ಬರ್ಮಿಂಗ್ಹ್ಯಾಮ್: ಭಾರತದ ಅಗ್ರ ಸಿಂಗಲ್ಸ್ ಆಟಗಾರ ಲಕ್ಷ್ಯ ಸೇನ್ ಅವರು ಮೂರು ಗೇಮ್ಗಳ ಸೆಣಸಾಟದಲ್ಲಿ ಹಾಂಗ್ಕಾಂಗ್ನ ಆ್ಯಂಗಸ್ ಇಂಗ್ ಕಾ ಲಾಂಗ್ ಅವರನ್ನು ಸೋಲಿಸಿ ಆಲ್ ಇಂಗ್ಲೆಂಡ್ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ಗೆ ದಾಪುಗಾಲಿಟ್ಟರು.

ವಿಶ್ವ ಕ್ರಮಾಂಕದಲ್ಲಿ 12ನೇ ಸ್ಥಾನದಲ್ಲಿರುವ ಲಕ್ಷ್ಯ ಗುರುವಾರ ನಡೆದ ಪ್ರಿಕ್ವಾರ್ಟರ್ಫೈನಲ್ ಪಂದ್ಯದಲ್ಲಿ 21–19, 21–23, 21–10 ರಿಂದ ಇಂಗ್ ಕಾ ಲಾಂಗ್ ಅವರನ್ನು ಹಿಮ್ಮೆಟ್ಟಿಸಿದರು. ಉತ್ತರಾಖಂಡದ ಆಟಗಾರ ಮೊದಲ ಸುತ್ತಿನಲ್ಲಿ ಹಾಲಿ ಚಾಂಪಿಯನ್ ಶಿ ಯುಕಿ ಅವರಿಗೆ ಆಘಾತ ನೀಡಿದ್ದರು.

2022ರಲ್ಲಿ ಫೈನಲ್ ತಲುಪಿದ್ದ ಲಕ್ಷ್ಯ ಅವರು ಕ್ವಾರ್ಟರ್ಫೈನಲ್ನಲ್ಲಿ ಆರನೇ ಶ್ರೇಯಾಂಕ ಪಡೆದಿರುವ ಚೀನಾದ ಆಟಗಾರ ಲಿ ಶಿಫೆಂಗ್ ಅವರನ್ನು ಎದುರಿಸಲಿದ್ದಾರೆ.

ಮೊದಲ ಗೇಮ್ನಲ್ಲಿ 4–6 ಹಿನ್ನಡೆಯಿಂದ ಚೇತರಿಸಿದ ಅವರು ಕ್ರಮೇಣ 15–11 ಮುನ್ನಡೆ ಸಾಧಿಸಿದರು. ನಂತರ ಅದನ್ನು 17–13ಕ್ಕೆ ಬೆಳೆಸಿದರು. ಆದರೆ ಹಾಂಗ್ಕಾಂಗ್ ಆಟಗಾರನಿಂದ ಹೋರಾಟ ಎದುರಾಯಿತು. ಸ್ಕೋರ್ 19–19ರಲ್ಲಿ ಸಮನಾಯಿತು. ಜಂಪ್ ಸ್ಮ್ಯಾಶ್ ಮೂಲಕ ಒಂದು ಪಾಯಿಂಟ್ ಪಡೆದ ಲಕ್ಷ್ಯ, ಎದುರಾಳಿಯ ಹೊಡೆತ ಕೋರ್ಟ್ನಾಚೆ ಬಿದ್ದಾಗ ‘ಗೇಮ್ ಪಾಯಿಂಟ್’ ಸಹ ಗಳಿಸಿದರು.

ಲಕ್ಷ್ಯ ಅವರು ಎರಡನೇ ಗೇಮ್ನ ಬಹುತೇಕ ಸಮಯ ಮುನ್ನಡೆಯಲ್ಲಿದ್ದರು. ಲಾಂಗ್ ಅವರು ಅಧೀರರಾಗಲಿಲ್ಲ. 7–14, ನಂತರ 12–17ರಲ್ಲಿ ಹಿನ್ನಡೆಯಿಂದ ಅವರು ಚೇತರಿಸಿದರು. ಉತ್ತಮ ಹೋರಾಟ ಕಂಡುಬಂದು ಸ್ಕೋರ್ 20–20ರಲ್ಲಿ ಸಮನಾಯಿತು. ನಂತರ ಹಾಂಗ್ಕಾಂಗ್ ಆಟಗಾರ ಗೇಮ್ ಗೆದ್ದರು.

ನಿರ್ಣಾಯಕ ಗೇಮ್ನಲ್ಲಿ ಲಕ್ಷ್ಯ ಯಾವ ಹಂತದಲ್ಲೂ ಎದುರಾಳಿ ಲಾಂಗ್ ಅವರಿಗೆ ಚೇತರಿಸಲು ಅವಕಾಶ ನೀಡಲಿಲ್ಲ. 10–4 ಮುನ್ನಡೆ ಪಡೆದ ಅವರು ನಂತರ ಅದನ್ನು 18–7ಕ್ಕೆ ಹೆಚ್ಚಿಸಿದರು. ಅಮೋಘ ರಕ್ಷಣೆಯ ಆಟದ ಜೊತೆಗೆ ಕೆಲವೊಮ್ಮೆ ಡೈವ್ಗಳನ್ನು ಮಾಡಿ ‘ರ್ಯಾಲಿ’ಗಳಲ್ಲಿ ಪಾಯಿಂಟ್ ನಷ್ಟವಾಗದಂತೆ ನೋಡಿಕೊಂಡು ಜಯ ಸಾಧಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.