ಸೋಮವಾರ, ಜುಲೈ 26, 2021
26 °C

ಕ್ರಿಕೆಟ್‌ | ವಿಕೆಟ್‌ಕೀಪರ್‌ ಸಹಾಗೆ ಅಪ್ಪನೇ ಕೋಚ್!

ಪಿಟಿಐ Updated:

ಅಕ್ಷರ ಗಾತ್ರ : | |

Prajavani

ನವದೆಹಲಿ: ಭಾರತ ತಂಡದ ವಿಕೆಟ್‌ಕೀಪರ್–ಬ್ಯಾಟ್ಸ್‌ಮನ್ ವೃದ್ಧಿಮಾನ್ ಸಹಾ ಅವರು ಲಾಕ್‌ಡೌನ್ ಅವಧಿಯಲ್ಲಿಯೂ ತಮ್ಮ ಅಭ್ಯಾಸವನ್ನು ನಿಲ್ಲಿಸಿರಲಿಲ್ಲ. ಮನೆಯಂಗಳದಲ್ಲಿಯೇ ಕ್ಯಾಚ್‌ ಪಡೆಯುವ ಅಭ್ಯಾಸ ನಡೆಸಿದ ಸಹಾಗೆ ತಾಲೀಮು ನೀಡಿದ್ದು ಅವರ ತಂದೆ!

‘ನಾವು ವಾಸಿಸುವ ವಸತಿ ಸಮುಚ್ಚಯದಲ್ಲಿರುವ ಸೌಲಭ್ಯಗಳನ್ನು ಬಳಸಿಕೊಂಡು ಎಷ್ಟು ಸಾಧ್ಯವೋ ಅಷ್ಟು ವ್ಯಾಯಾಮಗಳನ್ನು ಮಾಡುತ್ತಿದ್ದೇನೆ. ಕೈಗಳು ಮತ್ತು ಕಣ್ಣುಗಳ ಸಮನ್ವಯ ಸಾಧಿಸಲು ಕ್ಯಾಚಿಂಗ್ ಅಭ್ಯಾಸ ಮಾಡುತ್ತಿದ್ದೆ. ಅದಕ್ಕೆ ನನ್ನ ತಂದೆ (ಪ್ರಶಾಂತ್ ಸಹಾ) ಸಹಾಯ ಮಾಡಿದರು. ನಮ್ಮ ಮನೆಯೊಳಗೆ ಸಾಫ್ಟ್‌ಬಾಲ್‌ನೊಂದಿಗೆ  ಕ್ಯಾಚ್‌ ಅಭ್ಯಾಸ ಮಾಡಿಡುತ್ತಿದ್ದರು’ಎಂದು ಸಹಾ ಹೇಳಿದ್ದಾರೆ.

‘ಲಾಕ್‌ಡೌನ್‌ಗಿಂತ ಮುನ್ನ ನಾನು ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದೆ. ಪುನಶ್ಚೇತನ ತರಬೇತಿ ಪಡೆದಿದ್ದೆ. ಗೃಹಬಂಧನದ ಸಂದರ್ಭದಲ್ಲಿ ಯಾವುದೇ ತರಹದಲ್ಲಿಯೂ ಆಟದ ಸಂಪರ್ಕ ತಪ್ಪದಂತೆ ನೋಡಿಕೊಳ್ಳಲು ಮನೆಯೊಳಗೆ ವ್ಯಾಯಾಮ ಮತ್ತಿತರ ಅಭ್ಯಾಸ ಮಾಡುವುದು ಅನಿವಾರ್ಯವಾಗಿತ್ತು. ನಮ್ಮ ವಸತಿ ಸಂಕೀರ್ಣದೊಳಗೆ ಸಂಜೆ ಹೊತ್ತಿನಲ್ಲಿ ವಾಕಿಂಗ್ ಮಾಡುವ ಅವಕಾಶವಿತ್ತು. ಅದನ್ನು ಸಮರ್ಥವಾಗಿ ಬಳಸಿಕೊಂಡೆ’ ಎಂದಿದ್ದಾರೆ.

‘ಮನೆಯಲ್ಲಿ ಕೆಲವು ವ್ಯಾಯಾಮ ಸಲಕರಣೆಗಳು ಇವೆ. ಆದರೆ ಜಿಮ್ನಾಷಿಯಂನಲ್ಲಿದ್ದಂತೆ ಇಲ್ಲ. ಆದರೂ ಇದ್ದುದರಲ್ಲಿಯೇ ಪ್ರತಿದಿನ ಒಂದು ನಿಗದಿತ ಸಮಯದಲ್ಲಿ ಅಭ್ಯಾಸ ಮಾಡುತ್ತಿದ್ದೆ’ ಎಂದಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು