ಮುಂಬೈ ಇಂಡಿಯನ್ಸ್ ಪಂದ್ಯಗಳಿಗೆ ಮಾಲಿಂಗ ಲಭ್ಯ

ಮಂಗಳವಾರ, ಏಪ್ರಿಲ್ 23, 2019
31 °C

ಮುಂಬೈ ಇಂಡಿಯನ್ಸ್ ಪಂದ್ಯಗಳಿಗೆ ಮಾಲಿಂಗ ಲಭ್ಯ

Published:
Updated:
Prajavani

ನವದೆಹಲಿ: ಶ್ರೀಲಂಕಾದ ಮಧ್ಯಮ ವೇಗಿ ಲಸಿತ್ ಮಾಲಿಂಗ ಅವರು ಮುಂಬೈ ಇಂಡಿಯನ್ಸ್‌ನ ಮುಂದಿನ ಎರಡು ಪಂದ್ಯಗಳಿಗೆ ಲಭ್ಯ ಇದ್ದಾರೆ ಎಂದು ತಂಡದ ಆಡಳಿತ ತಿಳಿಸಿದೆ. ಶ್ರೀಲಂಕಾದಲ್ಲಿ ನಡೆಯಲಿರುವ ದೇಶಿ ಏಕದಿನ ಕ್ರಿಕೆಟ್ ಟೂರ್ನಿಯಿಂದ ಮಲಿಂಗ ಅವರನ್ನು ಬಿಡುಗಡೆ ಮಾಡಿರುವ ಕಾರಣ ಐಪಿಎಲ್‌ನಲ್ಲಿ ಆಡುವ ಹಾದಿ ಸುಗಮವಾಗಿದೆ. ‌

ಏಪ್ರಿಲ್‌ 4ರಿಂದ  11ರ ವರೆಗೆ ನಡೆಯಲಿರುವ ಸೂಪರ್ ಪ್ರೊವಿನ್ಶಿಯಲ್ ದೇಶಿ ಏಕದಿನ ಕ್ರಿಕೆಟ್ ಸರಣಿಯಲ್ಲಿ ಆಡುವವರನ್ನು ಮಾತ್ರ ವಿಶ್ವಕಪ್ ತಂಡದ ಆಯ್ಕೆ ಪ್ರಕ್ರಿಯೆಗೆ ಪರಿಗಣಿಸಲಾಗುವುದು ಎಂದು ಶ್ರಿಲಂಕಾ ಕ್ರಿಕೆಟ್‌ ಮಂಡಳಿ ಈ ಹಿಂದೆ ಹೇಳಿತ್ತು. ಆದ್ದರಿಂದ ಮಲಿಂಗ ಶ್ರೀಲಂಕಾದಲ್ಲಿ ಇರುವುದು ಅನಿವಾರ್ಯ ಆಗಿತ್ತು.

ಆದರೆ ಬಿಸಿಸಿಐ ಮಾಡಿರುವ ಮನವಿಗೆ ಸ್ಪಂದಿಸಿರುವ ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರ್ಧಾರ ಬದಲಿಸಿದೆ. ವಿಶ್ವಕಪ್‌ನಲ್ಲಿ ಮಾಲಿಂಗ ಅವರ ಸ್ಥಾನ ಭದ್ರವಾಗಿರುವುದರಿಂದಾಗಿ ಅವರು ದೇಶಿ ಟೂರ್ನಿಯಿಲ್ಲಿ ಆಡುವುದು ನಿವಾರ್ಯವಲ್ಲ ಎಂದು ಆಯ್ಕೆ ಸಮಿತಿ ಮುಖ್ಯಸ್ಥ ಅಶಾಂತ ಡಿ ಮೆಲ್‌ ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 1

  Happy
 • 2

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !