ಲಖನೌ: ಲಖನೌ ನೀಡಿದ್ದ 165 ರನ್ಗಳ ಸಾಧಾರಣ ಗುರಿ ಬೆನ್ನತ್ತಿದ್ದ ಗುಜರಾತ್ ತಂಡ ಜೋಸ್ ಬಟ್ಲರ್ ಮತ್ತು ನಾಯಕ ಶುಭಮನ್ ಗಿಲ್ ಅವರ ಅಮೋಘ ಬ್ಯಾಟಿಂಗ್ ನೆರವಿನಿಂದ ಕೇವಲ 16.4 ಓವರ್ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗುರಿ ಮುಟ್ಟುವ ಮೂಲಕ ಗೆಲುವಿನ ನಗೆ ಬೀರಿದೆ.

ಅಭಿಷೇಕ್ ಶರ್ಮಾ 15 ರನ್ಗಳಿಗೆ ಔಟಾದ ಬಳಿಕ ಒಂದಾದ ಶುಭಮನ್ ಗಿಲ್(56) ಮತ್ತು ಜೋಸ್ ಬಟ್ಲರ್(60) ತಂಡವನ್ನು ಗೆಲುವಿನ ಸನಿಹಕ್ಕೆ ತಂದು ನಿಲ್ಲಿಸಿದರು. ವಾಷಿಂಗ್ಟನ್ ಸುಂದರ್ ಮತ್ತು ರಾಹುಲ್ ತೆವಾಟಿಯಾ ತಂಡವನ್ನು ಗೆಲುವಿನ ದಡ ದಾಟಿಸಿದರು.

ಲಖನೌ ತಂಡಕ್ಕೆ ಯಾವುದೇ ಹಂತದಲ್ಲೂ ಗುಜರಾತ್ಗೆ ತಡೆ ಹಾಕಲು ಸಾಧ್ಯವಾಗಲಿಲ್ಲ. ಟೂರ್ನಿಯಲ್ಲಿ ಎರಡನೇ ಜಯ ದಾಖಲಿಸಿದ ಗುಜರಾತ್ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿತು.

ಪ್ರಸಿದ್ಧ ಕೃಷ್ಣ ಅಮೋಘ ಬೌಲಿಂಗ್

ಟಾಸ್ ಗೆದ್ದ ಗುಜರಾತ್ ಜೈಂಟ್ಸ್ ತಂಡವು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಗುಜರಾತ್ನ ಕರಾರುವಾಕ್ ಬೌಲಿಂಗ್ ಎದುರು ಆರಂಭದಿಂದಲೂ ರನ್ ಗಳಿಸಲು ಪರದಾಡಿದ ಲಖನೌ ಬ್ಯಾಟರ್ಗಳು 20 ಓವರ್ ಅಂತ್ಯಕ್ಕೆ 7 ವಿಕೆಟ್ ಕಳೆದುಕೊಂಡು 164 ರನ್ ಗಳಿಸಲಷ್ಟೇ ಶಕ್ತರಾದರು. ಆರಂಭಿಕ ಆಟಗಾರ ಏಡೆನ್ ಮರ್ಕರಂ ಗಳಿಸಿದ 30 ರನ್ ವೈಯಕ್ತಿಕ ಗರಿಷ್ಠ ಮೊತ್ತವಾಗಿದೆ.

ಉಳಿದಂತೆ, ನಿಕೊಲಸ್ ಪೂರನ್ 19, ಅಬ್ದುಲ್ ಸಮದ್ 18 ಮತ್ತು ಮುಕುಲ್ ಚೌಧರಿ 18, ಜಾರ್ಜ್ ಲಿಂಡೆ 16 ರನ್ ಗಳಿಸಿದರು.

ಗುಜರಾತ್ ಪರ ಪ್ರಸಿದ್ಧ ಕೃಷ್ಣ 28 ರನ್ ನೀಡಿ 4 ವಿಕೆಟ್ ಕಬಳಿಸುವ ಮೂಲಕ ಅತ್ಯುತ್ತಮ ಬೌಲರ್ ಎನಿಸಿದರು. ಅಶೋಕ್ ಶರ್ಮಾ ಸಹ 2 ವಿಕೆಟ್ ಪಡೆದರು.

ಸಂಕ್ಷಿಪ್ತ ಸ್ಕೋರು: ಲಖನೌ ಸೂಪರ್ ಜೈಂಟ್ಸ್: 20 ಓವರ್ಗಳಲ್ಲಿ 8ಕ್ಕೆ164 (ಏಡನ್ ಮರ್ಕರಂ 30, ರಿಷಭ್ ಪಂತ್ 18, ನಿಕೊಲಸ್ ಪೂರನ್ 19, ಅಬ್ದುಲ್ ಸಮದ್ 18, ಮುಕುಲ್ ಚೌಧರಿ 18, ಜಾರ್ಜ್ ಲಿಂಡೆ 16, ಮೊಹಮ್ಮದ್ ಶಮಿ ಔಟಾಗದೇ 12, ಅಶೋಕ್ ಶರ್ಮಾ 32ಕ್ಕೆ2, ಪ್ರಸಿದ್ಧಕೃಷ್ಣ 28ಕ್ಕೆ4)

ಗುಜರಾತ್ ಟೈಟನ್ಸ್: 18.4 ಓವರ್ಗಳಲ್ಲಿ 3 ವಿಕೆಟ್ಗಳಿಗೆ 165 (ಸಾಯಿ ಸುದರ್ಶನ್ 15, ಶುಭಮನ್ ಗಿಲ್ 56, ಜೋಸ್ ಬಟ್ಲರ್ 60, ವಾಷಿಂಗ್ಟನ್ ಸುಂದರ್ ಔಟಾಗದೇ 21, ರಾಹುಲ್ ತೆವಾಟಿಯಾ ಔಟಾಗದೇ 10, ಮೊಹಮ್ಮದ್ ಶಮಿ 36ಕ್ಕೆ1, ಪ್ರಿನ್ಸ್ ಯಾದವ್ 31ಕ್ಕೆ1, ದಿಗ್ವೇಶ್ ಸಿಂಗ್ ರಾಠಿ 31ಕ್ಕೆ1)

ಫಲಿತಾಂಶ:ಗುಜರಾತ್ ಟೈಟನ್ಸ್ಗೆ 7 ವಿಕೆಟ್ ಜಯ. ಪಂದ್ಯದ ಆಟಗಾರ: ಪ್ರಸಿದ್ಧ ಕೃಷ್ಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.