ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

IPL 2022- RCB vs LSG| ಅಗ್ರಸ್ಥಾನದ ಮೇಲೆ ಆರ್‌ಸಿಬಿ–ಲಖನೌ ಕಣ್ಣು

ಸಮಾನ ಸಾಮರ್ಥ್ಯ ಪ್ರದರ್ಶಿಸಿರುವ ಉಭಯ ತಂಡಗಳು: ಬ್ಯಾಟರ್‌ಗಳ ಮೇಲೆ ಭರವಸೆ
Last Updated 18 ಏಪ್ರಿಲ್ 2022, 16:12 IST
ಅಕ್ಷರ ಗಾತ್ರ

ನವಿ ಮುಂಬೈ: ದಿನೇಶ್ ಕಾರ್ತಿಕ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಅವರ ಫಿನಿಶಿಂಗ್ ಸಾಮರ್ಥ್ಯ; ಕೆ.ಎಲ್‌.ರಾಹುಲ್ ಅವರ ಬ್ಯಾಟಿಂಗ್ ಸೊಬಗು ಮತ್ತು ಕ್ವಿಂಟನ್ ಡಿ ಕಾಕ್ ಹೊಡೆತಗಳ ವೈಭವ...

ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್‌) ಕ್ರಿಕೆಟ್ ಟೂರ್ನಿಯಲ್ಲಿ ಮಂಗಳವಾರ ನಡೆಯಲಿರುವ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಮತ್ತು ಲಖನೌ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಹಣಾಹಣಿ ಈ ನಾಲ್ವರ ಅಮೋಘ ಫಾರ್ಮ್‌ನಿಂದಾಗಿ ಕುತೂಹಲಕ್ಕೆ ಕಾರಣವಾಗಿದೆ.

ಡೆಲ್ಲಿ ಕ್ಯಾಪಿಟಲ್ಸ್ ಎದುರು ಗೆದ್ದ ಆರ್‌ಸಿಬಿ ಮತ್ತು ಮುಂಬೈ ಇಂಡಿಯನ್ಸ್ ಎದುರಿನ ಪಂದ್ಯದಲ್ಲಿ ಜಯ ಗಳಿಸಿರುವ ಲಖನೌ ಭರವಸೆಯಿಂದ ಮಂಗಳವಾರ ಕಣಕ್ಕೆ ಇಳಿಯಲಿವೆ. ಎರಡೂ ತಂಡಗಳು ಈ ವರೆಗೆ ಸಮಬಲದ ಸಾಮರ್ಥ್ಯ ಪ್ರದರ್ಶಿಸಿವೆ. ಮುಂದಿನ ಪಂದ್ಯದಲ್ಲಿ ಜಯ ಗಳಿಸಿ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನದತ್ತ ಸಾಗಲು ತಂಡಗಳು ಪ್ರಯತ್ನಿಸಲಿವೆ.

ಆರ್‌ಸಿಬಿ ತಂಡದಲ್ಲಿ ಉತ್ತಮ ಫಿನಿಷರ್‌ಗಳು ಇದ್ದರೂ ಅಗ್ರ ಕ್ರಮಾಂಕದ ಬ್ಯಾಟರ್‌ಗಳು ವೈಫಲ್ಯ ಅನುಭವಿಸುತ್ತಿದ್ದಾರೆ. ನಾಯಕ ಫಫ್ ಡುಪ್ಲೆಸಿ ಮತ್ತು ಮಾಜಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಮಿಂಚಲು ಸಾಧ್ಯವಾಗುತ್ತಿಲ್ಲ. ಕಾರ್ತಿಕ್ ಮತ್ತು ಮ್ಯಾಕ್ಸ್‌ವೆಲ್ ಉತ್ತಮ ಫಾರ್ಮ್‌ನಲ್ಲಿದ್ದಾರೆ. ಬೌಲಿಂಗ್ ವಿಭಾಗದಲ್ಲಿ ಜೋಶ್ ಹ್ಯಾಜಲ್‌ವುಡ್ ಮಿಂಚುತ್ತಿದ್ದು ಅವರಿಗೆ ವನಿಂದು ಹಸರಂಗ ಮತ್ತು ಹರ್ಷಲ್ ಪಟೇಲ್ ಅವರ ಬಲವಿದೆ.

ರಾಹುಲ್, ಕ್ವಿಂಟನ್ ಮೇಲೆ ಭರವಸೆ

ಲಖನೌ ತಂಡದ ನಾಯಕ ಕೆ.ಎಲ್‌.ರಾಹುಲ್ ಮತ್ತು ವಿಕೆಟ್ ಕೀಪರ್ ಕ್ವಿಂಟನ್ ಡಿ ಕಾಕ್ ಯಾವುದೇ ಬೌಲರ್‌ಗಳನ್ನು ಎದುರಿಸುವ ಸಾಮರ್ಥ್ಯ ಹೊಂದಿದ್ದಾರೆ. ಯುವ ಆಟಗಾರ ಆಯುಷ್ ಬದೋನಿ, ಭರ್ಜರಿ ಹೊಡೆತಗಳ ದೀಪಕ್ ಹೂಡಾ ಮತ್ತು ಆಲ್‌ರೌಂಡರ್ ಕೃಣಾಲ್ ಪಾಂಡ್ಯ ಅವರ ಬಲವೂ ತಂಡಕ್ಕಿದೆ. ಆವೇಶ್ ಖಾನ್ ಮತ್ತು ರವಿ ಬಿಷ್ಣೋಯಿ ಬೌಲಿಂಗ್‌ನಲ್ಲಿ ತಂಡದ ಕೈ ಹಿಡಿಯುತ್ತಿದ್ದಾರೆ.

ನಾಯಕರ ಬಲಾಬಲ

ಆಟಗಾರ ತಂಡ ಪಂದ್ಯ ರನ್‌ ಗರಿಷ್ಠ ಶತಕ ಅರ್ಧಶತಕ ಬೌಂಡರಿ ಸಿಕ್ಸರ್
ಕೆ.ಎಲ್‌.ರಾಹುಲ್ ಲಖನೌ 6 235 103* 1 1 18 10
ಫಫ್‌ ಡುಪ್ಲೆಸಿ ಬೆಂಗಳೂರು 6 154 88 1 12 7

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT