ಊಟ ಬರುವವರೆಗೂ ಆಟ ಆಡಿ!

7

ಊಟ ಬರುವವರೆಗೂ ಆಟ ಆಡಿ!

Published:
Updated:

ಬೆಂಗಳೂರು: ಶನಿವಾರ ಉದ್ಯಾನನಗರಿಯ ಸಂಚಾರ ದಟ್ಟಣೆಯ ಬಿಸಿ ಆಲೂರಿನಲ್ಲಿ ನಡೆಯುತ್ತಿರುವ ಭಾರತ ಎ ಮತ್ತು ಆಸ್ಟ್ರೇಲಿಯಾ ‘ಎ’ ನಡುವಣ ’ಟೆಸ್ಟ್‌’ ಕ್ರಿಕೆಟ್ ಪಂದ್ಯಕ್ಕೂ ತಟ್ಟಿತು. ಇದರಿಂದಾಗಿ ಪಂದ್ಯದ ಊಟದ ವಿರಾಮವನ್ನು ಮುಂದೂಡಲಾಯಿತು.

ಹೌದು;  ಆಸ್ಟ್ರೇಲಿಯಾ ಎ ತಂಡವು ಮೊದಲು ಬ್ಯಾಟಿಂಗ್ ಮಾಡುವ ಸಂದರ್ಭದಲ್ಲಿ ಈ ಬೆಳವಣಿಗೆ ನಡೆಯಿತು. 11.30ರಿಂದ 12.10ರವರೆಗೆ ಊಟದ ವಿರಾಮ ಇತ್ತು. ಅದರೆ, 11.15 ಆದರೂ ಊಟವೇ ಬಂದಿರಲಿಲ್ಲ. ನಗರದ ಪಂಚತಾರಾ ಹೋಟೆ್‌ಲ್‌ನಿಂದ ತಂಡಗಳಿಗೆ ಊಟ ತರುತ್ತಿದ್ದ ಗಾಡಿಯು ಸಂಚಾರ ದಟ್ಟಣೆಯಲ್ಲಿ ಸಿಲುಕಿತ್ತು. ಇದರಿಂದಾಗಿ ತಂಡಗಳಿಗೆ ಅಟವನ್ನು ಮುಂದುವರಿಸುವಂತೆ ಸೂಚಿಸಲಾಯಿತು. ಊಟದ ವಿರಾಮವನ್ನು 12 ರಿಂದ 12.40ರವರೆಗೆ ನೀಡಲಾಯಿತು.  ಊಟದ ಗಾಡಿಯು 11.50ಕ್ಕೆ ಕ್ರೀಡಾಂಗಣ ತಲುಪಿತು.

ಬೆಂಗಳೂರು ನಗರದಿಂದ ಸುಮಾರು 25 ಕಿ.ಮೀ ದೂರದಲ್ಲಿ ಆಲೂರು ಕ್ರೀಡಾಂಗಣ ಇದೆ.

ಬೆಳಿಗ್ಗೆ ಟಾಸ್ ಗೆದ್ದ ಆಸ್ಟ್ರೇಲಿಯಾ ತಂಡವು ಭೋಜನ ವಿರಾಮಕ್ಕೆ 37.5 ಓವರ್‌ಗಳಲ್ಲಿ 3 ವಿಕೆಟ್‌ಗಳಿಗೆ 128 ರನ್‌ ಗಳಿಸಿತ್ತು.

ಬರಹ ಇಷ್ಟವಾಯಿತೆ?

 • 0

  Happy
 • 1

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !