ನವದೆಹಲಿ: ಭಾರತ ಕ್ರಿಕೆಟ್ ನಿಯಂತ್ರಣ ಮಂಡಳಿಯ ವೀಕ್ಷಕ ವಿವರಣೆಗಾರ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಮಾಜಿ ಲೆಗ್ಸ್ಟಿನ್ನರ್ ಲಕ್ಷ್ಮಣ್ ಶಿವರಾಮಕೃಷ್ಣನ್ ಇಂದು ತಿಳಿಸಿದ್ದಾರೆ.

ತಮ್ಮ ‘ಎಕ್ಸ್’ ಖಾತೆಯಲ್ಲಿ ಸರಣಿ ಟ್ವೀಟ್ ಮಾಡಿರುವ ಅವರು ತಮ್ಮನ್ನು ‘ವರ್ಣ ತಾರತಮ್ಯ’ಕ್ಕೆ ಗುರಿಪಡಿಸಲಾಗಿದೆ ಎಂದು ಬಿಸಿಸಿಐ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.

80ರ ದಶಕದಲ್ಲಿ ತಮ್ಮ 17ನೇ ವಯಸ್ಸಿನಲ್ಲಿಯೇ ದೇಶಿ ಕ್ರಿಕೆಟ್ನಲ್ಲಿ ಸಂಚಲನ ಮೂಡಿಸಿದ್ದ ಲೆಗ್ಸ್ಪಿನ್ನರ್ ಶಿವರಾಮಕೃಷ್ಣ ಅವರು. ಮೊನಚಾದ ಲೆಗ್ಸ್ಪಿನ್, ಟಾಪ್ ಸ್ಪಿನ್ ಮತ್ತು ನಿಖರವಾದ ಗೂಗ್ಲಿ ಗಳ ಮೂಲಕ ಬ್ಯಾಟರ್ಗಳನ್ನು ಕಂಗೆಡಿಸುತ್ತಿದ್ದರು.

ಟ್ವೀಟ್ಗಳಲ್ಲಿ ಏನಿದೆ?

‘ಟಾಸ್ ಮಾಡುವಾಗ ಮತ್ತು ಪಂದ್ಯದ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭಗಳಲ್ಲಿ ನಿರೂಪಣೆಗೆ ಅವಕಾಶ ನೀಡುತ್ತಿಲ್ಲ. ಆದ್ದರಿಂದ ವೀಕ್ಷಕ ವಿವರಣೆಗಾರ ವೃತ್ತಿಗೆ ತೆರೆ ಎಳೆಯುತ್ತಿದ್ದೇನೆ’ ಎಂದು ಅವರು ಆರೋಪಿಸಿದ್ದಾರೆ.

‘ಬಿಸಿಸಿಐನ ಪ್ರಸಾರ ಹಕ್ಕುಗಳನ್ನು ಪಡೆದಿರುವ ಕಂಪೆನಿಯೊಂದು ಇಂತಹ ಧೋರಣೆ ತೋರುತ್ತಿರುವುದು ಯಾಕೆಂದು ಊಹಿಸಬಲ್ಲಿರಾ’? ಎಂದೂ ಅವರು ಇನ್ನೊಂದು ಟ್ವೀಟ್ನಲ್ಲಿ ಪ್ರಶ್ನಿಸಿದ್ದಾರೆ.

ಅವರ ಸಂದೇಶಕ್ಕೆ ಪ್ರತಿಕ್ರಿಯಿಸಿರುವ ವ್ಯಕ್ತಿಯೊಬ್ಬರು, ‘ನಿಮ್ಮ ತ್ವಚೆಯ ಬಣ್ಣದ ಕಾರಣಕ್ಕೆ ಇರಬೇಕು’ ಎಂದಿದ್ದಾರೆ. ಅದಕ್ಕೆ ಪ್ರತ್ಯುತ್ತರ ನೀಡಿರುವ ಶಿವರಾಮಕೃಷ್ಣನ್, ‘ನೀವು ಹೇಳಿದ್ದು ಸರಿ. ವರ್ಣ ತಾರತಮ್ಯ’ ಎಂದಿದ್ದಾರೆ.

‘23 ವರ್ಷಗಳಿಂದ ನಾನು ಕಾಮೆಂಟ್ರಿ ಮಾಡುತ್ತಿರುವೆ. ಆದರೆ ಟಾಸ್ ಹಾಕುವಾಗ ಮತ್ತು ಪ್ರಶಸ್ತಿ ಪ್ರದಾನ ಮಾಡುವ ಸಂದರ್ಭಗಳಲ್ಲಿ ನನಗೆ ನಿರೂಪಣೆಗೆ ಅವಕಾಶ ಕೊಡುತ್ತಿಲ್ಲ. ಹೊಸದಾಗಿ ಬರುತ್ತಿರುವ ವೀಕ್ಷಕ ವಿವರಣೆಗಾರರೂ ಪಂದ್ಯಕ್ಕೂ ಮುನ್ನ ಪಿಚ್ ವರದಿ ನೀಡುತ್ತಿದ್ದಾರೆ. ಟಾಸ್ ಮತ್ತು ಪ್ರೆಸೆಂಟೇಷನ್ ನಿರೂಪಣೆ ಮಾಡುತ್ತಿದ್ದಾರೆ’ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

‘ನನ್ನ ನಿವೃತ್ತಿಯ ಸುದ್ದಿ ಅಷ್ಟೇನೂ ದೊಡ್ಡದಲ್ಲ. ಆದರೆ ಟಿ.ವಿ. ಪ್ರೊಡಕ್ಷನ್ ಹಿಂದಿರುವ ಕತೆ ಬಿಚ್ಚಿಕೊಳ್ಳಲು ಕಾರಣವಾಗಲಿದೆ. ಶೀಘ್ರದಲ್ಲಿಯೇ ನಿವೇಲ್ಲರೂ ಅದನ್ನು ಬೃಹತ್ ಪರದೆ ಮೇಲೆ ನೋಡುವಿರಿ’ ಎಂದೂ ಅವರು ಉಲ್ಲೇಖಿಸಿದ್ದಾರೆ.

60 ವರ್ಷದ ಶಿವರಾಮಕೃಷ್ಣನ್ ಅವರು ತಮ್ಮ ನೇರನುಡಿಗೆ ಹೆಸರಾದವರು. ಅವರು 1983 ರಿಂದ 86ರ ಅವಧಿಯಲ್ಲಿ 9 ಟೆಸ್ಟ್ ಮತ್ತು 16 ಅಂತರರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಆಡಿದ್ದಾರೆ. 1984ರಲ್ಲಿ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಅವರು ಒಟ್ಟು 12 ವಿಕೆಟ್ ಗಳಿಸಿ ಗೆಲುವಿನ ರೂವಾರಿಯಾಗಿದ್ದರು.

ನಿವೃತ್ತಿಯ ನಂತರ ಅವರು ಐಸಿಸಿ ಕ್ರಿಕೆಟ್ ಸಮಿತಿಯಲ್ಲಿಯೂ ಆಟಗಾರರ ಪ್ರತಿನಿಧಿಯಾಗಿದ್ದರು.
.ಐಪಿಎಲ್ ಫೈನಲ್, ಪ್ಲೇಆಫ್ ಪಂದ್ಯಗಳಿಗೂ ಬೆಂಗಳೂರು ಆತಿಥ್ಯ: ವೆಂಕಟೇಶ್ ಪ್ರಸಾದ್.ಏಕದಿನ ವಿಶ್ವಕಪ್ನಲ್ಲಿ ವಿರಾಟ್ ಕೊಹ್ಲಿ ಆಡುವುದು ಟೀಂ ಇಂಡಿಯಾಗೂ ಅನಿವಾರ್ಯ!.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.