ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೋಹಿತ್‌ಗೆ ಒತ್ತಡ ಮೀರಿ ನಿಲ್ಲುವ ಕಲೆ ಸಿದ್ಧಿಸಿದೆ: ವಿ.ವಿ.ಎಸ್.ಲಕ್ಷ್ಮಣ್

ಭಾರತದ ಹಿರಿಯ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ಅಭಿಪ್ರಾಯ
Last Updated 29 ಮೇ 2020, 19:21 IST
ಅಕ್ಷರ ಗಾತ್ರ

ನವದೆಹಲಿ: ‘ರೋಹಿತ್‌ ಶರ್ಮಾ ಅವರು ಶಾಂತಚಿತ್ತದಿಂದಲೇಒತ್ತಡದ ಪರಿಸ್ಥಿತಿಯನ್ನು ಮೀರಿ ನಿಲ್ಲುವ ಗುಣ ಮೈಗೂಡಿಸಿಕೊಂಡಿದ್ದಾರೆ. ಅವರು ಇಂಡಿಯನ್‌ ಪ್ರೀಮಿಯರ್‌ ಲೀಗ್‌ನ (ಐಪಿಎಲ್‌) ಅತ್ಯಂತ ಯಶಸ್ವಿ ನಾಯಕನಾಗಿ ಗುರುತಿಸಿಕೊಂಡಿರುವುದಕ್ಕೆ ಇದೇ ಕಾರಣ’ ಎಂದು ಭಾರತದ ಹಿರಿಯ ಕ್ರಿಕೆಟಿಗ ವಿವಿಎಸ್‌ ಲಕ್ಷ್ಮಣ್‌ ನುಡಿದಿದ್ದಾರೆ.

33 ವರ್ಷ ವಯಸ್ಸಿನ ರೋಹಿತ್‌, ಮುಂಬೈ ಇಂಡಿಯನ್ಸ್‌ ತಂಡವನ್ನು ಒಟ್ಟು ನಾಲ್ಕು ಬಾರಿ ಪ್ರಶಸ್ತಿಯತ್ತ ಮುನ್ನಡೆಸಿದ ಹಿರಿಮೆ ಹೊಂದಿದ್ದಾರೆ.

‘ಚೊಚ್ಚಲ ಐಪಿಎಲ್‌ನಲ್ಲಿ (2008) ಡೆಕ್ಕನ್‌ ಚಾರ್ಜರ್ಸ್‌ ತಂಡದಲ್ಲಿದ್ದ ಘಟಾನುಘಟಿ ಆಟಗಾರರು ಸತತ ವೈಫಲ್ಯ ಕಂಡಿದ್ದರು. ಹೀಗಿದ್ದರೂ ರೋಹಿತ್‌ ಮಾತ್ರ ಎದೆಗುಂದಿರಲಿಲ್ಲ. ಮಧ್ಯಮ ಕ್ರಮಾಂಕದಲ್ಲಿ ಕಣಕ್ಕಿಳಿಯುತ್ತಿದ್ದ ಅವರು ಅಮೋಘ ಸಾಮರ್ಥ್ಯ ತೋರಿ ಗಮನ ಸೆಳೆದಿದ್ದರು’ ಎಂದು 45 ವರ್ಷ ವಯಸ್ಸಿನ ಲಕ್ಷ್ಮಣ್‌ ತಿಳಿಸಿದ್ದಾರೆ.

‘ಐಪಿಎಲ್‌ ಮೊದಲ ಆವೃತ್ತಿಯಿಂದಲೂ ರೋಹಿತ್‌ ಅವರ ಯಶಸ್ಸಿನ ಗ್ರಾಫ್‌ ಏರುಮುಖವಾಗಿಯೇ ಸಾಗಿದೆ. ಪಂದ್ಯದಿಂದ ಪಂದ್ಯಕ್ಕೆ ಆತ್ಮವಿಶ್ವಾಸ ಇಮ್ಮಡಿಸುತ್ತಲೇ ಇದೆ. ಪರಿಸ್ಥಿತಿ ಎಷ್ಟೇ ಕಠಿಣವಾಗಿರಲಿ, ಅವರು ಕಿಂಚಿತ್ತೂ ಅಂಜುವುದಿಲ್ಲ’ ಎಂದಿದ್ದಾರೆ.

ಐಪಿಎಲ್‌ನಲ್ಲಿ ಅತಿ ಹೆಚ್ಚು ರನ್‌ ಗಳಿಸಿರುವವರ ಪಟ್ಟಿಯಲ್ಲಿ ರೋಹಿತ್‌ ಮೂರನೇ ಸ್ಥಾನದಲ್ಲಿದ್ದಾರೆ. 188 ಪಂದ್ಯಗಳನ್ನು ಆಡಿರುವ ಅವರು 31.60 ಸರಾಸರಿಯಲ್ಲಿ 4,898 ರನ್‌ಗಳನ್ನು ದಾಖಲಿಸಿದ್ದಾರೆ. ಅಜೇಯ 109 ಅವರ ವೈಯಕ್ತಿಕ ಗರಿಷ್ಠ ರನ್‌ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT