರಾತ್ಮಕ ಮನೋಭಾವದ ಸಂದೇಶವನ್ನು ಐಪಿಎಲ್ ಕೊಡುವ ಭರವಸೆ ಇದೆ. ಭಯದ ಭಾವವನ್ನು ಹೋಗಲಾಡಿಸಿ ಮನದಲ್ಲಿ ಶಾಂತಿ ಮತ್ತು ಆತ್ಮವಿಶ್ವಾಸವನ್ನು ತುಂಬಲು ಸಹಕಾರಿಯಾಗಲಿದೆ‘ ಎಂದು ವಾಡಿಯಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT