ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಲಂಕಾ– ಪಾಕ್‌ ಪಂದ್ಯ ರದ್ದು

Last Updated 7 ಜೂನ್ 2019, 20:12 IST
ಅಕ್ಷರ ಗಾತ್ರ

ಬ್ರಿಸ್ಟಲ್‌ (ರಾಯಿಟರ್ಸ್‌): ಮಳೆ ಯಿಂದಾಗಿ ಪಾಕಿಸ್ತಾನ ಮತ್ತು ಶ್ರೀಲಂಕಾ ನಡುವಣ ವಿಶ್ವಕಪ್‌ ಪಂದ್ಯ ಶುಕ್ರವಾರ ಒಂದೂ ಎಸೆತ ಕಾಣದೇ ರದ್ದಾಯಿತು. ಎರಡೂ ತಂಡಗಳಿಗೆ ಒಂದೊಂದು ಪಾಯಿಂಟ್‌ ನೀಡಲಾಯಿತು.

ಅಂಪೈರ್‌ಗಳಾದ ನೈಜೆಲ್‌ ಲಾಂಗ್‌ ಮತ್ತು ಇಯಾನ್‌ ಗೌಲ್ಡ್‌ ಸ್ಥಳೀಯ ಕಾಲಮಾನ ಮಧ್ಯಾಹ್ನ 3.46ಕ್ಕೆ ಪರಿಶೀಲನೆ ನಡೆಸಿ ಪಂದ್ಯ ರದ್ದುಗೊಳಿಸುವ ನಿರ್ಧಾರ ಕೈಗೊಂಡರು.

ಈ ಒಂದು ಪಾಯಿಂಟ್‌ನಿಂದಾಗಿ ಎರಡೂ ತಂಡಗಳು ಮೂರು ಪಂದ್ಯಗಳಿಂದ ತಲಾ ಮೂರು ಪಾಯಿಂಟ್‌ಗಳನ್ನು ಗಳಿಸಿದಂತಾಗಿದೆ.

ಶ್ರೀಲಂಕಾ ತನ್ನ ಮುಂದಿನ ಪಂದ್ಯವನ್ನು ಮಂಗಳವಾರ ಇದೇ ಕ್ರೀಡಾಂಗಣದಲ್ಲಿ ಬಾಂಗ್ಲಾದೇಶ ವಿರುದ್ಧ ಆಡಲಿದೆ. ಪಾಕಿಸ್ತಾನ ಅದರ ಮರುದಿನ ಟಾಂಟನ್‌ನಲ್ಲಿ ಆಸ್ಟ್ರೇಲಿಯ ವಿರುದ್ಧ ಕಣಕ್ಕಿಳಿಯಲಿದೆ.

ಸರ್ಫರಾಜ್‌ ಅಹಮದ್‌ ಬಳಗ ತನ್ನ ಮೊದಲ ಪಂದ್ಯದಲ್ಲಿ ವೆಸ್ಟ್‌ ಇಂಡೀಸ್‌ಗೆ ಮಣಿದಿತ್ತು. ಆದರೆ, ಮುಂದಿನ ಪಂದ್ಯದಲ್ಲಿ ಪ್ರಬಲ ಇಂಗ್ಲೆಂಡ್‌ ತಂಡದ ಮೇಲೆ ರೋಚಕ ಜಯಗಳಿಸಿತ್ತು.

ನ್ಯೂಜಿಲೆಂಡ್‌ ಕೈಲಿ 10 ವಿಕೆಟ್‌ಗಳ ದಯನೀಯ ಸೋಲು ಕಂಡಿದ್ದ ದಿಮುತ್‌ ಕರುಣಾರತ್ನೆ ನಾಯಕತ್ವದ ಶ್ರೀಲಂಕಾ, ಎರಡನೇ ಪಂದ್ಯದಲ್ಲಿ ಅಫ್ಗಾನಿಸ್ತಾನ ವಿರುದ್ಧ ಹೋರಾಡಿ ಜಯಗಳಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT