ಬುಧವಾರ, ಆಗಸ್ಟ್ 10, 2022
24 °C

ಅಭ್ಯಾಸ ಪಂದ್ಯ| ಭಾರತದೆದುರು ಪಂತ್ ಅರ್ಧಶತಕ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಗ್ರೇಸ್‌ ರೋಡ್ ಇಂಗ್ಲೆಂಡ್:  ಮೊಹಮ್ಮದ್ ಶಮಿ ಎಸೆತಕ್ಕೆ ಚೇತೇಶ್ವರ್ ಪೂಜಾರ ಕ್ಲೀನ್‌ಬೌಲ್ಡ್‌ ಆದರು. ಭಾರತದ ಎದುರು ಅರ್ಧಶತಕ ಹೊಡೆದ ರಿಷಭ್ ಪಂತ್ ಎಡಗೈ ಸ್ಪಿನ್ನರ್ ರವೀಂದ್ರ ಜಡೇಜ ಮೋಡಿಗೆ ಶರಣಾದರು!

ಗ್ರೇಸ್‌ ರೋಡ್‌ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಅಭ್ಯಾಸ ಪಂದ್ಯದ ಎರಡನೇ ದಿನದಾಟದ ಅಂತ್ಯಕ್ಕೆ   ಭಾರತ ತಂಡವು ಲೆಸ್ಟರ್‌ಷೈರ್ ಎದುರು 60 ರನ್‌ಗಳ ಮುನ್ನಡೆ  ಗಳಿಸಿದೆ. ಎರಡನೇ ಇನಿಂಗ್ಸ್ ಆರಂಭಿಸಿರುವ ಭಾರತ ತಂಡವು 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೇ 59 ರನ್ ಗಳಿಸಿತು. 

ಮೊದಲ ಇನಿಂಗ್ಸ್‌ನಲ್ಲಿ ಭಾರತ ತಂಡವು ಶ್ರೀಕರ್ ಭರತ್ ಅರ್ಧಶತಕದ ಬಲದಿಂದ 8 ವಿಕೆಟ್‌ಗಳಿಗೆ 246 ರನ್ ಗಳಿಸಿತು. ಅದಕ್ಕುತ್ತರವಾಗಿ ಲೀಸ್ಟರ್‌ಷೈರ್ ತಂಡವು 57 ಓವರ್‌ಗಳಲ್ಲಿ 244 ರನ್ ಗಳಿಸಿ  ಆಲೌಟ್ ಆಯಿತು. ಲೀಸ್ಟರ್‌ ತಂಡಕ್ಕೆ ರಿಷಭ್ ಪಂತ್ (76; 87ಎ, 4X14, 6X1) ಉತ್ತಮ ಕಾಣಿಕೆ ನೀಡಿದರು. ಆದರೆ, ಪೂಜಾರ ಸೊನ್ನೆ ಸುತ್ತಿದರು. ಶಮಿ ಎಸೆತದಲ್ಲಿ ಪೂಜಾರ ಔಟಾದರು. ಪಂತ್ ಆಟಕ್ಕೆ ಜಡೇಜ ಕಡಿವಾಣ
ಹಾಕಿದರು.  

ಸಂಕ್ಷಿಪ್ತ ಸ್ಕೋರ್: ಮೊದಲ ಇನಿಂಗ್ಸ್: ಭಾರತ– 60.2 ಓವರ್‌ಗಳಲ್ಲಿ 8ಕ್ಕೆ246,  ಲೆಸ್ಟರ್‌ಷೈರ್: 57 ಓವರ್‌ಗಳಲ್ಲಿ 244 (ಲೂಯಿಸ್ ಕಿಂಬರ್ 31, ಜೊಯ್ ಎವಿಸನ್ 22, ರಿಷಭ್ ಪಂತ್ 76, ರಿಷಿ ಪಟೇಲ್ 34, ರೋಮನ್ ವಾಕರ್ 34, ಮೊಹಮ್ಮದ್ ಶಮಿ 42ಕ್ಕೆ3, ಶಾರ್ದೂಲ್ ಠಾಕೂರ್ 72ಕ್ಕೆ2, ಮೊಹಮ್ಮದ್ ಸಿರಾಜ್ 46ಕ್ಕೆ2, ರವೀಂದ್ರ ಜಡೇಜ 28ಕ್ಕೆ3) ಎರಡನೇ ಇನಿಂಗ್ಸ್: ಭಾರತ– 11 ಓವರ್‌ಗಳಲ್ಲಿ ವಿಕೆಟ್ ನಷ್ಟವಿಲ್ಲದೆ 59 (ಶ್ರೀಕರ್ ಭರತ್ ಬ್ಯಾಟಿಂಗ್ 21, ಶುಭಮನ್ ಗಿಲ್ ಬ್ಯಾಟಿಂಗ್ 37) 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು