ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಉ.ಪ್ರದೇಶಕ್ಕೆ ಬೃಹತ್‌ ಮುನ್ನಡೆ

7
ಸಂಕಷ್ಟದಲ್ಲಿ ಅಧ್ಯಕ್ಷರ ಇಲೆವನ್‌

ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್: ಉ.ಪ್ರದೇಶಕ್ಕೆ ಬೃಹತ್‌ ಮುನ್ನಡೆ

Published:
Updated:

ಬೆಂಗಳೂರು: ಉಪೇಂದರ್‌ ಯಾದವ್‌ (116; 133ಎ, 16ಬೌಂ) ಮತ್ತು ಜೀಶನ್‌ ಅನ್ಸಾರಿ (97) ಸೋಮವಾರ ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌ ತಂಡದ ಬೌಲರ್‌ಗಳನ್ನು ಕಾಡಿದರು.

ಇವರ ಅಮೋಘ ಆಟದ ನೆರವಿನಿಂದ ಉತ್ತರ ಪ್ರದೇಶ ಸಂಸ್ಥೆ ತಂಡ ಕ್ಯಾಪ್ಟನ್‌ ತಿಮ್ಮಪ್ಪಯ್ಯ ಸ್ಮಾರಕ ಕ್ರಿಕೆಟ್‌ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಬೃಹತ್‌ ಮುನ್ನಡೆ ಗಳಿಸಿದೆ.

ಜಸ್ಟ್‌ ಕ್ರಿಕೆಟ್‌ ಮೈದಾನದಲ್ಲಿ 4 ವಿಕೆಟ್‌ಗೆ 143ರನ್‌ಗಳಿಂದ ಮೊದಲ ಇನಿಂಗ್ಸ್‌ನ ಆಟ ಮುಂದುವರಿಸಿದ ಉತ್ತರ ಪ್ರದೇಶ ತಂಡ 100.3 ಓವರ್‌ಗಳಲ್ಲಿ 425ರನ್‌ ದಾಖಲಿಸಿತು. ಇದ ರೊಂದಿಗೆ 290ರನ್‌ಗಳ ಮುನ್ನಡೆ ತನ್ನದಾಗಿಸಿಕೊಂಡಿತು. ಅಧ್ಯಕ್ಷರ ಇಲೆವನ್‌ನ ಟಿ.ಪ್ರದೀಪ ಮತ್ತು ಕೆ.ಸಿ.ಕಾರ್ಯಪ್ಪ ತಲಾ ಮೂರು ವಿಕೆಟ್‌ ಉರುಳಿಸಿದರು.

ದ್ವಿತೀಯ ಇನಿಂಗ್ಸ್‌ ಶುರುಮಾಡಿರುವ ಅಧ್ಯಕ್ಷರ ಇಲೆವನ್‌, ದಿನದಾಟದ ಅಂತ್ಯಕ್ಕೆ 30 ಓವರ್‌ಗಳಲ್ಲಿ 4 ವಿಕೆಟ್‌ಗೆ 136ರನ್‌ ಕಲೆಹಾಕಿದೆ.

ಗುಜರಾತ್‌ಗೆ ಮುನ್ನಡೆ: ಆಲೂರಿನ ಮೂರನೆ ಮೈದಾನದಲ್ಲಿ ನಡೆಯುತ್ತಿರುವ ಛತ್ತೀಸಗಡ ಕ್ರಿಕೆಟ್‌ ಸಂಘ ಎದುರಿನ ಎರಡನೆ ಸೆಮಿಫೈನಲ್‌ನಲ್ಲಿ ಗುಜರಾತ್‌ ಸಂಸ್ಥೆ ಮುನ್ನಡೆ ಗಳಿಸಿದೆ. 

ಗುಜರಾತ್‌ ತಂಡ ದಿನದಾಟದ ಅಂತ್ಯಕ್ಕೆ ಪ್ರಥಮ ಇನಿಂಗ್ಸ್‌ನಲ್ಲಿ 104 ಓವರ್‌ಗಳಲ್ಲಿ 3 ವಿಕೆಟ್‌ಗೆ 399ರನ್‌ ಪೇರಿಸಿದೆ. ಈ ತಂಡದ ಕ್ಷಿತಿಜ್‌ ಪಟೇಲ್‌ (ಬ್ಯಾಟಿಂಗ್‌ 175; 275ಎ, 20ಬೌಂ, 3ಸಿ) ದ್ವಿಶತಕದತ್ತ ಹೆಜ್ಜೆ ಇಟ್ಟಿದ್ದಾರೆ.

ಸಂಕ್ಷಿಪ್ತ ಸ್ಕೋರ್‌: ಕೆಎಸ್‌ಸಿಎ ಅಧ್ಯಕ್ಷರ ಇಲೆವನ್‌: ಪ್ರಥಮ ಇನಿಂಗ್ಸ್‌, 45.3 ಓವರ್‌ಗಳಲ್ಲಿ 135 ಮತ್ತು 30 ಓವರ್‌ಗಳಲ್ಲಿ 4 ವಿಕೆಟ್‌ಗೆ 136 (ಅರ್ಜುನ್‌ ಹೊಯ್ಸಳ 50, ಸಿ.ಎ.ಕಾರ್ತಿಕ್‌ 37, ಲಿಯಾನ್‌ ಖಾನ್‌ 38; ಶಿವಂ ಚೌಧರಿ 27ಕ್ಕೆ3).

ಉತ್ತರ ಪ್ರದೇಶ ಸಂಸ್ಥೆ: ಮೊದಲ ಇನಿಂಗ್ಸ್‌, 100.3 ಓವರ್‌ಗಳಲ್ಲಿ 425 (ಆಕಾಶ್‌ದೀಪ್‌ ನಾಥ್‌ 37, ರಿಂಕು ಸಿಂಗ್‌ 41, ಉಪೇಂದರ್‌ ಯಾದವ್‌ 116, ಜೀಶನ್‌ ಅನ್ಸಾರಿ 97, ಯಶ್‌ ದಯಾಳ್‌ 21; ಟಿ.ಪ್ರದೀಪ 74ಕ್ಕೆ3, ಕೆ.ಸಿ.ಕಾರ್ಯಪ್ಪ 73ಕ್ಕೆ3, ಆದಿತ್ಯ ಸೋಮಣ್ಣ 62ಕ್ಕೆ2).

ಎರಡನೆ ಸೆಮಿಫೈನಲ್‌: ಛತ್ತೀಸಗಡ ಕ್ರಿಕೆಟ್‌ ಸಂಘ: ಮೊದಲ ಇನಿಂಗ್ಸ್‌, 70.1 ಓವರ್‌ಗಳಲ್ಲಿ 241.

ಗುಜರಾತ್‌ ಸಂಸ್ಥೆ: ಪ್ರಥಮ ಇನಿಂಗ್ಸ್‌, 104 ಓವರ್‌ಗಳಲ್ಲಿ 3 ವಿಕೆಟ್‌ಗೆ 399 (ಭಾರ್ಗವ್‌ ಮೆರಾಯ್‌ 91, ಕ್ಷಿತಿಜ್‌ ಪಟೇಲ್‌ ಬ್ಯಾಟಿಂಗ್‌ 175, ಪಾರ್ಥಿವ್‌ ಪಟೇಲ್‌ 98; ಅಜಯ್‌ ಮಂಡಲ್‌ 79ಕ್ಕೆ2).

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !